ಹುಬ್ಬಳ್ಲಿ –
ಒಂದು ಗ್ರಾಮದಲ್ಲಿ ಚುನಾವಣೆ ನಡೆಯದಿದ್ದರೂ ಕೂಡಾ ಮೂರು ಗ್ರಾಮಗಳಲ್ಲಿನ ಗ್ರಾಮ ಪಂಚಾಯತ ಸದಸ್ಯರನ್ನು ಮುಂದಿಟ್ಟುಕೊಂಡು ಮೀಸಲಾತಿಯನ್ನು ಪ್ರಕಟ ಮಾಡಿ ಅಧ್ಯಕ್ಷ ಉಪಾಧ್ಯಕ್ಷ ರಾಗಿದ್ದ ಹುಬ್ಬಳ್ಳಿ ತಾಲ್ಲೂಕಿನ ಕಟ್ನೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ರನ್ನು ಧಾರವಾಡ ಹೈಕೊರ್ಟ್ ಅನರ್ಹಗೊಳಿಸಿ ಆದೇಶವನ್ನು ಹೊರಡಿಸಿದೆ.

ಹುಬ್ಬಳ್ಳಿ ತಾಲ್ಕೂಕಿನ ಕಟ್ನೂರು ಗ್ರಾಮ ಪಂಚಾಯತಿಯ ಒಟ್ಟ 14 ಸ್ಥಾನಗಳ ಪೈಕಿ ಬುಡರಸಿಂಗಿ 3, ಮಾವನೂರು 2,ಗಿರಿಯಾಲ 4 ಹೀಗೆ ಮೂರು ಗ್ರಾಮಗಳಗಿ ಮಾತ್ರ ಗ್ರಾಮ ಪಂಚಾಯತ ಚುನಾವಣೆ ನಡೆದಿತ್ತು. ಮೀಸಲಾತಿಯನ್ನು ಸರಿಯಾಗಿ ನಿಗದಿ ಮಾಡದ ಹಿನ್ನಲೆಯಲ್ಲಿ ಕಟ್ನೂರು ಗ್ರಾಮಸ್ಥರು ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದರು.

ಇವೆಲ್ಲದರ ನಡುವೆ ಈ ಒಂದು ಗ್ರಾಮವನ್ನು ಬಿಟ್ಟು ಊಳಿದ ಮೂರು ಗ್ರಾಮಗಳಿಗೆ ಚುನಾವಣೆ ಮಾಡಿ ನಂತರ ಮೀಸಲಾತಿಯನ್ನು ಘೋಷಣೆ ಮಾಡಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯನ್ನು ಮಾಡಿದ್ದರು. ಈ ಕುರಿತಂತೆ ಗ್ರಾಮಸ್ಥರು ಕೂಡಾ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದರು. ಇದಕ್ಕೂ ಸ್ಪಂದನೆ ಸಿಕ್ಕಿರಲಿಲ್ಲ ಇದನ್ನೇಲ್ಲವನ್ನು ಗಮನಿಸಿದ ಗ್ರಾಮದ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಲಕ್ಷ್ಮೀ ಚಂದ್ರು ಸಂಕನ್ನವರ ನೇತ್ರತ್ವದಲ್ಲಿ ಐದು ಜನರು ಧಾರವಾಡ ಹೈಕೊರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ದ್ವೀಸದಸ್ಯ ಪೀಠದ ನ್ಯಾಯಮೂರ್ತಿಗಳು ಈಗಷ್ಟೇ ಆಯ್ಕೆಗೊಂಡ ಕಟ್ನೂರು ಗ್ರಾಮ ಪಂಚಾಯತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅನರ್ಹಗೊಳಿಸಿ ಫೇಬ್ರುವರಿ 19 ರ ಒಳಗಾಗಿ ಕಟ್ನೂರು ಗ್ರಾಮದ ಐದು ಸ್ಥಾನಗಳಿಗೆ ಚುನಾವಣೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಐದು ಸ್ಥಾನಗಳಿಗೆ ಚುನಾವಣೆ ನಡೆಯದಿದ್ದರೂ ಯಾವುದಕ್ಕೂ ಸ್ಪಂದಿಸದ ಅಧಿಕಾರಿಗಳ ಕಾರ್ಯವೈಖರಿ ವಿರುದ್ದ ನ್ಯಾಯಾಲಯ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಇನ್ನೂ ಕಟ್ಟೂರು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಲಕ್ಷ್ಮೀ ಚಂದ್ರು ಸಂಕನ್ನವರ, ಪರ್ವತಗೌಡ ಪಾಟೀಲ, ಹಜರತಸಾಬ ಮುಲ್ಲಾನವರ,ಶಾಂತವ್ವ ಪಾಟೀಲ ಸೇರಿದಂತೆ ಐದು ಜನರು ಹೈಕೊರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಕೊನೆಗೂ ಗ್ರಾಮಸ್ಥರಿಗೆ ಗೆಲುವಾಗಿದೆ.