ಬೆಂಗಳೂರು –

ವಸ್ತ್ರ ಸಂಹಿತೆ ಜಾರಿಗೆ ಬಂದು
ಕಾಲೇಜು ಮಕ್ಕಳಿಗೆ ಮುಳುವಾಯಿತು
ರಾಜಕೀಯ ದಾಳಕೆ ಬಲಿಯಾದರು
ಮಕ್ಕಳ ಒಗ್ಗಟ್ಟು ಮುರಿದೋಯಿತು IIಪII
ಮುಸ್ಲಿಂ, ಹಿಂದೂ,ಸಿಖ್ ಬೌದ್ಧರು
ಎಲ್ಲರೂ ವಿದ್ಯಾರ್ಥಿಗಳು ಅಲ್ವೇನಕ್ಕ
ಕೇಸರಿ ಕಪ್ಪು ಜಗಳವೇತಕೆ
ಶಾಂತಿಯ ಬಾವುಟ ಹಾರಿಸಿರಣ್ಣ IIಪII
ಹಿಜಾಬು ಶಾಲು ಯಾವುದು ಬೇಡ
ಕಲಿಯಲು ಪುಸ್ತಕ ಲೇಖನಿ ಸಾಕು
ಙ್ಞಾನಕ್ಕೆ ಮಹತ್ವ ನೀಡೋಣ
ಮತೀಯ ಕಲಹ ಓಡಿಸೋಣ IIಪII
ಪುಂಡ ಪೋಕರಿ ಅಂಡಲೆಯಲು
ಹಿಜಾಬು ಕಾರಣ ಸಾಕಣ್ಣ
ಶಾಲೆಗೆ ಬರುವುದು ಓದಲಿಕೆ ಕಾಣ
ಬೀದಿಗೆ ಬಂದು ಬೀಳದಿರಣ್ಣ IIಪII
ತಮ್ಮ ಧರ್ಮವೇ ಮೇಲು ಎಂದು
ಸಾಧಿಸಬೇಡಿ ನಾಯಕರೇ
ಭಾರತ ಇದು ಹೂವಿನ ತೋಟ
ಎಲ್ಲಾ ಹೂಗಳು ಬೇಕಣ್ಣ IIಪII
ಸಮವಸ್ತ್ರಕೆ ರಾಜಕೀಯ ಬೆರೆಸಿ
ವಿಷಬೀಜ ಬಿತ್ತಬೇಡಿ ಮಕ್ಕಳಲ್ಲಿ
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಭಾವೈಕ್ಯತೆಯ ಬೆಳೆಸಿರಣ್ಣ IIಪII
ಕೇಸರಿ ಇರಲಿ ಹಿಜಾಬೇ ಇರಲಿ
ಎಲ್ಲಾ ನಿಮ್ಮ ಮನೆಯೊಳಗಿರಲಿ
ಮನದಲಿ ಶಾಂತಿ ಮುಖದಲ್ಲಿ ಕಾಂತಿ
ಬಿಡಿ ಎಲ್ಲಾ ಈ ಧರ್ಮದ ಭ್ರಾಂತಿ IIಪII
✍️ ಕೆಮರಾ
ಶ್ರೀನಿವಾಸಪುರ