ಹುಬ್ಬಳ್ಳಿ –
ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ನ್ನು ಬಂಧನ ಮಾಡಿದ್ದಾರೆ. ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದ ನಾಲ್ಕು ಪ್ರಕರಣಗಳನ್ನು ಗಂಭೀರವಾಗಿ ತಗೆದುಕೊಂಡ ಕೇಶ್ವಾಪೂರ ಪೊಲೀಸರು ಕಾರ್ಯಾಚರಣೆ ಮಾಡಿ ಕಳ್ಳರ ಗ್ಯಾಂಗ್ ಗೆ ಎಡೆ ಮೂರಿ ಕಟ್ಟಿದ್ದಾರೆ. ಹುಬ್ಬಳ್ಳಿ ಯಲ್ಲಿ ಕಳ್ಳತನ ಮಾಡಿ ಅತ್ತ ಬಾಗಲಕೋಟೆ ಯಲ್ಲೂ ಕೈಚಳಕ ತೋರಿದ್ದವರನ್ನು ವಶಕ್ಕೆ ತಗೆದು ಕೊಂಡು ಅಪಾರ ಪ್ರಮಾಣದಲ್ಲಿ ಹಣ ಬಂಗಾರ ಸೇರಿದಂತೆ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಬೇಧಿಸಿ ದ್ದಾರೆ.
ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ,ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಪ್ರಕರಣ ಗಳು,ಹಾಗೇ ಬಾಗಲಕೋಟೆ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಪ್ರಕರಣವನ್ನು ಈ ಒಂದು ಆರೋಪಿಗಳಿಂದ ಕೇಶ್ವಾಪೂರ ಪೊಲೀಸರು ಬೇಧಿಸಿದ್ದಾರೆ. ಹುಬ್ಬಳ್ಳಿ ಧಾರವಾಡ,ಬೆಳಗಾವಿ,ನಿಪ್ಪಾಣಿ,ಸಂಕೇಶ್ವರ,ಬಾಗಲಕೋಟೆ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದ ವಿಚಾರವನ್ನು ಆರೋಪಿಗಳಿಂದ ಭೇಧಿಸಿದ್ದಾರೆ ಪೊಲೀಸ್ ಆಯುಕ್ತರ ಸೂಚನೆಯಲ್ಲಿ ಕೇಶ್ವಾ ಪೂರ ಪೊಲೀಸ್ ಠಾಣೆ ಇನ್ಸ್ಪೇಕ್ಟರ್ ಜಗದೀಶ್ ಹಂಚಿನಾಳ ಪಿಎಸ್ಐ ಸದಾಶಿವ ಕಾನಟ್ಟಿ ಸೇರಿ ದಂತೆ ಹಲವರು ನೇತ್ರತ್ವದಲ್ಲಿ ಈ ಒಂದು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಇನ್ನೂ ಈ ಒಂದು ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಕೆ ವಿ ಚಂದಾವಕರ ಆರ್ ಎನ್ ಗುಡದರಿ,ಸಿಬ್ಬಂದಿಗಳಾದ ಎಮ್ ಡಿ ಕಾಲವಾಡ,ಕೃಷ್ಣಾ ಕಟ್ಟಿಮನಿ,ಆನಂದ ಪೂಜಾರ ವಿಠ್ಠಲ ಮಾದರ,ಎಫ್ ಎಸ್ ರಾಗಿ,ಸಿ ಕೆ ಲಮಾಣಿ, ಹೆಚ್ ಆರ್ ರಾಮಾಪೂರ,ಎಸ್ ಎಸ್ ಕರೆಯಂಕ ಣ್ಣನವರ,ಎಮ್ ಆರ್ ಬಾಳಿಗೀಡದ,ಸುನೀಲ ಪೂಜಾರಿ,ಎಫ್ ಹೆಚ್ ನಧಾಪ್,ಮಲ್ಲಿಕಾರ್ಜುನ ಚಿಕ್ಕಮಠ,ನಿಂಗಪ್ಪ,ಅಶೋಕ ಕಮತರ, ಮಲ್ಲಿಕಾ ರ್ಜುನ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು,
ಇನ್ನೂ ಕೇಶ್ವಾಪೂರ ಪೊಲೀಸ್ ಠಾಣೆಯ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ್ದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.ಬಂಧಿತರಿಂದ 91 ಗ್ರಾಂ ಬಂಗಾರ ಆಭರಣ,1 ಕೆಜಿ 75 ಗ್ರಾಂ ಬೆಳ್ಳಿ,4 ಕೆಜಿ ಬೆಳ್ಳಿ,8 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಕಳ್ಳತನಕ್ಕೆ ಬಳಕೆ ಮಾಡಿದ್ದ ಕಾರೊಂದನ್ನು ವಶಪಡಿಸಿಕೊಂಡಿದ್ದು ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.