ಹುಬ್ಬಳ್ಳಿ –
ಕಾಶ್ಮೀರದ ಉಗ್ರಹ ಅಟ್ಟಹಾಸ ಖಂಡಿಸಿದ ಶ್ರೀಗಂಧ ಶೇಟ್ – ಘಟನೆಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿದ ಕೆಜಿಪಿ ಗ್ರೂಪ್ ಅಧ್ಯಕ್ಷ ಶ್ರೀಗಂಧ ಶೇಟ್…..
ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರಹ ಅಟ್ಟಹಾಸಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು ಇನ್ನೂ ಈ ಒಂದು ಘಟನೆಯನ್ನು ಹುಬ್ಬಳ್ಳಿಯ ಕೆಜಿಪಿ ಗ್ರೂಪ್ ಕೂಡಾ ಖಂಡಿಸಿದೆ.ಹೌದು ಕೆಜಿಪಿ ಗ್ರೂಪ್ ಆಫ್ ಕಂಪನಿಯ ಮಾಲೀಕರಾಗಿರುವ ಮತ್ತು ಕೆಜಿಪಿ ಫೌಂಡೇಶನ್ ಅಧ್ಯಕ್ಷರಾಗಿರುವ ಶ್ರೀಗಂಧ ಶೇಟ್ ಅವರು ಘಟನೆ ಯನ್ನು ಖಂಡಿಸಿದ್ದಾರೆ.ಪ್ರವಾಸಿಗರ ಸ್ವರ್ಘ ತಾಣವಾ ಗಿರುವ ಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದನ್ನು ಖಂಡಿಸಿದ್ದಾರೆ
2019ರ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ ಪ್ರವಾಸಕ್ಕೆ ತೆರಳಿದ್ದ 28ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ವಿಚಾರ ತಿಳಿದು ನೋವಾಗಿದ್ದು ಮೃತರಾದವರಿಗೆ ಸಂತಾಪವನ್ನು ಸೂಚಿಸಿ ಸದಸ್ಯರನ್ನು ಕಳೆದುಕೊಂಡಿ ರುವ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ
ಇನ್ನೂ ರಾಜ್ಯದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದ ಪರವಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತೆರಳಿದ್ದು ಒಳ್ಳೇಯದು ಕೆಜಿಪಿ ಗ್ರೂಪ್ ಆಫ್ ಕಂಪನಿಯಿಂದ ಶುಭವಾಗಲಿ ಎಂದುಕೆಜಿಪಿ ಫೌಂಡೇಶನ್ ಅಧ್ಯಕ್ಷರಾದ ಶ್ರೀಗಂಧ ಶೇಟ್ ಹೇಳಿದ್ದಾರೆ.ಉಗ್ರರನ್ನು ಕೇಂದ್ರ ಸರ್ಕಾರ ಕೂಡಲೇ ಕಾರ್ಯಾಚರಣೆ ಮಾಡಿ ಮಟ್ಟಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶ್ರೀಗಂಧ ಶೇಟ್ ಅವರು ಒತ್ತಾಯಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……