ಸುರತ್ಕಲ್ –
ಶಿಕ್ಷಕಿಯೊಬ್ಬರು ಶಾಲೆಗೆ ಬರುತ್ತಿದ್ದ ಸಮಯದಲ್ಲಿ ಅಪರಿಚಿತ ಯುವಕನೊಬ್ಬ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಶಾಲೆಯನ್ನು ಮುಗಿಸಿ ಕೊಂಡು ತಮ್ಮ ಪಾಡಿಗೆ ಶಿಕ್ಷಕಿ ರಸ್ತೆ ಪಕ್ಕದಲ್ಲಿ ಹೊರಟಿದ್ದರು.ಈ ಒಂದು ಸಮಯದಲ್ಲಿ ಗಮನ ವನ್ನು ಬೇರೆ ಕಡೆಗೆ ಸೆಳೆದು ಶಿಕ್ಷಕಿಯ ಕೊರಳಿ ನಲ್ಲಿದ್ದ ಚೈನ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

ಹಾಡಹಗಲೇ ಶಿಕ್ಷಕಿ ವಿದ್ಯಾರವರ ಸರವನ್ನು ಕಳ್ಳತನ ಮಾಡಿ ಶ್ರೇಯಸ್ ಪರಾರಿಯಾಗಿದ್ದನು.ಅತ್ತ ಕಳ್ಳತನ ಆಗುತ್ತಿದ್ದಂತೆ ಇತ್ತ ಕಾರ್ಯಾಚರಣೆ ಆರಂಭ ಮಾಡಿದ ಸುರತ್ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಕಂಬಿ ಎಣಿಸುವಂತೆ ಮಾಡಿದ್ದಾರೆ.

ಬಂಧಿತನು ಬಿಸಿಎ ಪದವೀಧರ ಚಿಕ್ಕಮಗಳೂರಿನ ಕೆ.ಎಸ್.ಶ್ರೇಯಸ್ (24) ಆರೋಪಿಯ ಆಗಿದ್ದಾನೆ ಅಲ್ಲದೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಪುತ್ರನಾಗಿದ್ದಾನೆ

ಸುರತ್ಕಲ್ ನ ಶಾಲೆಯ ಶಿಕ್ಷಕಿಯೊಬ್ಬರು ಮಧ್ಯಾಹ್ನ 1.30 ರ ಸುಮಾರಿಗೆ ಶಾಲೆಯಿಂದ ಹೊರಟಿದ್ದ ಸಮಯದಲ್ಲಿ ಈ ಒಂದು ಘಟನೆ ನಡೆದಿತ್ತು. ವಿದ್ಯಾ ದಾಯಿನಿ ಬಳಿಯ ಅಂಡರ್ ಪಾಸ್ ಬಳಿ ಕಳ್ಳತನ ಮಾಡಲಾಗಿತ್ತು.
ಸ್ಥಳೀಯ ಸಿಸಿ ಟಿವಿ ಚಿತ್ರ ಅಧರಿಸಿ ಸಮೀಪದಲ್ಲೇ ಬೈಕ್ ಶೋರೂಂ ಬಳಿ ನಿಂತಿದ್ದ ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸುಲಿಗೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.ಸುರತ್ಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ ನೇತೃತ್ವದಲ್ಲಿ ಸುರತ್ಕಲ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ

ಕೊನೆಗೂ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.ಇನ್ನೂ ಮಾಂಗಲ್ಯ ಸರ ಕದ್ದು ಅಂದರ್ ಆಗಿದ್ದಾನೆ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಗ. ಚಿಕ್ಕಮಗಳೂರು ಮಾಜಿ ಜಿ.ಪಂ ಅಧ್ಯಕ್ಷೆ ಮಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪೊಲೀಸರಿಂದ ಆರೋಪಿ ಯನ್ನು ಬಂಧನ ಮಾಡಲಾಗಿದೆ
ಶಿಕ್ಷಕಿ ವಿದ್ಯಾರವರ 16 ಗ್ರಾಂ ತೂಕದ ಚಿನ್ನದ ಸರ ಕದ್ದಿದ್ದನು ಶ್ರೇಯಸ್.ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢಶಾಲೆಯ ಶಿಕ್ಷಕಿ ವಿದ್ಯಾ ಅವರ ಸರ ಕಳ್ಳತನ ಆಗಿತ್ತು.ಪೊಲೀಸರ ಬಲೆಗೆ ಬೀಳುತ್ತಲೇ ತಾಯಿ ಜೊತೆ ಇರುವ ಆರೋಪಿಯ ಫೋಟೋ ವೈರಲ್ ಆಗಿದೆ.ನನ್ನ ಕೆಲವೊಂದು ವಿಚಾರಗಳ ಕಾನೂನು ಸಲಹೆಗಾರ ಎಂಬ ಫೋಟೋ ವೈರಲ್ ಆಗಿದೆ. ಮಗನನ್ನ ಜೊತೆ ನಿಲ್ಲಿಸಿಕೊಂಡು ಕಾನೂನು ಸಲಹೆ ಗಾರ ಎಂದು ಬರೆದುಕೊಂಡಿದ್ದಾರೆ ಮಾಜಿ ಅಧ್ಯಕ್ಷೆ.