ಹುಬ್ಬಳ್ಳಿ…
ನಾಲ್ಕು ದಿನದ ಹಿಂದೆ ಕಿಡ್ನ್ಯಾಪ್ ಆಗಿದ್ದ ಮಗವೊಂದು ಇಂದು ಶವವಾಗಿ ಪತ್ತೆಯಾಗಿದೆ. ಹೌದು ಇಂಥದೊಂದು ಘಟನೆ ಹುಬ್ಬಳ್ಳಿಯ ಭಾರತ ನಗರದಲ್ಲಿ ನಡೆದಿದೆ.

ನಾಲ್ಕು ದಿನಗಳ ಹಿಂದೆ 5 ವರ್ಷದ ಶ್ರೇಯಾ ಎಂಬ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಬಾಲಕಿಯ ಪೋಷಕರು ದೂರನ್ನು ನೀಡಿದ್ದರು.
ದೂರು ನೀಡಿ ನಾಲ್ಕು ದಿನಗಳ ನಂತರ ಮಗು ಇಂದು ಶವವಾಗಿ ಪತ್ತೆಯಾಗಿದೆ.ಇಂದು ಪಕ್ಕದ ಮನೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಹುಬ್ಬಳ್ಳಿಯ ಭಾರತ ನಗರದಲ್ಲಿ ಈ ಒಂದು ಘಟನೆ ನಡೆದಿದೆ.5 ವರ್ಷದ ಶ್ರೇಯಾ ಶವವಾಗಿ ಪತ್ತೆಯಾದ ಬಾಲಕಿಯಾಗಿದ್ದಾಳೆ.ಪಕ್ಕದ ಮನೆಯ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.ಹನುಮಂತಪ್ಪ ಗಾಳಪ್ಪನವರ್ ಪುತ್ರಿ ಶ್ರೇಯಾ.ಬಾಡಿಗೆ ಮನೆಯಲ್ಲಿ ಶವ ಪತ್ತೆ.ಬೇರೆಯವರಿಗೆ ಬಾಡಿಗೆ ನೀಡಿದ್ದ ಹನುಮಂತಪ್ಪ ಕುಟುಂಬಸ್ಥರು.

ಸಧ್ಯ ಬಾಡಿಗೆ ನೀಡಿದ ಮನೆಯಲ್ಲಿ ಮಗು ಶವ ಪತ್ತೆ.ಬಾಡಿಗೆ ಮನೆಯಲ್ಲಿದ್ದವರನ್ನ ವಶಕ್ಕೆ ಪಡೆದ ಪೊಲೀಸರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















