ಧಾರವಾಡ –
ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡುವ ವಿಚಾರ ಕುರಿತಂತೆ ಧಾರವಾಡ ಜಿಲ್ಲೆಯಲ್ಲೂ ಸಭೆ ಆರಂಭವಾಗಿದೆ. ಜಿಲ್ಲೆಯ 144 ಗ್ರಾಮ ಪಂಚಾಯತಗಳಿಗೆ ಮೀಸಲಾತಿ ನಿಗದಿ ಮಾಡುವ ಕುರಿತಂತೆ ಜಿಲ್ಲಾಧಿಕಾರಿಗಳು ಪ್ರತ್ಯೇಕವಾದ ಸಭೆಯ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಇಂದಿನಿಂದಲೇ ಮೀಸಲಾತಿಗಾಗಿ ಸಭೆ ಆರಂಭವಾಗಿದ್ದು ಮೊದಲನೇಯ ಹಂತದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಯಾರು ಆಗಬೇಕು ಎಂಬ ವಿಚಾರ ಕುರಿತಂತೆ ಸಭೆ ನಡೆಯುತ್ತಿದ್ದು ಇಂದು ಧಾರವಾಡದ ಅಳ್ನಾವರ ಪಟ್ಟಣದ ಉಮಾ ಭವನದಲ್ಲಿ ಸಭೆ ನಡೆಯುತ್ತಿದೆ.ಅಳ್ನಾವರದ ನಾಲ್ಕು ಪಂಚಾಯತಗಳಿಗೆ ಮೀಸಲಾತಿ ಇನ್ನೂ ಅಂತಿಮವಾಗಿಲ್ಲ ಸಭೆ ನಡೆಯುತ್ತಿದ್ದು ಇವೆಲ್ಲವದರ ನಡುವೆ ಕೂಸು ಹುಟ್ಟುವ ಮುನ್ನವೇ ಕಡಬಗಟ್ಟಿ ಗ್ರಾಮ ಪಂಚಾಯತನಲ್ಲಿ ಸದಸ್ಯರನ್ನು ಅಪಹರಣ ಮಾಡಲಾದಿದೆ.
12 ಸದಸ್ಯರ ಬಲಾಬಲವನ್ನು ಹೊಂದಿರುವ ಗ್ರಾಮ ಪಂಚಾಯತನಲ್ಲಿ 7 ಸದಸ್ಯರನ್ನು ಕರೆದುಕೊಂಡು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಹೌದು ಈಗಾಗಲೇ ಕ್ಷೇತ್ರದಲ್ಲಿ ಒಂದು ಕಡೆ ಮಾಜಿ ಸಚಿವ ಸಂತೋಷ ಲಾಡ್ ಮತ್ತೆ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರೆ ಇನ್ನೊಂದೆಡೆ ಕೈ ಪಕ್ಷದ ಮುಖಂಡ ನಾಗರಾಜ ಛಬ್ಬಿ ಕೂಡಾ ಕಳೆದ ಒಂದೂವರೆ ವರುಷಗಳಿಂದ ಕ್ಷೇತ್ರದಲ್ಲಿ ಚುನಾವಣಾ ತಯಾರಿ ನಡೆಸುತ್ತಿದ್ದು ಹೀಗಾಗಿ ಇವರಿಬ್ಬರ ಬಣದ ಟೀಮ್ ಗ್ರಾಮ ಪಂಚಾಯತನಲ್ಲಿ ಅಧಿಕಾರ ಹಿಡಿಯಲು ಜಿದ್ದಾ ಜಿದ್ದಿಯಾದ ಕಸರತ್ತು ಮಾಡುತ್ತಿದ್ದು ಇದರಿಂದ ಹುಲಿಕೇರಿಯ 3 ಮತ್ತು ಕಡಬಟ್ಟಿ ಗ್ರಾಮದ 4 ಗ್ರಾಮ ಪಂಚಾಯತ ಸದಸ್ಯರನ್ನು ಮುಂಚಿತವಾಗಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ.
ಸಂತೋಷ ಲಾಡ್ ಟೀಮ್ ನ ಮುಖ್ಯಸ್ಥರು ಮತ್ತು ಜೆಡಿಎಸ್ ನ ಅಳ್ನಾವದ ನಾಯಕರು 7 ಗ್ರಾಮ ಪಂಚಾಯತ ಸದಸ್ಯರನ್ನು ಮೀಸಲಾತಿ ಬರುವ ಮುಂಚೆಯೇ ಕರೆದುಕೊಂಡು ಹೋಗಿದ್ದಾರೆ. ಈಗಾಗಲೇ ಇವರನ್ನು ಕರೆದುಕೊಂಡು ಹೋಗಿ ಅಜ್ಞಾತ ಸ್ಥಳದಲ್ಲಿ ಇಡಲಾಗಿದೆ ಎನ್ನಲಾಗಿದೆ. ಜೊತೆಗೆ ಪ್ರತಿಯೊಬ್ಬ ಗ್ರಾಮ ಪಂಚಾಯತ ಸದಸ್ಯರಿಗೆ ಲಕ್ಷ ಲಕ್ಷ ರೂಪಾಯಿ ಕೊಟ್ಟಿದ್ದು ಹೀಗಾಗಿ 7 ಜನ ಸದಸ್ಯರು ಮೀಸಲಾತಿ ಬರುವ ಮುಂಚೆಯೇ ನಾಪತ್ತೆಯಾಗಿದ್ದಾರೆ.
ಮೀಸಲಾತಿ ಬಂದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಈಗಲೇ ರಾಜ್ಯ ರಾಜಕೀಯದಂತೆ ಇಲ್ಲೂ ಕೂಡಾ ಸದಸ್ಯರ ಅಪಹರಣ ಆರಂಭವಾಗಿದ್ದು ಅದರಲ್ಲೂ ಇಬ್ಬರು ಕೈ ನಾಯಕರ ನಡುವೆ ಕ್ಷೇತ್ರದಲ್ಲಿ ಬಿಗ್ ಪೈಟ್ ಕಂಡು ಬರುತ್ತಿದ್ದು ಇದರ ಮಧ್ಯೆ ಗ್ರಾಮ ಪಂಚಾಯತ ಗದ್ದುಗೆ ಹಿಡಿಯಲು ಇಬ್ಬರ ನಾಯಕರ ಟೀಮ್ ಗಳು ಸೆಣಸಾಡುತ್ತಿದ್ದು ಇತ್ತ ಚುನಾವಣೆ ದಿನದಂದು ಪೊಲೀಸ್ ಇಲಾಖೆಗೆ ಕಡಬಗಟ್ಟಿ ಗ್ರಾಮ ಪಂಚಾಯತ ಅಖಾಡ ದೊಡ್ಡ ಸವಾಲಾಗಲಿದೆ.