ಬೆಂಗಳೂರು –
ಮಾಜಿ ಸಚಿವ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಸ್ಪೋಟಕ ಬೆಳವಣಿಗೆಯಾಗಿದೆ. ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಎಸ್ ಐ ಟಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ದಿನ ಕ್ಕೊಂದು ಮಹತ್ವದ ಮಾಹಿತಿಗಳು ಹೊಸ ಹೊಸ ವಿಚಾರಗಳು ಹೊರಬರುತ್ತಿದ್ದು ಇವೆಲ್ಲದರ ನಡುವೆ ಈಗ ಮತ್ತೊಂದು ಮಹತ್ವದ ಬೆಳವಣಿಗೆ ಯಾಗಿದೆ. ಹೌದು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಈಗ ಇದರ ನಡುವೆ ಮತ್ತೊಂದು ಸ್ಪೋಟಕ ಸುದ್ದಿ ಹೊರಬಿದ್ದಿದೆ. ಮಾಜಿ ಸಚಿವರ ಸಿಡಿ ದೃಶ್ಯದಲ್ಲಿದ್ದ ಯುವತಿ ಕಿಡ್ನಾಪ್ ಆಗಿದ್ದಾಳಂತೆ. ಕಿಡ್ನಾಪ್ ಕುರಿತಂತೆ ಬೆಳಗಾವಿಯ APMC ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ದೂರನ್ನು ದಾಖಲು ಮಾಡಿದ್ದಾರೆ.ಹೌದು ಸಿಡಿ ದೃಶ್ಯದಲ್ಲಿದ್ದ ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾರ್ಚ್ 2 ರಿಂದ ನನ್ನ ಪುತ್ರಿ ನಾಪತ್ತೆಯಾಗಿದ್ದು ನನ್ನ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ದೂರು ನೀಡಿದ್ದಾರೆ. ಬೆಂಗಳೂರಿನ ಹಾಸ್ಟೆಲ್ ನಲ್ಲಿದ್ದಾಗ ಮಗಳನ್ನು ಹೆದರಿಸಿ ಬೆದರಿಸಿ ಅಪಹರಿಸಲಾಗಿದೆ. ಮಗಳಿಗೆ ಬೆದರಿಕೆಯೊಡ್ಡಿ ಅಶ್ಲೀಲ ಸಿಡಿ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಈಗ ನನ್ನ ಮಗಳನ್ನೇ ಕಿಡ್ನಾಪ್ ಅಂತಾ ದೂರು ನೀಡಿದ್ದಾರೆ ಯುವತಿಯ ತಂದೆ.ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ..363, 368, 343, 346, 354,506 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.ಯುವತಿಯ ತಂದೆಯಿಂದ ದೂರು ದಾಖಲಾಗಿದೆ.ಬೆಂಗಳೂರಿನ ಹಾಸ್ಟೆಲ್ ನಲ್ಲಿದ್ದಾಗ ಆಕೆಯನ್ನ ಅಪಹರಣ ಮಾಡಿದ್ದಾರೆ.ಅಕೆಯನ್ನ ಹೆದರಿಸಿ ಕಿರುಕುಳ ನೀಡಿ, ಅಶ್ಲೀಲವಾದ ಸಿಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ನನ್ನ ಮಗಳ ಸಿಡಿ ನಕಲಿ ಇದೆ ಎಂದು ದೂರಿನಲ್ಲಿ ತಿಳಿಸಿದ ಯುವತಿ ಯ ತಂದೆ ಯುವತಿ ತಂದೆ ಪ್ರಕಾಶ್ ರಿಂದ ದೂರು ದಾಖಲಾಗಿದ್ದು ಸಧ್ಯ ದೂರನ್ನು ದಾಖಲು ಮಾಡಿ ಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.