ಹುಬ್ಬಳ್ಳಿ
ಕಿಮ್ಸ್ ವೈದ್ಯರ ಕುರಿತು ಖಾಸಗಿ ಟಿವಿ ವಾಹಿನಿಯಲ್ಲಿ ಪ್ರಸಾರವಾದ ವರದಿಯನ್ನು ಖಂಡಿಸಿ ಕಿಮ್ಸ್ ವೈದ್ಯ ರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಿಮ್ಸ್ ಆವರಣದಲ್ಲಿ ಪ್ರತಿಭಟನೆ ನಡೆಸಿ ಬಳಿಕ ನಿರ್ದೇಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಾವು ಶತಾಯು ಗತಾಯು ಹೋರಾಟ ನಡೆಸಿದ್ದೇವೆ ಆದರೆ ಖಾಸಗಿ ಟಿವಿ ವಾಹಿನಿಯೊಂದು ಕಿಮ್ಸ್ ವೈದ್ಯರ ಬಗ್ಗೆ ತೀರಾ ಕೆಳಮಟ್ಟದ ಭಾಷೆ ಬಳಕೆ ಮಾಡಿರುವುದು ಖಂಡನೀಯವಾಗಿದೆ ಎಂದು ಪ್ರತಿಭಟನಾನಿರತ ವೈದ್ಯರು ಆಕ್ರೋಶ ವ್ಯಕ್ತಪಡಿಸಿದರು.