ಕೋಲ್ಹಾಪೂರ –
ಯಾವುದೇ ಒಂದು ಸಾಧನೆ ಮಾಡಬೇಕು ಎಂದರೆ ಅದು ಸುಲಭದ ಮಾತಲ್ಲ. ಹೇಳಿದಂತೆ ಸರಳವೂ ಅಲ್ಲ ಸತತ ಪ್ರರಿಶ್ರಮ ನಿರಂತರ ಪ್ರಯತ್ನ ಇದ್ದಾಗ ಮಾತ್ರ ಸಾಧನೆ ಸಾಧ್ಯ ಆಗುತ್ತದೆ ಅದರಲ್ಲೂ ವೃತ್ತಿಯಲ್ಲಿ ಪೊಲೀಸ್ ಇದ್ದರಂತೂ ಯಾವುದೇ ಒಂದು ಸಾಧನೆಯನ್ನು ಮಾಡೊದು ತುಂಬಾ ಕಷ್ಟ ಆದರೆ ಇಲ್ಲೊಬ್ಬರು ಈ ಒಂದು ಮಾತನ್ನು ಧಾರವಾಡದ ಪೊಲೀಸ್ ಪೇದೆ ಕಿರಣ ಗಾಣಿಗೇರ ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟು ಎಲ್ಲರನ್ನೂ ತಮ್ಮತ್ತ ನೋಡುವಂತೆ ಮಾಡಿದ್ದಾರೆ.

ಕಿರಣ ಗಾಣಿಗೇರ ಸಧ್ಯ ಹುಬ್ಬಳ್ಳಿ ಧಾರವಾಡ ವಿಶೇಷ ಘಟಕದಲ್ಲಿದ್ದಾರೆ.ಈ ಹಿಂದೆ ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇದ್ದಾಗ ಇನ್ಸ್ಪೇಕ್ಟರ್ ಮುರಗೇಶ ಚನ್ನಣ್ಣವರ ಮಾಡುತ್ತಿರುವ ಸಾಧನೆಯನ್ನು ಮುಂದಿಟ್ಟು ಕೊಂಡು ಆರಂಭ ಮಾಡಿದ ಹೋರಾಟದ ಯಾತ್ರೆ ಇಂದು ಇವರನ್ನು ಆಫ್ ಐರನ್ ಮ್ಯಾನ್ ಗೆಲುವಿಗೆ ತಗೆದಕೊಂಡು ಬಂದು ನಿಲ್ಲಿಸಿದೆ.




ಹೌದು ಕಳೆದ ಎರಡು ದಿನಗಳ ಹಿಂದೆ ಕೋಲ್ಹಾಪೂರದಲ್ಲಿ ಡೆಕ್ಕನ್ ಸ್ಪೋರ್ಟ್ ಕ್ಲಬ್ ಆಯೋಜನೆ ಮಾಡಿದ್ದ ಸ್ಪರ್ಧೆ ಯಲ್ಲಿ ಪಾಲ್ಗೊಂಡ ಕಿರಣ ಗಾಣಿಗೇರ ಅವರು ಕೊಟ್ಟ ಸಮಯದಲ್ಲಿ ಮೂರು ಸಾಧನೆಗಳನ್ನು ಮಾಡಿ ಆಫ್ ಐರನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.ಸ್ಪರ್ಧೆಯಲ್ಲಿ ಒಟ್ಟು 300 ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು ಇದರಲ್ಲಿ ಧಾರವಾಡದ ಲೀಸ್ ಪೇದೆಯಾಗಿರುವ ಕಿರಣ ಗಾಣಿಗೇರ ಕೂಡಾ ಪಾಲ್ಗೊಂಡು ಆಫ್ ಐರನ್ ಮ್ಯಾನ್ ಆಗಿ ಹೊರಹೊಮ್ಮಿದರು.
30 ವಯಸ್ಸಿನ ಗ್ರೂಪ್ ನಲ್ಲಿ ಸ್ಪರ್ಧೆಯನ್ನು ಮಾಡಿ ವಿಜಯಶಾಲಿಯಾದರು. 7 ಗಂಟೆ 33 ನಿಮಿಷಗಳಲ್ಲಿ ಈಜು 1.9 ಕಿಲೋ ಮೀಟರ್ 90 ಕಿಲೋ ಮೀಟರ್ ಸೈಕ್ಲಿಂಗ್ ಹಾಗೂ 21.1 ಕಿಲೋ ಮೀಟರ್ ಓಟವನ್ನು ಪೊರೈಸಿ ಈ ಒಂದು ಮಹಾನ್ ಸಾಧನೆಯನ್ನು ಮಾಡಿದರು


ಇನ್ನೂ ಈ ಹಿಂದೆ ಅಂದರೆ ನಾಲ್ಕು ತಿಂಗಳ ಹಿಂದೆ ಟ್ರಯಲ್ ತ್ರಾನ್ ಮುಗಿಸಿ ಸಾಧನೆ ಮಾಡಿದ್ದ ಇವರು ಅದನ್ನೇ ಮುಂದಿಟ್ಟುಕೊಂಡು ಈಗ ಮತ್ತೊಂದು ಐತಿಹಾಸಿಕ ಮಹಾನ್ ಸಾಧನೆಯನ್ನು ಮಾಡಿದ್ದಾರೆ ಅದರಲ್ಲೂ ವೃತ್ತಿಯಲ್ಲಿ ಹುಬ್ಬಳ್ಳಿ ಧಾರವಾಡ ನಗರ ವಿಶೇಷ ಘಟಕದಲ್ಲಿ ಪೊಲೀಸ್ ಪೇದೆಯಾಗಿರುವ ಇವರು ಅದರ ನಡುವೆಯೂ ಕೂಡಾ ಸಾಧನೆ ಮಾಡಿ ಪುಲ್ ಐರನ್ ಮ್ಯಾನ್ ಆಗಬೇ ಕೆಂಬ ಕನಸನ್ನು ಕಟ್ಟಿಕೊಂಡಿದ್ದಾರೆ.









ಇನ್ನೂ ಇವರ ಸಾಧನೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಸರ್ವ ಸಿಬ್ಬಂದಿಗಳು ಆಪ್ತರು ಅಭಿನಂದನೆಗಳನ್ನು ಸಲ್ಲಿಸಿ ಪುಲ್ ಐರನ್ ಮ್ಯಾನ್ ಸಾಧನೆಗೆ ಬೆನ್ನು ತಟ್ಟಿ ಶುಭಾಶಯ ಹೇಳಿದ್ದಾರೆ.