ಧಾರವಾಡ –
ತವರೂರಿನಲ್ಲಿ KMF ಅಧ್ಯಕ್ಷ ಶಂಕರ ಮುಗದ ಗೆ ಭರ್ಜರಿ ಸ್ವಾಗತ – ಗ್ರಾಮದಲ್ಲಿ ಭವ್ಯ ಮೆರವಣಿಗೆ ಮಾಡಿದ ಅಭಿಮಾನಿಗಳು ಆಪ್ತರು ಪಕ್ಷದ ಕಾರ್ಯಕರ್ತರು ಹೌದು
ಧಾರವಾಡ ಹಾಲು ಒಕ್ಕೂಟಕ್ಕೆ ನೂತನ ಅಧ್ಯಕ್ಷ ರಾಗಿ ಮೂರನೇ ಬಾರಿಗೆ ಆಯ್ಕೆಯಾದ ಶಂಕರ ಮುಗದ ರಿಗೆ ತವರೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.ಹೌದು ಧಾರವಾಡ ತಾಲ್ಲೂಕಿನ ಶಿವಳ್ಳಿ ಗ್ರಾಮದವರಾದ ಶಂಕರ ಮುಗದ ಅವರು ಪ್ರತಿಬಾರಿ ಚುನಾವಣೆ ನಂತರ ಗ್ರಾಮಕ್ಕೆ ತೆರಳಿ ತಾಯಿಯ ಗುರು ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.
ಹೀಗಿರುವಾಗ ಮತ್ತೆ ಸಧ್ಯ ಮೂರನೇಯ ಬಾರಿಗೆ ಹಾಲು ಒಕ್ಕೂಟಕ್ಕೆ ಅಧ್ಯಕ್ಷರಾಗುತ್ತಿದ್ದಂತೆ ತವರೂ ರಿಗೆ ತೆರಳಿದರು.ಗ್ರಾಮಕ್ಕೆ ಬರುತ್ತಿದ್ದಂತೆ ಭರ್ಜರಿ ಯಾಗಿ ನೂತನ ಅಧ್ಯಕ್ಷರನ್ನು ಬರಮಾಡಿಕೊಂಡು ಸ್ವಾಗತಿಸಿದರು.ಇದೇ ವೇಳೆ ತೆರೆದ ವಾಹನದಲ್ಲಿ ಗ್ರಾಮದಲ್ಲಿ ಶಂಕರ ಮುಗದ ಆಪ್ತರು ಅಭಿಮಾನಿ ಗಳು ಗ್ರಾಮಸ್ಥರು ಭರ್ಜರಿಯಾಗಿ ಭವ್ಯವಾದ ಮೆರವಣಿಗೆಯನ್ನು ಮಾಡಿದರು.
ಮೆರವಣಿಯ ನಂತರ ಶಂಕರ ಮುಗದ ಅವರು ವಿವಿಧ ದೇವಸ್ಥಾನಗಳಿಗೆ ತೆರಳಿ ತಾಯಿಯ ಆಶೀರ್ವಾದವನ್ನು ಪಡೆದುಕೊಂಡರು.ಈ ಒಂದು ಸಂದರ್ಭದಲ್ಲಿ ಶಿವು ಬೆಳಾರದ,ರಾಜು ಮುದ್ದಿ, ನೇಮಣ್ಣಾ ಮುಗದ,ಮಲ್ಲಿಕಾರ್ಜುನ ಚಿನ್ನಗುಡಿ, ಪ್ರಭು ಬಾರಿಕೇರ,ಯಲ್ಲಪ್ಪ ಮುದ್ದಿ,ಸಂತೋಷ ಲಂಬಿ,ಬಸಯ್ಯ ಬಕ್ಕಯ್ಯನವರ,ಪರಮಾನಂದ ಬಡಿಗೇರ,
ಶಂಕ್ರಪ್ಪ ಕೊಳೆಪ್ಪನವರ,ಕೋಟೆಪ್ಪ ಬಂಡೆನ್ನವರ, ಮುದಕಪ್ಪ ಐಹೋಳಿ,ನಾಗಪ್ಪ ರಾಮಣ್ಣನ ವರ,ಕಲ್ಮೇಶ ಮುದ್ದಿ,ಕಲ್ಲಪ್ಪ ಅಗಸಿಮನಿ,ಶಿವಪ್ಪ ಲಕ್ಕನ್ನವರ,ಅರ್ಜುನ ಹದ್ಲಿ,ನಾಗಪ್ಪ ಕದಂ, ಸೋಮಪ್ಪ ಕದಂ,ಸೇರಿದಂತೆ ಗ್ರಾಮದ ಗುರು ಹಿರಿಯರು ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..