ಹುಬ್ಬಳ್ಳಿ –
ಹಣದ ವಿಚಾರಕ್ಕಾಗಿ ಸಹೋದರನಿಗೆ ಚಾಕುವಿ ನಿಂದ ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಹಳೇ ಹುಬ್ಭಳ್ಳಿಯ ಈಶ್ವರ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಸುನೀಲ ಕೃಷ್ಣಾ ಘಾಟೇಕ ರ ಎಂಬುವನೇ ಚಾಕುವಿನಿಂದ ಇರಿತಕ್ಕೊಳಗಾದ ಯುವಕನಾಗಿದ್ದಾನೆ.

ಚಿಕ್ಕಪ್ಪನ ಮಗ ಸಹೋದರ ಮಂಜು ಎಂಬುವರೇ ಚಾಕುವಿನಿಂದ ಇರಿದವನಾಗಿದ್ದಾರೆ. ಮದುವೆಗೆ ಹಣ ಕೇಳುವ ವಿಚಾರದಲ್ಲಿ ಆರಂಭಗೊಂಡ ಮಾತಿನ ಚಕಮಕಿ ವಿಚಾರದಲ್ಲಿ ಪರಸ್ಪರ ಮಾತು ಬೆಳೆದು ಕೊನೆಗೆ ಮಂಜು ಸುನೀಲ ನಿಗೆ ಚಾಕುವಿನಿಂದ ಇರಿತ ಮಾಡಿದ್ದಾನೆ.

ಬೆನ್ನಿಗೆ ಮತ್ತು ಇತರೆ ಎರಡು ಕಡೆಗಳಲ್ಲಿ ಚಾಕುವಿನಿಂ ದ ಇರಿದಿದ್ದು ಇನ್ನೂ ತೀವ್ರವಾಗಿ ಗಾಯಗೊಂಡಿರುವ ಸುನೀಲ ನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು

ಇನ್ನೂ ಇತ್ತ ಸುದ್ದಿ ತಿಳಿದ ಕಸಬಾ ಪೊಲೀಸ್ ಠಾಣೆ ಇನಸ್ಪೇಕ್ಟರ್ ರತನಕುಮಾರ್ ಜೀರಗ್ಯಾಳ ಮತ್ತು ಟೀಮ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು

ಕೂಡಲೇ ಚಾಕು ಹಾಕಿದ ಮಂಜು ನನ್ನು ವಶಕ್ಕೆ ತಗೆದುಕೊಂಡು ಮುಂದಿನ ಕ್ರಮವನ್ನು ತಗೆದುಕೊಂ ಡಿದ್ದಾರೆ. ಸಧ್ಯ ಚಾಕು ಹಾಕಿರುವ ಮಂಜುನನ್ನು ಬಂಧಿಸಿದ್ದಾರೆ.
