ನಮ್ಮವ್ವನ ಹುಡುಕಿ ಕೋಡ್ರಿ ಸರ್ ಪ್ಲೀಸ್
ಹುಬ್ಬಳ್ಳಿ –
ಅಪ್ಪಾ ಅವ್ವಾ ಎಲ್ಲಿ ಹೋಗ್ಯಾಳ.ಯಾಕ ಅವ್ವಾ ಮನೆಗೆ ಬರತ್ತಿಲ್ಲ ಎಲ್ಲಿಗೆ ಹೋಗಿದ್ದಾರೆ ಪಪ್ಪಾ ಹೇಳು ಪಪ್ಪಾ ಪ್ಲೀಸ್ ಹೇಳು ಪಪ್ಪಾ ನಮಗೆ ಅವ್ವಾನ ನೆನಪಾಗುತ್ತಿದೆ. ಪ್ಲೀಸ್ ಪಪ್ಪಾ ನಾವಾದರೂ ಅವ್ವಾ ಎಲ್ಲಿ ಅದಾರ ನೋಡಿಕೊಂಡು ಬರೋಣಾ ನಡಿ ಹುಡುಕೊಣಾ ನಡಿ ಇಲ್ಲ ಪೊಲೀಸರನ್ನು ಕೇಳೊಣಾ ನಡಿ ಅಪ್ಪಾ. ಹೀಗೆ ಅನ್ನುತ್ತಾ ತಂದೆಯೊಂದಿಗೆ ಇಬ್ಬರು ಮಕ್ಕಳು ತಮ್ಮ ತಾಯಿಯನ್ನು ಹುಡುಕಿಕೊಡಿ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ಕೇಳಿದ್ದಾರೆ.
ಕಳೆದ ತಿಂಗಳು 27 ರಂದು ಹುಬ್ಬಳ್ಳಿಯ ತಾರಿಹಾಳ ಬಡಾವಣೆಯ ಶೃತಿ ಎಂಬ ಮಹಿಳೆ ನಾಪತ್ತೆಯಾಗಿದ್ದಾಳೆ. ತಮ್ಮ ಹಿರಿಯ ಮಗ ಮೋಹನಬಾಬುಗೆ ಪುಸ್ತಕವನ್ನು ತರಬೇಕು ಅವನ ಶಾಲೆಗೆ ಹೋಗಿ ಬರುತ್ತೇನೆ ಹಿಗೇಂದು ಹೇಳಿದ ಶೃತಿ ಅಂದು ಮನೆಯಿಂದ ಹೋಗಿ ಈವರೆಗೆ ಎಲ್ಲಿದ್ದಾರೆ ಹೇಗಿದ್ದಾರೆ ಎಂಬ ಮಾಹಿತಿ ಇಲ್ಲ. ಈವರೆಗೆ ಮನೆಗೆ ಆವಾಗ ಈವಾಗ ಬರುತ್ತಾರೆಂದುಕೊಂಡು ಕಾದು ಕಾದು ಬೇಸತ್ತ ಶೃತಿ ಪತಿ ವೆಂಕಟೇಶ ತನ್ನ ಇಬ್ಬರು ಮಕ್ಕಳೊಂದಿಗೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರಿಗೆ ನನ್ನ ಹೆಂಡತಿಯನ್ನು ಹುಡುಕಿಕೊಡಿ ಎಂದು ದೂರು ಕೊಟ್ಟಿದ್ದಾರೆ.
ಇಬ್ಬರು ಗಂಡು ಮಕ್ಕಳ ಕೈಯಲ್ಲಿ ಅವರ ತಾಯಿಯ ಪೊಟೊದೊಂದಿಗೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದರು. ಕಳೆದ ತಿಂಗಳು 27 ರಂದು ನಮ್ಮ ತಾಯಿ ಮನೆಯಿಂದ ಹೋಗಿದ್ದು ಈವರೆಗೆ ಮನೆಗೆ ಬಂದಿಲ್ಲ ಪ್ಲೀಸ್ ನಮ್ಮವ್ವನ ಹುಡುಕಿ ಕೊಡಿ ಎಂದು ಇಬ್ಬರು ಮಕ್ಕಳು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರಿಗೆ ಕೈಮುಗಿದು ಕೇಳಿಕೊಂಡರು. ವೆಂಕಟೇಶ್ ಕೂಡಾ ಕೈಮುಗಿದು ವಿನಂತಿ ಮಾಡಿಕೊಂಡರು. ಹುಬ್ಬಳ್ಳಿಯ ಹೊರವಲಯದ ತಾರಿಹಾಳದಲ್ಲಿ ವೆಂಕಟೇಶ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದು ಖಾಸಗಿ ಕೆಲಸವನ್ನು ಮಾಡಿಕೊಂಡಿದ್ದು ಶೃತಿ ಮಕ್ಕಳೊಂದಿಗೆ ಮನೆಗೆಲಸ ಮಾಡುತ್ತಿದ್ದರು.
ಇನ್ನೂ ಇತ್ತ ತಂದೆಯೊಂದಿಗೆ ಪೊಲೀಸ್ ಠಾಣೆಗೆ ಬಂದ ಮಕ್ಕಳ ಕಣ್ಣೀರಿಗೆ ಸ್ಪಂದಿಸಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಪಂದಿಸಿ ದೂರಿನೊಂದಿಗೆ ಮಹಿಳೆಯ ಪೊಟೊವನ್ನು ತಗೆದುಕೊಂಡು ಖಂಡಿತಾ ನಾವು ಹುಡುಕಿ ಕೊಡುತ್ತೇವೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಮಕ್ಕಳಲ್ಲಿ ದೈರ್ಯ ತುಂಬಿ ಪೊಲೀಸರು ಕಳಿಸಿದ್ರು.ಅತ್ತ ತಾಯಿಯನ್ನು ಹುಡುಕಲು ಬಂದಿದ್ದ ಮಕ್ಕಳು ತಂದೆಯೊಂದಿಗೆ ನಮ್ಮವ್ವ ಮನೆಗೆ ಬರುತ್ತಾಳೆಂದುಕೊಂಡು ಭರವಸೆಯೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು. ಇನ್ನೂ ಇತ್ತ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಮಹಿಳೆ ನಾಪತ್ತೆಯಾಗಿದ್ದು ಈ ಮಹಿಳೆಯನ್ನು ಯಾರಾದರೂ ನೋಡಿದರೆ ಕೂಡಲೇ ನಮಗೆ ತಿಳಿಸಿ ಅಂತಾ ಒಂದು ಬಿತ್ತಿಪತ್ರದಲ್ಲಿ ಮಹಿಳೆಯ ಪೊಟೊವನ್ನು ಹಾಕಿ ಸಾರ್ವಜನಿಕರ ಪ್ರಕಟಣೆಗೆ ಹಾಕಿದರು.ಇವೆಲ್ಲದರ ನಡುವೆ ಈ ಒಂದು ಮಹಿಳೆಯನ್ನು ನೀವು ಯಾರಾದರೂ ನೋಡಿದರೆ ಕಂಡರೆ ಕೂಡಲೇ ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿ.