ಹುಬ್ಬಳ್ಳಿ –
ಪ್ರಧಾನಿ ನರೇಂದ್ರ ಮೋದಿ ಯವರು ತಮ್ಮ ವೈಫಲ್ಯ ಮರೆಮಾಚಲು ಬಿಜೆಪಿ ಸೃಷ್ಟಿಯ ನಕಲಿ ಟೂಲ್ ಕಿಟ್ ಅಸ್ತ್ರ ಬಳಸುತ್ತಿದ್ದಾರೆ.ಸರಕಾರ ವಿಫಲ ಆಗಿರು ವುದನ್ನು ಮರೆಮಾಚಲು ಭಾರತೀಯ ಜನತಾ ಪಾರ್ಟಿ ನಕಲಿ ಟೂಲ್ ಕಿಟ್ ಕಥೆಕಟ್ಟಿ ನಾಚಿಗೇಡಿನ ಕುಕೃತ್ಯವಸಗಿದೆ ಎಂದು KPCC ಕಾರ್ಯದರ್ಶಿ ನಾಗರಾಜ ಗೌರಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಆಕ್ರೋಶ ವನ್ನು ವ್ಯಕ್ತಪಡಿಸಿದರು

ಶಾಸಕ ಅರವಿಂದ್ ಬೆಲ್ಲದ್ ರವರ ಹೇಳಿಕೆ ಹಾಸ್ಯಾ ಸ್ಪದವಾಗಿದೆ ಕುಣಿಲಿಕ್ಕೆ ಬರಲಿಲ್ಲ ಅಂದ್ರೆ ನೆಲ ಡೊಂಕು ಅನ್ನೋ ಹಾಗೆ ಕಾಂಗ್ರೆಸ್ ವಿರುದ್ಧ ಟೂಲ್ ಕಿಟ್ ಅಸ್ತ್ರವನ್ನು ಬಳಸುತ್ತಿದ್ದಾರೆ ಇವರು ಕರೋನಾ ಓಡಿಸಲು ಜನರಿಗೆ ತಟ್ಟೆ ಬಡಿಯುವುದು ದೀಪ ಹಚ್ಚುವುದು ಹೇಳಿದಾಗ ಇದನ್ನು ಕೂಡಾ ಕಾಂಗ್ರೆಸ್ ವಿರೋಧ ಮಾಡಿತ್ತು ಆಗ ದೇಶದ ಮುಗ್ದ ಜನರು ತಟ್ಟೆ ಬಡಿಯಲಿಲ್ಲವೇ ದೀಪ ಹಚ್ಚಲಿಲ್ಲವೇ ಇವರು ನಮ್ಮ ದೇಶದ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ರಫ್ತು ಮಾಡುವ ಅಗತ್ಯವೆನಿತ್ತು ಈ ದೇಶದಲ್ಲಿ ಈಗ ಈ ಸಾವು ನೋವು ಗಳಿಗೆಲ್ಲ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿಜಿ ಯವರೇ ನೇರ ಹೊಣೆ ಹೊರಬೇಕು ಎಂದರು.
ಶಾಸಕ ಅರವಿಂದ್ ಬೆಲ್ಲದ್ ರವರೇ ತಮ್ಮ ಕ್ಷೇತ್ರಾದ್ಯಂತ ಜನರು ವ್ಯಾಕ್ಸಿನ್ ಇಲ್ಲದೆ ಅದರಲ್ಲಿ ಎರಡನೆಯ ಡೋಸ್ ವ್ಯಾಕ್ಸಿನ್ ಇಲ್ಲದ್ದರಿಂದ ಕ್ಷೇತ್ರದಲ್ಲಿ ಜನ ಭಯಭೀತರಾಗಿದ್ದಾರೆ ಮೊದಲಿಗೆ 30 ದಿನ ನಂತರ 42 ದಿನ ಈಗ 90 ದಿನದ ಒಳಗಡೆ ಎರಡನೇ ಡೋಸ್ ಹಾಕಿಸಿಕೊಳ್ಳಲು ಹೇಳುವುದನ್ನು ನೋಡಿ ಜನಸಾಮಾನ್ಯರಿಗೆ ರೈತರಿಗೆ ಭಯ ಉಂಟಾಗಿದೆ ಹಾಗೆಯೇ ಧಾರವಾಡ ಶಹರ ಸೋಮೇಶ್ವರ ನಗರ ನವಲೂರು ಸತ್ತೂರು ತಡಸಿನಕೊಪ್ಪ ಜೋಗ್ ಎಲ್ಲಾಪುರ ಎಲ್ಲಾ ಭಾಗಗಳಲ್ಲಿ ಕೋವಿಡ್ ಲಕ್ಷಣಗಳಿದ್ದರೂ ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿ ನೋಡಿ ಟೆಸ್ಟ್ ಕೂಡ ಮಾಡಿ ಸುತ್ತಿಲ್ಲ ಟೆಸ್ಟ್ ಮಾಡಿದ ಜನಕ್ಕೆ ಔಷಧಿ ಕೊಡುತ್ತಿಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯ ಕಾರಣ ವೆಂಟಿಲೇಟರ್ ಗಳನ್ನು ಉಪಯೋಗಿಸುತ್ತಿಲ್ಲ ಎಲ್ಲಾ ತೊಂದರೆಗಳನ್ನು ಸರಿ ಪಡಿಸುವುದನ್ನು ಬಿಟ್ಟು ಕಾಂಗ್ರೆಸ್ ಮೇಲೆ ಗುಬೆ ಕುಡಿಸುವ ಕೆಲಸವನ್ನು ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ
ಕ್ಷೇತ್ರದ ಜನ ಸಂಕಷ್ಟದಲ್ಲಿರುವಾಗ ಜನರ ಋಣ ತೀರಿಸುವ ಅವಕಾಶ ಇರುವಾಗ ರಾಜಕಾರಣ ಮಾಡುವುದು ಬಿಟ್ಟು ಸಂಕಷ್ಟದಲ್ಲಿರುವ ಜನರ ನೆರವಿಗೆ ಬರಬೇಕು ಜನರ ಋಣ ತೀರಿಸಬೇಕು
ಕೊರೋನಾ ಮೊದಲನೆಯ ಅಲೆಯ ಸಂದರ್ಭದಲ್ಲಿ ಧಾರವಾಡದ ಸಿವಿಲ್ ಆಸ್ಪತ್ರೆಯ ಅಭಿವೃದ್ಧಿಗೆ 60 ಲಕ್ಷ ರೋಗಳ ಟೆಂಡರ್ ಆಗಿದ್ದು ಇನ್ನೂ ಕೂಡ ಕಾಮಗಾರಿ ಆಗಿಲ್ಲ ಇದರಿಂದಲೇ ಶಾಸಕರ ಜವಾಬ್ದಾರಿ ತಿಳಿಯುತ್ತದೆ ಶಾಸಕರು ಕೂಡಲೇ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಸತತವಾಗಿ ತಮ್ಮ ಕುಟುಂಬದವರನ್ನು ಶಾಸಕರನ್ನಾಗಿ ಮಾಡುತ್ತಿರುವ ಜನರ ಋಣ ತೀರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನರ ಶಾಪ ತಪ್ಪಿದ್ದಲ್ಲ. ತಮಗೆ ಸೇವೆ ಮಾಡಲು ಇಚ್ಛೆ ಇಲ್ಲವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಶೋರೂಂಗಳಲ್ಲಿ ಕುಳಿತು ಬಿಡಿ
ಧನ್ಯವಾದಗಳೊಂದಿಗೆ
ತಮ್ಮ ವಿಶ್ವಾಸಿ
ನಾಗರಾಜ್ ಗೌರಿ
ಕೆಪಿಸಿಸಿ ಕಾರ್ಯದರ್ಶಿ