ಹುಬ್ಬಳ್ಳಿ –
ಸಿದ್ದಾರೂಢ ಮಠದಲ್ಲಿ ರೊಟ್ಟಿ ಪುಂಡಿಪಲ್ಯ ವಿತರಣೆ ಮಾಡಿದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗ – ಗೋಕಾಕ ಸಹೋದರರಿಗೆ ಸಾಥ್ ನೀಡಿದ ಆಪ್ತರು…..ಅಜ್ಜನ ಮಠದಲ್ಲಿ ಪುಂಡಿ ಪಲ್ಯ ಖಡಕ್ ರೊಟ್ಟಿ ಸವಿದು ಅನ್ನದಾತ ಸುಖಿಭವ ಎಂದ ಭಕ್ತರು…..
ಐತಿಹಾಸಿದ ಸಿದ್ದಾರೂಢ ಮಠದಲ್ಲಿ ಜಾತ್ರೆಯ ವೈಭವ ಮುಗಿದಿದ್ದು ಇನ್ನೂ ಜಾತ್ರೆಯ ಹಿನ್ನಲೆಯಲ್ಲಿ ಕೌದಿ ಪೂಜೆ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಈ ನಡುವೆ ಈ ಒಂದು ಕೌದಿ ಪೂಜೆಯ ಹಿನ್ನಲೆಯಲ್ಲಿ ಸಿದ್ದಾರೂಢ ಮಠದಲ್ಲಿ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪುಂಡಿಪಲ್ಯ ಚಟ್ನಿ ಹಾಗೂ ಮೊಸರಿನ ಬುತ್ತಿಯನ್ನು ನೀಡಲಾಯಿತು.
ಹೌದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಭಿಮಾನಿಗಳಿಂದ ಈ ಒಂದು ವಿಶೇಷವಾದ ಅನ್ನ ಪ್ರಸಾದ ವ್ಯವಸ್ಥೆ ನಡೆಯಿತು.ಸಂಘಟನೆಯ ಸಂಸ್ಥಾಪಕರಾದ ಸುರೇಶ ಗೋಕಾಕ,ಜಗದೀಶ್ ಗೋಕಾಕ್ ಸಹೋದರರ ನೇತ್ರತ್ವದಲ್ಲಿ ಈ ಒಂದು ವಿಶೇಷವಾದ ಪ್ರಸಾದ ವ್ಯವಸ್ಥೆ ಮಠದಲ್ಲಿ ನಡೆಯಿತು.
ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಸಾರ್ವಜನಿಕರಿಗೆ ಖಡಕ್ ರೊಟ್ಟಿ,ಪುಂಡಿ ಪಲ್ಯೆ,ಚಟ್ನಿ,ಮೊಸರಿನ ಬುತ್ತಿಯ ರುಚಿಯನ್ನು ಉಣಬಡಿಸಲಾಯಿತು.ಈ ಒಂದು ಸಂದರ್ಭದಲ್ಲಿ ಸುರೇಶ ಗೋಕಾಕ,ಜಗದೀಶ್ ಗೋಕಾಕ್, ಚಂದ್ರಶೇಖರ ಗೋಕಾಕ, ವಿರೇಶ ಗೊಂದಿ,ರಾಮಚಂದ್ರ ಧಳವಿ,ಯಲ್ಪಪ್ಪ ಅಂಬಿಗೇರ, ಗಣೇಶ ಅಂಬಿಗೇರ,ವಿಜಯಕುಮಾರ್, ದೀಪಕ್ ಕಲಾಲ,ನವೀನ್ ಅತ್ತಿಬೆಳಗಲ,
ವಿರೇಶ ಗೋಕಾಕ್ ಸೇರಿದಂತೆ ಹಲವರು ಉಪಸ್ಥಿತ ರಿದ್ದರು.ಇನ್ನೂ ವಿಶೇಷವಾದ ಪ್ರಸಾದವನ್ನು ಸ್ವೀಕಾರ ಮಾಡಿದವರೆಲ್ಲರೂ ಬಾಯಿ ಚಪ್ಪರಿಸಿ ಅನ್ನದಾತ ಸುಖಿ ಭವ ಎನ್ನುತ್ತಾ ಒಳ್ಳೇಯದಾಗಲಿ ಎಂದು ಹಾರೈಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..