ಹುಬ್ಬಳ್ಳಿ –
ಹಲವು ಕಾರಣಗಳಿಗಾಗಿ ಪೋಷಕರಿಂದ ದೂರವಾದ ಪೋಷಕರೇ ಇಲ್ಲದ ಸಾಕಷ್ಟು ಸಂಖ್ಯೆಯ ಮಕ್ಕಳು ಸಮಾಜದಲ್ಲಿ ಇದ್ದಾರೆ.ಅಂತಹ ಮಕ್ಕಳ ಬಾಳಿಗೆ ನೆರಳಾಗಿ, ಪೋಷಕರ ಸ್ಥಾನ ತುಂಬಲು ಸೇವಾಭಾರತಿ ಸಂಸ್ಥೆ ಶ್ರಮಿ ಸುತ್ತಿವೆ.ಹುಬ್ಬಳ್ಳಿ ನಗರದ ಕೇಶ್ವಾಪುರ ಬನಶಂಕರಿ ಬಡಾವ ಣೆಯ ಸೇವಾ ಸದನದಲ್ಲಿರುವ ಸೇವಾ ಭಾರತಿ ಟ್ರಸ್ಟ್‌ನ ಪ್ರಕಲ್ಪವಾದ ಮಾತೃಛಾಯಾ ಕಲ್ಯಾಣ ಕೇಂದ್ರ ಅಂತಹ ಮಕ್ಕಳಿಗೆ ನೆಲೆ ಕಲ್ಪಿಸಿದ ಸಂಸ್ಥೆಗಳಲ್ಲಿ ಪ್ರಮುಖವಾದು ದಾಗಿದೆ.ಮಕ್ಕಳಿಗೆ ಶಿಕ್ಷಣದ ಜತೆಗೆ,ಜೀವನ ನಡೆಸಲು ಬೇಕಾದ ಸಂಸ್ಕಾರಗಳನ್ನು ಇದು ನೀಡುತ್ತಿದೆ.ಇದರ ಅಂಗ ವಾಗಿ ಇಂದು ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಉತ್ಸವದಲ್ಲಿ ಸೇವಾಸದನದ ಮಕ್ಕಳು ನಡೆಸಿಕೊಟ್ಟ ಶ್ರೀ ಕೃಷ್ಣಜನ್ಮಾಷ್ಟಮಿ ಶ್ರೀ ಕೃಷ್ಣನ ರೂಪಕಗಳು ನೆರೆದಿದ್ದ ಜನ ಮನ ಸೂರೆಗೊಂಡವು.
ಈ ಸಂದರ್ಭದಲ್ಲಿ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಶಿಲ್ಪಾ ಶೆಟ್ಟರ್ ಮಾತನಾಡಿ, ಭಾರತೀಯ ಸಂಸ್ಕೃ ತಿಯ ಪ್ರತೀಕವಾದ ಹಾಗೂ ಗ್ರಾಮೀಣ ಸೊಗಡು ಪ್ರತಿನಿ ಧಿಸುವ ಹಿಂದೂ ಹಬ್ಬಗಳು ಮರೆಯಾಗಬಾರದು ಎಂಬ ಉದ್ದೇಶ ಹಾಗೂ ಸೇವಾ ಸದನದಲ್ಲಿ ಅಭ್ಯಾಸ ಮಾಡುವ ಮಕ್ಕಳಲ್ಲಿ ಹಬ್ಬಗಳು ಸಂಸ್ಕೃತಿಯನ್ನು ಹೇಗೆ ಬಿಂಬಿಸುತ್ತವೆ ಎಂಬುವುದನ್ನು ತಿಳಿಸುವ ಸಲುವಾಗಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು ತಿಳಿಸಿದರು.
ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಶ್ರೀಮತಿ ಕಮಲಾ ಜೋಶಿ ಕಾರ್ಯಕ್ರಮ ನಿರೂಪಿಸಿದರಲ್ಲದೇ, ಪ್ರಸ್ತಾವಿಕ ವಾಗಿ ಮಾತನಾಡಿ ಮಕ್ಕಳಿಗೆ ತಂದೆ ತಾಯಿಯ ನೆನಪಾಗ ದಂತೆ ತಾಯಂದಿರ ಪ್ರೀತಿ ಕಾಳಜಿಯನ್ನು ಮಾತೃಛಾಯಾ ನೀಡುತ್ತಿದೆ. ಹಬ್ಬದ ಸಂದರ್ಭದಲ್ಲಿ ದಾನಿಗಳು ಅಥವಾ ಸಂಸ್ಥೆಯಿಂದ ಹೊಸ ಬಟ್ಟೆಗಳನ್ನು ಇವರಿಗೆ ಕೊಡಿಸಲಾ ಗುತ್ತದೆ. ಇಲ್ಲಿಂದ ಹೋದ ಮೇಲೆ ಸ್ವಯಂ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿದ್ದಾರೆ, ಅಂತಹ ಸಂಸ್ಕಾರ ಮಕ್ಕಳಿಗೆ ಸೇವಾಭಾರತಿ ಕಲಿಸುತ್ತಿದೆ ಎಂದೂ ಹೇಳಿದರು.
ಇದೇ ಸಂದರ್ಭದಲ್ಲಿ ಕೃಷ್ಣ ರಾಧೆಯರ ವೇಷವನ್ನು ಧರಿಸಿ ಕೃಷ್ಣನ ಹಾಡಿಗೆ ಕೋಲಾಟ ಹಾಗೂ ಭಜನೆಯನ್ನು ಬಡಾ ವಣೆ ಹಾಗೂ ಸುತ್ತಮುತ್ತಲಿನ ಮಹಿಳೆಯರು ಮಾಡಿದ ಶೋಭಾಯಾತ್ರೆ ಮೆಚ್ಚುಗೆಗೆ ಪಾತ್ರವಾಯಿತು.ಶ್ರೀಮತಿ ಸವಿತಾ ಕರಮರಿ, ಶ್ರೀಮತಿ ಮಂಜುಳಾ ಕೃಷ್ಣನ್ ಸೇವಾ ಸದನದ ರತ್ನಾ ಮಾತಾಜಿ,ಶ್ರೀಮತಿ ವಿಜಯಲಕ್ಷ್ಮಿ ತಮ್ಮೋಲೆ ಸೇರಿದಂತೆ ಬಡಾವಣೆಯ ಪ್ರಮುಖರು ಉಪಸ್ಥಿತರಿದ್ದರು.