ಧಾರವಾಡ –


ಧಾರವಾಡ ಎಪಿಎಮ್ ಸಿ ಪ್ರಭಾರಿ ಅಧ್ಯಕ್ಷರಾಗಿ ಕೃಷ್ಣಾ ಕೊಳಾನಟ್ಟಿ ಅಧಿಕಾರ ವಹಿಸಿಕೊಂಡರು.ಈ ಹಿಂದೆ ಅಧ್ಯಕ್ಷರಾಗಿದ್ದ ಬಸಪ್ಪ ಹೊಸೂರ ಅವರ ಅಧಿಕಾರವಧಿ ಮುಗಿದ ಹಿನ್ನಲೆಯಲ್ಲಿ ಇಂದು ಅಧ್ಯಕ್ಷ ಸ್ಥಾನವನ್ನು ಸಧ್ಯ ಉಪಾಧ್ಯಕ್ಷರಾಗಿದ್ದ ಕೃಷ್ಣಾ ಕೊಳಾನಟ್ಟಿ ಅಧಿಕಾರವನ್ನು ವಹಿಸಿಕೊಂಡರು.

ನಗರದ ಎಪಿಎಮ್ ಸಿ ಯಲ್ಲಿ ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡರು. ಸದಸ್ಯರಾದ ರಮೇಶ ತಳಿಗೇರ,ರಾಯಪ್ಪ ಹುಡೇದ, ಚನ್ನವೀರ ಗೌಡ ಪಾಟೀಲ,ವಿ ಜಿ ಹಿರೇಮಠ,ಅಜಯ ಹಳೇ ಮನಿ ಸೇರಿದಂತೆ ಹಲವರು ನೂತರ ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ಕೃಷ್ಣಾ ಕೊಳಾನಟ್ಟಿ ಅವರನ್ನು ಅಭಿನಂದಿಸಿ ಸ್ವಾಗತಿಸಿದರು.

ಇನ್ನೂ ಇತ್ತ ಪ್ರಬಾರಿ ಅಧ್ಯಕ್ಷರಾಗುತ್ತಿದ್ದಂತೆ ಹಿರಿಯ ಪತ್ರಕರ್ತ ಸೌಂದರ್ಯ ಫೌಂಡೇಶನ್ ಮುಖ್ಯಸ್ಥ ಮಂಜುನಾಥ ಬಡಿಗೇರ(ಸೌಂದರ್ಯ)ಮಂಜು ಸರ್ವಿ,ಮಂಜುನಾಥ ಹೂಗಾರ,ಮಂಜುನಾಥ ಪೂಜಾರ ಸೇರಿದಂತೆ ಹಲವರು ಸ್ವಾಗತಿಸಿ ಅಭಿನಂದಿಸಿದರು.
