ಬೆಂಗಳೂರು –
ಶಿಕ್ಷಕರ ಬಹುದಿನಗಳ ಬೇಡಿಕೆ ಮತ್ತು ಸಮಸ್ಯೆ ಗಳ ಕುರಿತು KSPSTS ಸಂಘಟನೆಯ ಟೀಮ್ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ಯನ್ನು ಮಾಡಿದರು ಹೌದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಚನೆ ಮೇರೆಗೆ ಸಚಿವರ ವಿಶೇಷಾ ಧಿಕಾರಿ ಕಿಶೋಶ್ ರವರು ಹಾಗೂ OSD ಜಯಪ್ರಕಾಶ್ ರವರನ್ನು ಭೇಟಿ ಯಾದರು
ಸಂಘಟನೆಯ ರಾಜ್ಯಾಧ್ಯಕ್ಷ ನಾಗೇಶ್ ಪ್ರಧಾನ ಕಾರ್ಯ ದರ್ಶಿಗಳಾದ ಚಂದ್ರಶೇಖರ್ ನುಗ್ಲಿ ಅವರ ನೇತೃತ್ವದಲ್ಲಿನ ಟೀಮ್ ರಿತೇಶ್ ಕುಮಾರ್ ಸಿಂಗ್ ರವರನ್ನು ರಾಜ್ಯ ಪಧಾದಿಕಾರಿಗಳ ನೇತೃತ್ವದಲ್ಲಿ ಭೇಟಿ ಯಾಗಿ ಚರ್ಚೆಯನ್ನು ಮಾಡಿದರು ಸುದೀರ್ಘವಾಗಿ ಚರ್ಚಿಸಿ ಬಹುಮುಖ್ಯವಾದ ಸಮಸ್ಯೆಗಳನ್ನು ಕಾಲಮಿತಿ ಯೊಳಗೆ ಬಗೆಹರಿಸುವಂತೆ ವಿನಂತಿಸಲಾಯಿತು
ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಅರ್ಹ ಪದವೀ ಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾಜೈಷ್ಠತೆ ಯೊಂದಿಗೆ GPT ಹುದ್ದೆಗಳಿಗೆ ವಿಲೀನ ಮಾಡುವಂತೆ ಹಾಗೂ ಆದಷ್ಟು ಬೇಗ ಆದೇಶ ಮಾಡಿಸಲು ವಿನಂತಿ ಸಲಾಯಿತು.ಬಡ್ತಿ.ವರ್ಗಾವಣೆಯಲ್ಲಿನ ಲೋಪದೋಷ ಗಳು ಹಾಗೂ ಇನ್ನಿತರ ಶಿಕ್ಷಕರ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಆದಷ್ಟು ಬೇಗ ಶಿಕ್ಷಣ ಸಚಿವರೊಂದಿಗೆ ಸಭೆ ಆಯೋಜಿಸಿ ಅಂತಿಮ ತಿರ್ಮಾನ ತೆಗೆದುಕೊಳ್ಳುವ ನಿರ್ಣಯ ಮಾಡುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗಳಿಗೆ ಹಾಗೂ ಮಾನ್ಯ ಶಿಕ್ಷಣ ಸಚಿವರ ವಿಶೇಷಾಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..