This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

ಧಾರವಾಡ

ಆರತಿ ಮಾಡಿ MR ಪಾಟೀಲ ರಿಗೆ ಬೆಂಬಲ ನೀಡುತ್ತಿರುವ ಕುಂದಗೋಳ ಮಹಿಳೆಯರು – ಕ್ಷೇತ್ರದಲ್ಲಿ MR ಪಾಟೀಲ ರಿಗೆ ಕಂಡು ಬರುತ್ತಿದೆ ಅಭೂತಪೂರ್ವ ಬೆಂಬಲ…..


ಕುಂದಗೋಳ

ನಾನು ಅಧಿಕಾರಕ್ಕಾಗಿ ಲಾಭಿ ಮಾಡಿದವನಲ್ಲ. ಯಾವುದೇ ಅಧಕಾರವಿಲ್ಲದೇ ಕ್ಷೇತ್ರದ ಮಗನಾಗಿ ಜನರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ.ಇದನ್ನು ಗುರುತಿಸಿ ಪಕ್ಷದ ಹೈಕಮಾಂಡ್ ನನಗೆ ಬಿಜೆಪಿ ಟಿಕೆಟ್ ನೀಡಿದೆ.ಆದರೆ ಇದನ್ನು ಸಹಿಸದ ಕೆಲವರು ನನ್ನ ಸೋಲಿಸಲು ಪಿತೂರಿ ಮಾಡುತ್ತಿ ದ್ದಾರೆ ಎಂದು ಕುಂದಗೋಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಮ್ ಆರ್ ಪಾಟೀಲ ಹೇಳಿದರು

ಈ ಪಿತೂರಿಗೆ ಮತದಾರರು ಮೇ.10 ರಂದು ಬುದ್ದಿ ಕಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಹೇಳಿದರು.ಕುಂದಗೋಳ ವಿಧಾನಸಭಾ ಮತಕ್ಷೇತ್ರದ ತಿಮ್ಮಸಾಗರ, ಅಂಚಟಗೇರಿ,ಕಳಸ, ಕಮಡೊಳ್ಳಿ, ಯರಗುಪ್ಪಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಬೃಹತ್ ರೋಡ್ ಶೋ ನಡೆಸಿ, ಬಳಿಕ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳ ಮತಯಾಚನೆ ಮಾಡಿದರು

ನಂತರ ಮಾತನಾಡಿದ ಅವರು ಕಳೆದ 20 ವರ್ಷ ಗಳಿಂದ ಜನಪರ ಕೆಲಸಗಳಲ್ಲಿ ತೊಡಗಿಕೊಂಡಿ ದ್ದೇನೆ ಅನೇಕ ವರ್ಷಗಳಿಂದ ಪಕ್ಷ ಸಂಘಟನೆ ಜೊತೆಜೊತೆಗೆ ಪಕ್ಷ ನೀಡುವ ಜವಾಬ್ದಾರಿಯನ್ನು ಅರ್ಥಪೂರ್ಣವಾಗಿ ನಿಭಾಯಿಸುತ್ತಾ ಬಂದಿ ದ್ದೇನೆ.ಇದನ್ನು ಮನಗಂಡ ನಮ್ಮ ನಾಯಕರು ಈ ಹಿಂದಿನ ಚುನಾವಣೆಗಳಲ್ಲಿಯೇ ಟಿಕೆಟ್ ಘೋಷಣೆ ಮಾಡಿದ್ದರು.

ನಾನು ಅಧಿಕಾರದ ದಾಹ ಹೊಂದಿದ್ದರೇ ಅವತ್ತೆ ಕಾಡಿಬೇಡಿ ಚುನಾವಣೆ ಎದುರಿಸಿ ಶಾಸಕನಾಗು ತ್ತಿದ್ದೆ. ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾ ಗಿದ್ದು, ಪಕ್ಷ ಸೂಚಿಸಿದಂತೆ ದೊರೆತ ಟಿಕೆಟ್’ನ್ನು ಇತರರಿಗೆ ಬಿಟ್ಟು ಕೊಟ್ಟಿದ್ದೇನೆ.ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಬಿಜೆಪಿ ಬಾಹುಟ ಆರಿಸಬೇಕೆಂಬ ಕಾರಣಕ್ಕೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ದುಡಿದಿದ್ದೇನೆ

ಆದರೆ ಇಂದು ನಿಷ್ಠಾವಂತ ಕಾರ್ಯಕರ್ತನ ಕೆಲಸಕ್ಕೆ ಬೆಲೆ ಕೊಡದೇ ಬೆನ್ನಿಗೆ ಚೂರಿ ಹಾಕುವ ಕೆಲಸ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಅಸಮಾಧಾನಗೊಂಡರು.

ನಾನು ರಾಜಕಾರಣಿಗಳು ನಮಗೆ ಮತದಾರರೇ ದೇವರು ನಿಮ್ಮ ಸೇವಕರಾಗಿಯೇ ನಾವು ಇರಬೇಕು ಚುನಾವಣೆ ಬಂದಾಗ ಒಂದು ವೇಷ ಚುನಾವಣೆ ನಂತರ ಮತ್ತೊಂದು ವೇಶ ಹಾಕಿ ಕೊಳ್ಳೋದ್ರಿಂದ ಜನರು ರಾಜಕಾರಣಿಗಳು ಸರಿಯಿಲ್ಲ ಎನ್ನುವ ಹಾಗೇ ಆಗಿದೆ.ಅದನ್ನು ಹೊರತುಪಡಿಸಿ ನಾವು ಸತ್ಯದ ಹಾದಿಯಲ್ಲಿ ಹೋಗೋಣ

ಊರಿಗೆ ಒಳ್ಳೆಯದು ಮಾಡೋಣಾ, ಜನರನ್ನು ಅಣ್ಣ ತಮ್ಮಂದಿರ ಹಾಗೇ ನೋಡೋಣಾ, ಮತದಾರರ ಗೌರವಕ್ಕೆ ಚ್ಯುತಿ ಬರದ ಹಾಗೇ ನಡೆದುಕೊಳ್ಳೋಣಾ ಎಂದು ಭಾವನಾತ್ಮಕವಾಗಿ ಎಮ್.ಆರ್.ಪಾಟೀಲ ಮಾತನಾಡಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್’ನವರು ಸರಿಸುಮಾರು ಇವತ್ತು ವರ್ಷ ಆಳ್ವಿಕೆ ಮಾಡಿದ್ದಾರೆ ಆದರೆ ಕ್ಷೇತ್ರದ ಅಭಿವೃದ್ಧಿ ಮಾತ್ರ ಶೂನ್ಯ ಮತ್ತೊಬ್ಬರು ನಮ್ಮ ಜೊತೆಗೆ ಇದ್ದು ಇಂದು ಟಿಕೆಟ್ ಕೈತಪ್ಪಿದಕ್ಕೆ ಬೇರೆಡೆ ಹೋಗಿದ್ದಾರೆ. ಅವರನ್ನು ಗೆಲ್ಲಿಸಬೇಕೆಂದು ಹೆಗಲ ಮೇಲೆ ಹೊತ್ತು ತಿರುಗಾಡಿದ್ದೇವು ಆದರೆ ಆ ಭಾಗ್ಯ ಅವರಿಗಿಲ್ಲ ಎಂದು ಪರೋಕ್ಷವಾಗಿ ಎಸ್.ಐ.  ಚಿಕ್ಕನಗೌಡ್ರ ಅವರಿಗೆ ತಿವಿದರು.

ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಆಣೆ ಪ್ರಮಾಣಗಳಾಗಿವೆ. ನಮ್ಮ ಕೋರ್ ಕಮಿಟಿ ಸಭೆಯಲ್ಲಿಯೇ ಟಿಕೆಟ್ ಯಾರಿಗೆ ಸಿಕ್ಕರು ಒಬ್ಬರು ಮತ್ತೊಬ್ಬರಿಗೆ ಬೆಂಬಲಿಸಬೇಕೆಂದು ಆಣೆ ಪ್ರಮಾಣಗಳಾಗಿವೆ. ಅಷ್ಟೇ ಅಲ್ಲದೇ ಕ್ಷೇತ್ರದ ಐತಿಹಾಸಿಕ ಶಂಭುಲಿಂ ಗೇಶ್ವರ ದೇವಸ್ಥಾನದಲ್ಲಿ ದೇವರ ಮುಂದೆ ಆಣೆ ಪ್ರಮಾಣಗಳಾಗಿ ಕಂಕಣ ಕಟ್ಟಿಸಿಕೊಂಡಿದ್ದೇವೆ. ಆದರೆ ಇವೆಲ್ಲವನ್ನೂ ದಿಕ್ಕರಿಸಿ ಇಂದು ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ದೇವೆರ ಮೇಲಿನ ಆಣೆ ಯನ್ನೇ ಮರೆತಿದ್ದಾರೆ.

ಇದನ್ನು ನೋಡಿದರೇ ಅವರಿಗೆ ದೇವರ ಭಯ ಕೂಡಾ ಅವರಿಗಿಲ್ಲ ಎಂಬುದು ಗೊತ್ತಾಗುತ್ತದೆ. ಆದರೆ ಇವರಿಗೆ ಮತದಾರರ ಭಯ ಮಾತ್ರ ಖಾಯಂ ಹತ್ತುತ್ತದೆ. ದೇವರು ಮತದಾರರ ರೂಪದಲ್ಲಿ ಮೇ.10 ರಂದು ಬಂದು ಯಾರಿಗೆ ಬುದ್ದಿ ಕಲಿಸತ್ತಾನೆ ನೋಡೋಣಾ ಎಂದು ಮಾರ್ಮಿಕವಾಗಿ ಮಾತನಾಡಿದರು.

ರಾಜಕಾರಣ ಮಾಡೋದು ಒಬ್ಬರನ್ನು ಶ್ರೀಮಂತರನ್ನಾಗಿ ಮಾಡೋಕ್ಕೆ ಅಲ್ಲ, ಒಳ್ಳೆಯ ಕೆಲಸ ಮಾಡಬೇಕು, ನಯ ವಿನಯದಿಂದ ಇರಬೇಕು. ಈ ದಿಸೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಸಂಕಲ್ಪದೊಂದಿಗೆ ಚುನಾವಣೆ ಎದುರಿಸುತ್ತಿದ್ದೇನೆ. ಜನರು ಕ್ಷೇತ್ರದ ಭವಿಷ್ಯ ನೋಡಿ ಮತ ಹಾಕಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗುರು ಪಾಟೀಲ್ ರಂಗನಗೌಡ ಪಾಟೀಲ ಬಸವರಾಜ ಬಿಡನಾಳ ಗೌರಮ್ಮ ಹರಿಜನ ಎಸ್. ಡಿ. ಮಾಳಗಿ ಬಿಮ್ಮನ ಮರಬದ ಚನ್ನಪ್ಪ ಗಾಣಿಗೇರ ಮುತ್ತು ಎಸ್ ಮುಂತಾದ ಪಕ್ಷದ ಮುಖಂಡರು ಹಿರಿಯರು ಇದ್ದರು

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..


Google News Join The Telegram Join The WhatsApp

 

 

Suddi Sante Desk

Leave a Reply