ಹುಬ್ಬಳ್ಳಿ –
ಸಾಮಾನ್ಯವಾಗಿ ದೀಪಾವಳಿ ಹಬ್ಬವನ್ನು ಎಲ್ಲರೂ ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಹೊಸ ಬಟ್ಟೆಗಳನ್ನು ಖರೀದಿ ಮಾಡಿ ಕುಟುಂಬ ಸಮೇತರಾಗಿ ಹಬ್ಬವನ್ನು ಆಚರಣೆ ಮಾಡೊದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ವಿಶೇಷವಾದ ಆಚರಣೆಯೊಂದಕ್ಕೇ ಸಾಕ್ಷಿಯಾಯಿತು. ಹೌದು ನಗರದಲ್ಲಿ ದೀಪಾವಳಿಯನ್ನು ಅರ್ಥಪೂರ್ಣವಾಗಿ ಮಂಜುನಾಥ ಹೆಬಸೂರು ಮತ್ತು ಗೆಳೆಯರು ಆಚರಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೊಸ ಬಟ್ಟೆಗಳನ್ನು ಹಾಕಿಕೊಂಡು ಕುಟುಬಂ ಸಮೇತರಾಗಿ ದೀಪಾವಳಿಯನ್ನು ಆಚರಣೆ ಮಾಡದ ಇವರು ಒಂದು ಹೆಜ್ಜೆ ಮುಂದಿಟ್ಟು ವಿನೂತನವಾಗಿ ಆಚರಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಮೆಚ್ಚಗೆ ಪಡೆದೊಕೊಂಡರು ಮಂಜುನಾಥ ಗೆಳೆಯರ ಬಳಗದವರು.ಅರ್ಚಕರು, ಪುರೋಹಿತರ ಬದಲಾಗಿ ಮಂಗಳ ಮುಖಿಯರ ಕೈಯಿಂದ ಲಕ್ಷ್ಮೀ ಪೂಜೆಯನ್ನು ಇವರು ಮಾಡಿಸಿದ್ರು.

ಸಮಾಜ ಸೇವಕ ಮಂಜುನಾಥ ಹೆಬಸೂರ ಈ ಒಂದು ವಿನೂತನ ಆಚರಣೆ ಮಾಡಿದ್ದಾರೆ.ಒಂದು ಕಡೆ ಕುಟುಂಬಸ್ಥರು ಮತ್ತೊಂದು ಕಡೆ ಮಂಗಳ ಮುಖಿಯರು ಇವರೊಂದಿಗೆ ಸೇರಿಕೊಂಡ ಮಂಜುನಾಥ ಮತ್ತು ಗೆಳೆಯರು ಲಕ್ಷ್ಮೀ ಪೂಜೆಯನ್ನು ಮಾಡಿಸಿದರು. ಮಂಗಳ ಮುಖಿಯರನ್ನು ಬರಮಾಡಿಕೊಂಡು ವಿಶೇಷವಾದ ಆತಿಥ್ಯವನ್ನು ನೀಡಿ ನಂತರ ಅವರಿಂದಲೇ ಎಲ್ಲಾ ಸಿದ್ದತೆಗಳನ್ನು ಮಾಡಿಸಿ ನಂತರ ಪೂಜೆಯನ್ನು ಮಾಡಿಸಿದರು.

ಇವರೆಲ್ಲರ ಜೊತೆಯಲ್ಲಿ ಸೇರಿಕೊಂಡ ಮಂಗಳಮುಖಿಯರು ಲಕ್ಷ್ಮೀ ಪೂಜೆಯನ್ನು ಮಾಡಿ ಖುಷಿ ಪಟ್ಟರು.ಮುಖ್ಯವಾಗಿ ಅದರಲ್ಲೂ ವಿಶೇಸವಾಗಿ ಇವರೆಲ್ಲರ ಜೊತೆ ಸೇರಿ ತಾವೇ ಲಕ್ಷ್ಮೀ ಪೂಜೆ ಮಾಡಿ ಖುಷಿಪಟ್ಟ ಮಂಗಳಮುಖಿಯರು. ಸಮಾಜ ಹಾಗೂ ಕುಟುಂಬದಿಂದ ದೂರ ಇದ್ದುವರ ಸಂಭ್ರಮ ಇಮ್ಮಡಿಗೊಳಿಸಿದ್ದು ಕಂಡು ಬಂದಿತು.ಇತ್ತ ಈ ಒಂದು ವಿಶೇಷ ಕಾರ್ಯವನ್ನು ಮಾಡಿದ ಮಂಜುನಾಥ ಮತ್ತು ಗೆಳೆಯರ ಕಾರ್ಯಕ್ಕೆ ಮಂಗಳಮುಖಿಯರು ಹಾಗೂ ಸಾರ್ವಜನಿಕರಿಂದ ಶ್ಲಾಘನೆ ಕಂಡು ಬಂದಿತು.