ಹುಬ್ಬಳ್ಳಿ –
ಲಕ್ಷ್ಮೇಶ್ವರ-ಮುನವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಬಳಿ ನಿರ್ಮಿಸಿರುವ ರೇಲ್ವೆ ಮೇಲ್ಸೇತುವೆಪೂರ್ಣಗೊಂಡು ಹಸ್ತಾಂತರವಾದ 6 ರಿಂದ 7 ತಿಂಗಳಲ್ಲಿ ಹಾನಿಗೊಳ ಗಾಗಿರುವುದು ,ಅದರ ಕಳಪೆ ಗುಣಮಟ್ಟಕ್ಕೆ ಸಾಕ್ಷಿ ಯಾಗಿದೆ.ಈ ಕುರಿತು ಕಾಮಗಾರಿ ಕೈಗೊಂಡ ಗುತ್ತಿಗೆ ದಾರರು,ನಿರ್ವಹಿಸಿದ ಅಂದಿನ ಕೆ ಆರ್ ಡಿ ಸಿ ಎಲ್ ಅಧಿಕಾರಿಗಳನ್ನು ಹೊಣೆ ಮಾಡಬೇಕು.ಗುತ್ತಿಗೆದಾ ರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ವಿವರ ವಾದ ವರದಿಯನ್ನು ಸರ್ಕಾರಕ್ಕೆ ನೀಡಲು ಜಿಲ್ಲಾಧಿ ಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.

ಶಿರೂರ ಬಳಿ ಹಾನಿಗೀಡಾಗಿರುವ ರೇಲ್ವೆ ಮೇಲ್ಸೇತು ವೆ ಸ್ಥಳಕ್ಕೆ ಭೇಟಿ ನೀಡಿ,ವೀಕ್ಷಣೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು
ಸೇತುವೆಯು ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಗೀಡಾಗಲು ಸಾಧ್ಯವಿಲ್ಲ. ಕಾಮಗಾರಿ ಕಳಪೆಯಾಗಿ ಕೈಗೊಂಡು ಹಸ್ತಾಂತರ ಮಾಡಿದ್ದಾರೆ.ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರೊಂದಿಗೂ ಚರ್ಚಿಸಲಾಗಿದೆ.ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ವೆಚ್ಚ ಮಾಡಿದ ಹಣ ಮರು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿ ಕಾರಿಗಳು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದರು.

ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ ಕಾಮಗಾರಿ ಶೀಘ್ರ ಪ್ರಾರಂಭಿಸಬೇಕು ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರ ಪ್ರಾರಂಭವಾದರೆ ತೊಂದರೆಯಾಗುತ್ತದೆ.ಪರ್ಯಾಯ ರಸ್ತೆ ಕಲ್ಪಿಸ ಬೇಕು ಎಂದರು.

ರಾಜ್ಯ ಕೃಷಿ ಉತ್ಪನ್ನ ರಫ್ತು ನಿಗಮದ ಅಧ್ಯಕ್ಷ ಎಸ್. ಐ.ಚಿಕ್ಕನಗೌಡ್ರ,ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿ ಯರ್ ಎಸ್.ಬಿ.ಚೌಡಣ್ಣವರ,ಜಿಲ್ಲಾ ಎಸ್ಪಿ ಕೃಷ್ಣಕಾಂತ,ಜಿಲ್ಲಾಧಿಕಾರಿ ನಿತೀಶ್ ಪಾಟೀಲ್,ಎಮ್ ಆರ್ ಪಾಟೀಲ್,ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
