ಧಾರವಾಡ –
ಗ್ರಾಮ ಪಂಚಾಯತ ಚುನಾವಣೆಯ ಎರಡನೇಯ ಹಂತದ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ. ಈ ಮಧ್ಯೆ ಕಣಕ್ಕೇ ಪತ್ರಕರ್ತರೊಬ್ಬರು ಸ್ಪರ್ಧೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತಿಯ ಅಲ್ಲಾಪೂರ ಗ್ರಾಮದಿಂದ ಸಾಮಾನ್ಯ ವರ್ಗಕ್ಕಾಗಿ ಪತ್ರಕರ್ತ ಮಲ್ಲಿಕಾರ್ಜುನ ರಡ್ಡೇರ ನಾಮಪತ್ರ ಸಲ್ಲಿಸಿದ್ದಾರೆ.
ಗುಡೇನಕಟ್ಟಿ ಗ್ರಾಮ ಪಂಚಾಯತನಲ್ಲಿ ಬೆಂಬಲಿಗರೊಂದಿಗೆ ಮಲ್ಲಿಕಾರ್ಜುನ ರಡ್ಡೇರ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಗುರುಸಿದ್ದಯ್ಯ ಗಂಜಿಗಟ್ಟಿ, ರವಿ ಪಾಟೀಲ , ಅಡಿವಯ್ಯಾ ಪುರವತ್ತಿಮಠ, ಮದಕಪ್ಪ , ಹನಮಂತ ಉಪಸ್ಥಿತರಿದ್ದರು. ಇನ್ನೂ ಮತ್ತೊಂದೆಡೆ ಜಿಲ್ಲೆಯ ಕುಂದಗೋಳದ ಯರಗುಪ್ಪಿ ಗ್ರಾಮ ಪಂಚಾಯಿತಿಗೆ ಲಾಲಸಾಬ ನದಾಫ್ ಸ್ಪರ್ಧೆ ಮಾಡಿದ್ದಾರೆ.
ಚಿಕ್ಕನತಿ೯ ಗ್ರಾಮದ ಲಾಲಸಾಬ ನದಾಫ್ (ಅಪ್ಪಣ್ಣ) ಅವರು ಯರಗುಪ್ಪಿ ಚುನಾವಣಾ ಅಧಿಕಾರಿ ಎಸ್ ಎಸ್ ಬೆಳವಟಗಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಪರಸುರಾಮ್ ತಗ್ಗಿ ಅವರಿಗೆ ನಾಮ ಪತ್ರ ಸಲ್ಲಿಸಿದರು.
ತಮ್ಮ ಬೆಂಬಲಿಗರೊಂದಿಗೆ ಗ್ರಾಮ ಪಂಚಾಯತನಲ್ಲಿ ಉಮೇದುವಾರಿಕೆಯನ್ನು ಸಲ್ಲಿಸಿದ್ರು. ಇನ್ನೂ ಈ ಸಂದರ್ಭದಲ್ಲಿ ಕಲ್ಮೇಶ ಬೆಳವಟಗಿ, ಉಳವಪ್ಪ ಬಿಳೇಬಾಳ , ಸೇರಿದಂತೆ ಹಲವರು ಉಪಸ್ಥಿತರಿದ್ದರು.