ಧಾರವಾಡ –
ಹೊಸ ಸಿ ಅಂಡ್ ರೂಲ್ ಬಂದಾಗಿನಿಂದಲೂ ರಾಜ್ಯ ದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕದಲ್ಲಾಗಲಿ ಅಥವಾ ಅವರಿಗೆ ಬಡ್ತಿ ನೀಡುವ ವಿಚಾರದಲ್ಲಾಗಲಿ, ಹಾಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಶಿಕ್ಷಕ ಶಿಕ್ಷಕಿಯರಿಗೆ ಮೇಲಿಂದ ಮೇಲೆ ಹಲವಾರು ಸಮಸ್ಯೆ ಗಳು ಎದುರಾಗುತ್ತಲೇ ಇವೆ.ಹೌದು ಇಲ್ಲಿಯವರೆಗೆ 1-7 ನೇ ತರಗತಿ ಬೋದನೆಗಾಗಿ ನೇಮಕವಾದ ಶಿಕ್ಷಕರನ್ನು ಇಂದು 1-5 ನೇ ತರಗತಿಗೆ ಸೀಮಿತಗೊಳಿ ಸಿರುವುದು 6-8 ನೇ ತರಗತಿಗೆ ಪದವಿ ಮಾಡಿದವ ರನ್ನು ನೇರವಾಗಿ ನೇಮಕಾತಿ ಮಾಡಿರುವುದು ಪ್ರಸ್ತುತ ಕಾರ್ಯ ನಿರತ ಶಿಕ್ಷಕರುಗಳ ಉನ್ನತ ವಿದ್ಯಾರ್ಹತೆಗೆ ಹಾಗೂ ಅವರು ಸಲ್ಲಿಸುವ ದೀರ್ಘ ಸೇವಾವಧಿಯ ಅನುಭವಕ್ಕೆ ಕಿಂಚಿತ್ತು ಮಾನ್ಯತೆ ಇಲ್ಲದಂತಾಗಿದೆ.ಇಂದು ಅವರನ್ನು 1-5 ನೇ ತರಗತಿಗೆ ಮಾತ್ರ ಸೀಮಿತಗೊಳಿಸಿರುವುದು ಹಿಂಬಡ್ತಿ ನೀಡಿ ದಂತೆ ಮಾಡಲಾಗಿದೆ.

ಇದು ರಾಜ್ಯದ ಎಲ್ಲಾ ಶಿಕ್ಷಕ ರಿಗೂ ಅಸಮಾಧಾನವ ನ್ನುಂಟು ಮಾಡಿದೆ.ಸರ್ಕಾರ ಕ್ಕೆ ಹಲವಾರು ಬಾರಿ ಈ ವಿಷಯವಾಗಿ ಸಿ ಅಂಡ್ ಆರ್ ನಿಯಮ ತಿದ್ದುಪಡಿ ಮಾಡಿ ಕಾರ್ಯನಿರತ ಶಿಕ್ಷಕರು ಗಳಿಸಿರುವ ಉನ್ನತ ಪದವಿ ವಿದ್ಯಾರ್ಹತೆ ಯನ್ನು ಪರಿಗಣಿಸಿ ಮೊದಲು ಅವರನ್ನು 6-8 ನೇ ತರಗತಿ ಬೋಧಕರೆಂದು ವಿಲೀನ ಮಾಡಿ ನಂತರ ದಲ್ಲಿ ಉಳಿದ ಖಾಲಿ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಿ ಎಂದು ಮನವಿ ಸಲ್ಲಿಸಿ ದ್ದು,ಸರ್ಕಾರವು ಇದ ಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿತ್ತಾದ ರೂ ಮುಂದುವರೆದು ಶಿಕ್ಷಕರ ಬಡ್ತಿ ವಿಚಾರದಲ್ಲಿಯೂ ಸಮಸ್ಯೆಯುಂಟಾಗಿದೆ.

ಹಿಂದಿನಿಂದಲೂ 1-7 ನೇ ತರಗತಿ ಬೋದಿಸುತ್ತಿದ್ದ ಶಿಕ್ಷಕರನ್ನು ಇಲಾಖೆಯು ಅವರ ವಿದ್ಯಾರ್ಹತೆ ಪರಿಗ ಣಿಸಿ 8-10 ತರಗತಿ ಪ್ರೌಢ ಶಾಲೆಗೆ ಬಡ್ತಿ ನೀಡುವ ಪ್ರಕ್ರಿಯೆ ನಡೆಸುತ್ತಲೇ ಬಂದಿ ತ್ತು.ಅದೇ ರೀತಿ ಕಳೆದ ವರ್ಷದಲ್ಲು ಹಲವಾರು ಶಿಕ್ಷಕ ರಿಗೆ ಬಡ್ತಿ ಭಾಗ್ಯ ಲಭಿಸಿತ್ತು.ಇದನ್ನು ಪ್ರಶ್ನಿಸಿ ಪದವೀ ಧರ(6-8) ಶಿಕ್ಷಕರು ನ್ಯಾಯಾಲಯದ ಮೊರೆ ಹೋಗಿ ದ್ದರ ಪರಿಣಾಮ ಪ್ರಸ್ತುತ ಜಾರಿಯಲ್ಲಿದ್ದ ಸಿ ಅಂಡ್ ಆರ್ ನಿಯಮವನ್ನು ಎತ್ತಿಹಿಡಿದು ಇಂದು ಪ್ರಾಥ ಮಿಕ ಶಾಲಾ ಶಿಕ್ಷಕರು 8-10 ನೇ ತರಗತಿಗೆ ಬಡ್ತಿ ಹೊಂದ ಲು ಅನರ್ಹರು ಹಾಗೂ ಈಗಾಗಲೆ ಬಡ್ತಿ ಹೊಂದಿದ್ದ ಸುಮಾರು 8000 ಶಿಕ್ಷಕರಿಗೆ ಹಿಂಬಡ್ತಿ ನೀಡಲು ಘನ ನ್ಯಾಯಾಲಯ ತೀರ್ಪು ನೀಡಿದೆ. ಎಲ್ಲಾ ಕಾರ್ಯನಿ ರತ ಶಿಕ್ಷಕರಿಗೆ ಈ ತೀರ್ಪಿನಿಂದ ಆಘಾತವಾಗಿದೆ

ಇದರ ಜೊತೆಗೆ ಮನ ನೋವಾಗಿದೆ ಅವರ ಉನ್ನತ ವಿದ್ಯಾರ್ಹತೆ ಹಾಗೂ ಅವರ ಸುದೀ ರ್ಘ ಸೇವಾ ಅನುಭವಕ್ಕೆ ಬೆಲೆಯೇ ಇಲ್ಲದಂತಾಗಿದೆ,ಈ ಸಂಬಂ ಧ ಘನ ಸರ್ಕಾರವು ಗಮನಾರ್ಹವಾಗಿ ಪರಿಗಣಿಸಿ ಘನ ನ್ಯಾಯಾಲಯಕ್ಕೆ ಮರು ಪರಿಶೀಲಿ ಸುವಂತೆ ಕೋರಿ ಮನವಿ ಸಲ್ಲಿಸುವಂತೆ ಹಾಗೂ ಸುಮಾರು 8000 ಶಿಕ್ಷಕರ ಪರ ನಿಲ್ಲಲು ಹಾಗೂ ಮುಂದೆಯೂ ಇಂತ ಸಮಸ್ಯೆಗಳು ಶಿಕ್ಷಕರಿಗೆ ಬಾರದಂತೆ, ಸಾವಿರಾ ರು ಶಿಕ್ಷಕರ ಉನ್ನತ ವಿದ್ಯಾರ್ಹತೆಗೆ ಹಾಗೂ ಅವರು ಸಲ್ಲಿಸುತ್ತಿರುವ ಸುದೀರ್ಘ ಸೇವಾ ಅನುಭವಕ್ಕೆ ಸೂಕ್ತ ನ್ಯಾಯ ಒದಗಿಸಲು ಸಿ ಅಂಡ್ ಆರ್ ನಿಯಮವನ್ನು ತಿದ್ದುಪಡಿ ಮಾಡಿ ಅನುಕೂಲ ಮಾಡಿಕೊಡುವಂತೆ ನಮ್ಮ ಕರ್ನಾಟಕ ರಾಜ್ಯ ಸಾವಿ ತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮನವಿಯನ್ನು ಮಾಡಿದೆ.ಡಾ.ಲತಾ. ಎಸ್. ಮುಳ್ಳೂರ ಸ0ಸ್ಥಾಪಕ ರಾಜ್ಯಾಧ್ಯಕ್ಷರು ಶ್ರೀಮತಿ ಜ್ಯೋತಿ. H.ರಾಜ್ಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಹಾಗೂ ಸರ್ವ ಸದಸ್ಯರು