This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

ಮನೆಗಳನ್ನು ಹಸ್ತಾಂತರ ಮಾಡಿದ ಶಾಸಕ ಮಹೇಶ್ ಟೆಂಗಿನಕಾಯಿ – ಕೊಟ್ಟ ಮಾತಿನಂತೆ ನಡೆದುಕೊಂಡ ಶಾಸಕರು…..ಆಯುಕ್ತ ಡಾ ರುದ್ರೇಶ ಘಾಳಿ ಉಪಸ್ಥಿತಿ…..

ಮನೆಗಳನ್ನು ಹಸ್ತಾಂತರ ಮಾಡಿದ ಶಾಸಕ ಮಹೇಶ್ ಟೆಂಗಿನಕಾಯಿ – ಕೊಟ್ಟ ಮಾತಿನಂತೆ ನಡೆದುಕೊಂಡ ಶಾಸಕರು…..ಆಯುಕ್ತ ಡಾ ರುದ್ರೇಶ ಘಾಳಿ ಉಪಸ್ಥಿತಿ…..
WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ  ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಿರುವ ವಸತಿ‌ ಸಮುಚ್ಚಯದಲ್ಲಿ ಹೊಸೂರಿನ‌ ವೀರ ಮಾರುತಿ ನಗರದ ಕೊಳೆಗೇರಿ ನಿವಾಸಿಗಳಿಗೆ ಮನೆಗಳನ್ನು‌ ಚೀಟಿ ಎತ್ತುವ ಮೂಲಕ ಹಂಚಿಕೆ ಮಾಡಲಾಯಿತು.ನಾಲ್ಕು ಬ್ಲಾಕ್‌ಗಳಲ್ಲಿ ಒಟ್ಟು 80 ಮನೆಗಳನ್ನು ನಿರ್ಮಿಸಲಾಗಿದೆ. ವಾಣಿವಿಲಾಸ ವೃತ್ತದಿಂದ ಬಿಆರ್‌ಟಿಎಸ್ ಡಿಪೊವರೆಗೆ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಮನೆ ಕಳೆದುಕೊಳ್ಳುವವರಿಗೆ ಮೊದಲ ಹಂತದಲ್ಲಿ ಮನೆಗಳನ್ನು  ಶಾಸಕ ಮಹೇಶ್ ಟೆಂಗಿನಕಾಯಿ,ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ  ಅವರು ಹಂಚಿಕೆ ಮಾಡಿದರು

‘ಸ್ಮಾರ್ಟ್ ಸಿಟಿ ಯೋಜನೆ ಅಡಿ ₹18 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಒಂದೊಂದು ಬ್ಲಾಕ್‌ ನಲ್ಲಿ 20 ಮನೆಗಳಿದ್ದು, ಪ್ರತಿ ಮನೆಗೆ ₹7.50 ಲಕ್ಷ ಖರ್ಚು ಮಾಡಲಾಗಿದೆ. ಲಿಫ್ಟ್, ಪಾರ್ಕಿಂಗ್, ಓವರ್ ಹೆಡ್ ಟ್ಯಾಂಕ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳಿವೆ. ವಿವಿಧ ಕಾರಣಗಳಿಂದಾಗಿ ಮೂರು ಲ್ಕು ವರ್ಷಗಳಿಂದ ಮನೆ ಹಂಚಿಕೆ ವಿಳಂಬವಾಗಿತ್ತು

‘ರಸ್ತೆ ಕಾಮಗಾರಿಗೆ ಮನೆ ಕಳೆದುಕೊಳ್ಳುವ 45 ಕುಟುಂಬಗಳಿಗೆ ಮೊದಲ ಹಂತದಲ್ಲಿ ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಆ ಪೈಕಿ 39 ಜನರಿಗೆ ಮನೆ ಹಂಚಿಕೆಯಾಗಿದೆ. ಇನ್ನುಳಿದ ಆರು ಜನರ ದಾಖಲೆ ಪರಿಶೀಲಿಸಿ ಎರಡರ ರು ದಿನಗಳಲ್ಲಿ ಹಂಚಿಕೆ ಮಾಡಲಾಗುವುದು. ಎರಡನೇ ಹಂತದಲ್ಲಿ ಉಳಿದ ಮನೆಗಳನ್ನು‌ ಹಂಚಿಕೆ ಮಾಡಲಾಗುವುದು. ಮನೆಗಳನ್ನು ಬೇರೆಯವರಿಗೆ ಬಾಡಿಗೆ ನೀಡದೆ ಫಲಾನುಭವಿಗಳೇ ಅಲ್ಲಿ ವಾಸ ಮಾಡಬೇಕು ಎಂದು ಹೇಳಿದರು.

‘ಫಲಾನುಭವಿಗಳಲ್ಲಿ ಬಹುತೇಕರು ಕೂಲಿ ಕೆಲಸ ಮಾಡುತ್ತಾರೆ. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಈ‌ಗ ಹಂಚಿಕೆಯಾದ ಮನೆಗಳಿಗಾಗಿ ಫಲಾನುಭವಿಗಳು ಯಾರಿಗೂ ಹಣ ನೀಡುವ ಅಗತ್ಯ ಇಲ್ಲ. ಈ ಮನೆಗಳನ್ನು ಉಚಿತವಾಗಿ ಹಂಚಿಕೆ ಮಾಡ ಲಾಗಿದೆ. ಅಲ್ಲಿನ ನಿವಾಸಿಗಳು ಸಂಘ ರಚಿಸಿಕೊಂಡು ಮನೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳ ಬೇಕು’ ಎಂದರು.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ‘ವಸತಿ ಸಮುಚ್ಚಯದ ಬಳಿ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದೆ‌. ವಿದ್ಯುತ್ ಸಂಪರ್ಕವನ್ನು ಫಲಾನುಭವಿಗಳ ಹೆಸರಿನಲ್ಲಿ ಪಡೆದು ಕೊಂಡು, ಸ್ಮಾರ್ಟ್ ವಿದ್ಯುತ್‌ ಮೀಟರ್ ಹಾಕಿಸಿಕೊಳ್ಳ ಬೇಕು. ಅದಕ್ಕೆ ₹10 ಸಾವಿರ ಖರ್ಚಾಗುತ್ತದೆ. ಅದನ್ನು ಫಲಾನುಭವಿಗಳೇ ಭರಿಸಬೇಕು’ ಎಂದರು.

‘ಮೂರ್ನಾಲ್ಕು ದಿನಗಳಲ್ಲಿ ಮನೆಗಳನ್ನು ಸ್ವಚ್ಛಗೊಳಿ ಸಲಾಗುವುದು. ಅಲ್ಲಿ ಒಡೆದಿರುವ ಕಿಟಕಿಗಳ ಗಾಜು ಸರಿಪಡಿಸಲಾಗುವುದು. ಫಲಾನುಭವಿಗಳು ನೂತನ ಮನೆಗಳಿಗೆ ಸ್ಥಳಾಂತರವಾದ ನಂತರ, ವಾಣಿವಿಲಾಸ ವೃತ್ತದಿಂದ ಬಿಆರ್‌ಟಿಎಸ್‌ ಡಿಪೊ‌ವರೆಗೆ ಇರುವ ಅವರ ಮೂಲ‌ಮನೆಗಳನ್ನು‌ ನೆಲಸಮ ಮಾಡಲಾಗುವುದು’ ಎಂದು ತಿಳಿಸಿದರು.

ಈ ಒಂದು ಸಂದರ್ಭದಲ್ಲಿ ಸಿದ್ದು ಮೊಗಲಿಶೆಟ್ಟರ್, ಈಶ್ವರಗೌಡ ಪಾಟೀಲ, ರವಿ ನಾಯಕ್‌, ಮಹಾನಗರ ಪಾಲಿಕೆ ಅಧಿಕಾರಿಗಳು ಇದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……


Google News

 

 

WhatsApp Group Join Now
Telegram Group Join Now
Suddi Sante Desk