ಧಾರವಾಡ –
ನವನಗರ ಇನಸ್ಪೇಕ್ಟರ್ ಪ್ರಭು ಸೂರಿನ್ ಮತ್ತು ನ್ಯಾಯಮಾದಿ ವಿನೋದ ಪಾಟೀಲ ಗಲಾಟೆ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ.ಈಗಾಗಲೇ ಈ ಮೊನ್ನೇ ನಡೆದ ಪ್ರಕರಣದಲ್ಲಿ ನ್ಯಾಯವಾದಿ ವಿನೋದ ಪಾಟೀಲ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೇ ಒಪ್ಪಿಸಿದ್ದಾರೆ. ಸಧ್ಯ ಇದೇಲ್ಲ ಮುಗಿದು ಹೋಗಿರುವ ವಿಚಾರ. ಇವೆಲ್ಲವುದರ ನಡುವೆ ಈ ಒಂದು ಪ್ರಕರಣದಲ್ಲಿ ನ್ಯಾಯವಾದಿ ವಿನೋದ ಪಾಟೀಲರ ಬೆಂಬಲಕ್ಕೇ ಧಾರವಾಡ ನ್ಯಾಯವಾದಿಗಳ ಸಂಘದವರು ನಿಂತುಕೊಂಡಿದ್ದಾರೆ.
ವಿನೋದ ಪಾಟೀಲ ಧಾರವಾಡ ವಕೀಲರ ಸಂಘದ ಸದಸ್ಯರಾಗಿದ್ದು ಇವರ ಮೇಲೆ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯ ಸಿಪಿಐ ಪ್ರಭು ಸೂರಿನ್ ರವರು ವಕೀಲರ ಮೆಲೆ ಹಲ್ಲೆ ನಡೆಸಿರುವದಲ್ಲದೆ ಸುಪ್ರೀಂ ಕೊರ್ಟ ಆದೇಶಕ್ಕೆ ಅವಿಧೆಯತೆ ತೊರಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆಂದು ವಕೀಲರ ಸಂಘ ಆರೋಪಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಬೇಡಿ ಹಾಕಿ ಬಂಧನವನ್ನು ಮಾಡಿ ಕರೆದುಕೊಂಡು ಹೋಗಿದ್ದಾರೆ.
ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಅಲ್ಲದೇ ಸುಪ್ರೀಂ ಕೊರ್ಟ್ ನ ಆದೇಶ ಉಲ್ಲಂಘನೆಯಾಗಿದೆ ಎಂದು ನ್ಯಾಯವಾದಿಗಳ ಸಂಘದವರು ಆರೋಪಿಸಿದ್ದಾರೆ. ಹೀಗಾಗಿ ಈ ಪೋಲಿಸ್ ಅಧಿಕಾರಿಯನ್ನು ಈ ಕೂಡಲೇ ಅಮಾನತ್ತು ಮಾಡಬೇಕು ಅಲ್ಲದೇ ಇಲಾಖಾ ವಿಚಾರಣೆ ಮಾಡಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ನ್ಯಾಯವಾದಿಗಳ ಸಂಘದಿಂದ ಒತ್ತಾಯವನ್ನು ಮಾಡಿದ್ದಾರೆ .ಈ ಘಟನೆ ಕುರಿತು ಧಾರವಾಡ ವಕೀಲರ ಸಂಘದಲ್ಲಿ ಸಭೆ ಮಾಡಿ ನಂತರ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದ ನ್ಯಾಯವಾದಿಗಳು ಪ್ರತಿಭಟನಾ ಮೆರವಣಿಗೆ ಮಾಡಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು ಮನವಿ ತಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಬಾರದಿದ್ದಕ್ಕೇ ಅಸಮಾಧಾನಗೊಂಡ ನ್ಯಾಯವಾದಿಗಳು ಮರಳಿ ಕೋರ್ಟ್ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು.
ಈ ಒಂದು ಪ್ರಕರಣದಲ್ಲಿ ನ್ಯಾಯವಾದಿಗಳ ಮೇಲೆ ಪೊಲೀಸ್ ಅಧಿಕಾರಿ ಮತ್ತು ಪೊಲೀಸರು ಹಲ್ಲೆ ಮಾಡಿ ಕೈಗೆ ಬೇಡಿ ಹಾಕಿದ್ದಾರೆ ಹೀಗಾಗಿ ಕೂಡಲೇ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು. ಸ್ಥಳಕ್ಕೇ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸೋಮವಾರದವರೆಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಸೋಮವಾರ ಮತ್ತೆ ಸಭೆ ಮಾಡಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ.
ಜಿಲ್ಲಾ ವಕೀಲರ ಸಂಘದ ಮುಖಂಡರು ಸದಸ್ಯರು.ಇನ್ನೂ ಇವೆಲ್ಲದರ ನಡುವೆ ಯಾಕೋ ಧಾರವಾಡದಲ್ಲಿ ಪೊಲೀಸರ ಮತ್ತು ನ್ಯಾಯವಾದಿಗಳ ನಡುವೆ ಮತ್ತೊಂದು ಪ್ರಕರಣ ನಡೆದಿದ್ದು ದೊಡ್ಡದಾಗುವ ಮುನ್ನವೇ ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ತಿಳಿಗೊಳಿಸುವುದು ಅವಶ್ಯಕತೆ ಇದೆ.