ಧಾರವಾಡ –
ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನ ಆಸಕ್ತಿ ತೋರುವ ಮೂಲಕ ವ್ಯಕ್ತಿತ್ವ ವಿಕಾಸ ಹೊಂದಬೇಕೆಂದು ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೆಶಕ ಕೆ. ಚಿದಂಬರ ಹೇಳಿದರು.2020-21 ನೇ ಸಾಲಿನ ಧಾರವಾಡ ಶಹರ ತಾಲೂಕು ಮಟ್ಟದ ಖೋ ಖೋ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮಾನಸಿಕ ದೃಢತೆಗೆ ಕ್ರೀಡೆ ಅತ್ಯಂತ ಅಗತ್ಯವಾಗಿದೆ ಎಂದರು.

ಕ್ರೀಡಾ ಕೋಟಾದಡಿ ಶೈಕ್ಷಣಿಕ ಪ್ರವೇಶ , ನೌಕರಿ ಸೇರಿದಂತೆ ಇನ್ನಿತರೆ ಸರ್ಕಾರಿ ಸೌಲಭ್ಯ ಪಡೆಯ ಬಹುದೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಮಾತನಾಡಿ, ಸಾಮಾಜಿಕವಾಗಿ ಮತ್ತು ಸರ್ಕಾರದಿಂದ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಗ್ರಾಮೀಣ ಪ್ರತಿಭೆಗಳೂ ಸಹ ರಾಷ್ಟ್ರ ರಾಜ್ಯಮಟ್ಟದಲ್ಲಿ ಮಿಂಚುತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳು ಕ್ರೀಡೆಯನ್ನು ಬಳಸಿಕೊಂಡು ಬೆಳೆಯಬೇಕೆಂದು ಹೇಳಿದರು.

ಜಿಲ್ಲಾ ಕ್ರೀಡಾ ಸಂಯೋಜನಾಧಿಕಾರಿ ಯು.ಎನ್.ಹಜಾರೆ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಆರ್. ಕೆ. ಇಸ್ಲಾಂಪೂರ, ಕೆ.ಸಿ.ಡಿ ದೈಹಿಕ ಶಿಕ್ಷಣ ನಿರ್ದೇಶಕ ಡಿ.ಬಿ ಗೋವಿಂದಪ್ಪ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಪ್ರಾಚಾರ್ಯ ಎಚ್.ಎಮ್.ಉಡಕೇರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಚಿದಾನಂದ ನಾಯ್ಕರ ಪ್ರತಿಜ್ಞಾವಿಧಿ ಬೋಧಿಸಿದರು. ಸಂಯೋಜಕಿ ಅಶ್ವಿನಿ ಕೊಟ್ಲಿ ವಂದಿಸಿದರು. ಸಂಯೋಜಕ ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು.

ಕ್ರೀಡಾಕೂಟ ಫಲಿತಾಂಶ
ಬಾಲಕರ ವಿಭಾಗ ಕ್ಲಾಸಿಕ್ ಪಿ.ಯು. ಕಾಲೇಜ್ (ಪ್ರಥಮ), ಕೆ.ಇ.ಬೋರ್ಡ (ದ್ವೀತಿಯ ).
ಬಾಲಕಿಯರ ವಿಭಾಗ ಕ್ಲಾಸಿಕ್ ಪಿ.ಯು. ಕಾಲೇಜ್ (ಪ್ರಥಮ), ವಿದ್ಯಾರಣ್ಯ (ದ್ವಿತೀಯ).