ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಮುಖಂಡರು ಬಿಜೆಪಿ ಪಕ್ಷವನ್ನು ಸೇರಿದ್ದಾರೆ.ಹೌದು ಗೋಕುಲ ಗ್ರಾಮದಲ್ಲಿ ವಿವಿಧ ಪಕ್ಷಗಳ ಮತ್ತು ಸಂಘಟನೆಗಳ ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.ಕಾಂಗ್ರೆಸ್ ಪಕ್ಷದ ಮಾರುತಿ ಚಿಕ್ಕಾಡಿ,ಸೋಮಶೇಖರ ಪೂಜಾರ, ಮಾರುತಿ ಬೆಂಗೇರಿ,ಮಾರುತಿ ಉಣಕಲ್ಲ, ಮಂಜು ನಾಥ ಜಾಧವ,ಗಂಗಾಧರ ಯಡವಣ್ಣವರ, ಮಂಜುನಾಥ ಹರಿಜನ ಸೇರಿದಂತೆ 7೦ ಕ್ಕೂ ಹೆಚ್ಚು ಜನರು ಬಿಜೆಪಿಗೆ ಸೇರ್ಪಡೆಯಾದರು.ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶಾಸಕ ಅರವಿಂದ ಬೆಲ್ಲದ ಅವರ ಸಮ್ಮುಖದಲ್ಲಿ ಸೇರಿದರು

ಬಿಜೆಪಿ ಶಾಲು ಹಾಕಿ ಅವರನ್ನು ಪಕ್ಷಕ್ಕೆ ಬರಮಾಡಿ ಕೊಳ್ಳಲಾಯಿತು.ನಂತರ ಮಾತನಾಡಿದ ಶಾಸಕರು. ಭಾರತೀಯ ಜನತಾ ಪಕ್ಷದ ಜನಪರ ಕಾರ್ಯಕ್ರಮ ಗಳನ್ನು ಮೆಚ್ಚಿ ಕಾಂಗ್ರೆಸ್, ಜೆಡಿಎಸ್ ಇನ್ನಿತರ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಅಭಿವೃದ್ಧಿಯ ಉದ್ದೇಶದಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಭಾಜಪ ಪಾಲಿಕೆಯ ಚುನಾವಣೆಯಲ್ಲಿ ಬಹುಮತದೊಂದಿಗೆ ಪುನಃ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಮುಖಂಡರಾದ ರಾಜಣ್ಣ ಕೊರವಿ, ರಾಮಣ್ಣ ಬಡಿಗೇರ,ತಾಲೂಕಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಂಜುನಾಥ ಪೂಜಾರ,ಬಸಪ್ಪ ಯಲಿಗಾರ, ರಾಮಣ್ಣ ಉಣಕಲ್ಲ,ಬಸಪ್ಪ ನಾಯ್ಕರ,ಮುದಕಪ್ಪ ಹೊಸಮನಿ, ಶಿವಣ್ಣ ಹುಲಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.