ಚಿಕ್ಕೋಡಿ –
ಬೆಳಗಾವಿ ಜಿಲ್ಲೆಯಲ್ಲಿ ಕರೋನ ಪ್ರಕರಣ ಗಳು ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಿದ್ದಾರೆ ಇನ್ನೂ ಇತ್ತ ಶಿಕ್ಷಕ ಬಂಧುಗಳಿಗೆ ಮಾಹಿತಿಗಾಗಿ ಎನ್ನುತ್ತಾ DDPI ಸಂದೇಶವೊಂದನ್ನು ಹಾಕಿದ್ದು ದಿನಾಂಕ ೧೧.೧.೨೦೨೨ ರಿಂದ ೧೮.೧.೨೦೨೨ ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾ ಗಿರುವುದರಿಂದ ಶಾಲೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ ಇವರು ರಜೆ ಘೋಷಣೆ ಮಾಡಿದ್ದಾರೆ.ಈ ರಜೆ ಕೇವಲ ಮಕ್ಕಳಿಗೆ ಮಾತ್ರ ಇದ್ದು ಶಿಕ್ಷಕರು ಎಂದಿನಂತೆ ಶಾಲೆಗಳಿಗೆ ಹಾಜರಾಗುವಂತೆ ಡಿಡಿಪಿಐ ಆದೇಶ ವನ್ನು ಹೊರಡಿಸಿದ್ದಾರೆ.
ಹೌದು ಲಸಿಕಾಕರಣ,ನಿರಂತರ ಕಲಿಕಾ ಚಟುವಟಿಕೆಗಳಲ್ಲಿ ಇಲಾಖೆ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುವುದು ಎಂದು ಆದೇಶವನ್ನು ಹೊರಡಿಸಿದ್ದಾರೆ