ಧಾರವಾಡ –
ಮೊನ್ನೆ ಮೊನ್ನೆಯಷ್ಟೇ ಧಾರವಾಡದ ಚಿರತೆಯನ್ನು ಹಿಡಿದು ನೆಮ್ಮದಿಯ ನಿಟ್ಟಿಸಿರುನ್ನು ಬಿಟ್ಟಿದ್ದ ಧಾರವಾಡದ ಕವಲ ಗೇರಿ ಗ್ರಾಮಸ್ಥರಿಗೆ ಮತ್ತೆ ಚಿರತೆ ಚಿಂತೆಯನ್ನುಂಟು ಮಾಡಿದ್ದು ಇಬ್ಬರು ಮಹಿಳೆಯರ ಮೇಲೆ ಚಿರತೆ ದಾಳಿ ಯನ್ನು ಮಾಡಿದೆ.

ಧಾರವಾಡದ ತಾಲೂಕಿನ ಗೋವನಕೊಪ್ಪ ಗ್ರಾಮದ ಬಳಿ ಚಿರತೆ ದಾಳಿಯನ್ನು ಮಾಡಿದ ಘಟನೆ ಕಂಡು ಬಂದಿದೆ. ಗೋವನಕೊಪ್ಪ ಹಾಗೂ ಕವಲಗೇರಿ ಗ್ರಾಮದ ಇಬ್ಬರು ಮಹಿಳೆಯರ ಮೇಲೆ ದಾಳಿಯನ್ನು ಮಾಡಿದ್ದು ಬಸವನ್ನೆವ್ವ ಕುಲಕರ್ಣಿ,ಮಂಜುಳಾ ತೋಟದ ದಾಳಿಗೊಳಗಾದ ಮಹಿಳೆಯರಾಗಿದ್ದಾರೆ.




ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತೆ ಚಿರತೆ ಪತ್ತೆ ಕಾರ್ಯಾಚರಣೆ ಯನ್ನು ಆರಂಭ ಮಾಡಿದ್ದಾರೆ.ಇನ್ನೂ ಇತ್ತ ಗಾಯಾಳು ಮಹಿಳೆಯರಿಬ್ಬರು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ ದ್ದಾರೆ.
ಇತ್ತ ಈ ಒಂದು ಸುದ್ದಿಯನ್ನು ತಿಳಿದ ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರಿಬ್ಬರು ಆರೋಗ್ಯವನ್ನು ವಿಚಾರಣೆ ಮಾಡಿ ನೆರವನ್ನು ನೀಡಿದರು ಶಾಸಕ ಅಮೃತ ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿ ಯಲ್ಲಿ ಘಟನೆ ನಡೆದಿದೆ.