ಭರದಿಂದ ಸಾಗಿದೆ ಬದುಕು ಬಂಡಿ ಚಿತ್ರೀಕರಣ – ಅನಾವರಣಗೊಳ್ಳ ಲಿದೆ ಲೂಸಿ ಸಾಲ್ಡಾನ ರ ಬದುಕು

Suddi Sante Desk

ಧಾರವಾಡ –

ಧಾರವಾಡದ ಅಕ್ಷರತಾಯಿ ದತ್ತಿದಾನಿ ಲೂಸಿ ಸಾಲ್ಡಾನ ರವರ ಜೀವನ ವೃತ್ತಾಂತದ ಚಲನಚಿತ್ರ ಬದುಕು ಬಂಡಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಸಾಹಿತಿ ವಾಯ್ ಬಿ ಕಡಕೋಳ ಅವರು ಚಿತ್ರಕತೆ ಬರೆದಿರುವ ನವರಸ ಸ್ನೇಹಿತರ ವೇದಿಕೆಯ ರಾಜ್ಯಾದ್ಯಕ್ಷರಾದ ಬಾಬಾ ಜಾನ ಮುಲ್ಲಾ ಅವರ ನಿರ್ದೇಶನದಲ್ಲಿ ನಂದಕು ಮಾರ ದ್ಯಾಪೂರ ಅವರ ಸಹನಿರ್ದೇಶನದಲ್ಲಿ ಈ ಚಲನಚಿತ್ರದ ಸೂಟಿಂಗ ಭರದಿಂದ ಸಾಗಿದೆ

ಉತ್ತರ ಕರ್ನಾಟಕದ ಜನಮನ್ನಣೆ ಗಳಿಸಿದ ಧಾರಾವಾಹಿ ಗಿಣಿರಾಮ ನಟಿ ಅನ್ನಪೂರ್ಣ ಲೂಸಿ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಲೂಸಿ ಒಬ್ಬ ಶ್ರೇಷ್ಠ ಶಿಕ್ಷಕಿ ತನ್ನ ಒಂಭತ್ತನೆಯ ವಯಸ್ಸಿನಲ್ಲೇ ರೈಲು ಪ್ರಯಾಣ ಮಾಡುವಾಗ ಹುಬ್ಬಳ್ಳಿಯಲ್ಲಿ ಕಳೆದು ಕೊಂಡ ಮೂರು ಜನರ ಆಶ್ರಯದಲ್ಲಿ ಬೆಳೆದು ಆ ಮೂರು ಜನರಲ್ಲಿ ಒಬ್ಬರು ಅವರನ್ನು ಮದುವೆ ಆಗುತ್ತಾರೆ,

ಮದುವೆಯಾದ ಪತಿ ಮೂರೇ ತಿಂಗಳಲ್ಲಿ ತೀರಿ ಹೋಗುತ್ತಾರೆ ಆಗ ಎಲ್ಲೋ ಎದ್ದು ಬಿದ್ದು ಅಕ್ಷರ ಕಲಿತು ಅಕ್ಷರತಾಯಿ ಅನಿಸಿಕೊಂಡು ತನ್ನ ನೌಕರಿ ಜೀವನದಲ್ಲಿ ಕೂಡಿಟ್ಟ ಎಲ್ಲಾ ಹಣವನ್ನು ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಆಸರೆಯಾಗಲಿ‌ ಎಂದು ದತ್ತಿ ನೀಡುತ್ತಿದ್ದಾರೆ

ಅವರು ಇದುವರೆಗೆ ದತ್ತಿ ನೀಡಿದ ಶಾಲೆಗಳು‌ ಒಟ್ಟು 84 ಆಗಿವೆ ಸದ್ಯ ಎಪ್ಪತ್ತು ವಯಸ್ಸಿನ ಈ ಮಹಾ ತಾಯಿ ತನ್ನ ಪಿಂಚಣಿ ಹಣದಲ್ಲಿ ಹಣವನ್ನು ಕೂಡಿಟ್ಟು ಪ್ರತಿವರ್ಷ ಎರಡು ಮೂರು ಶಾಲೆಗಳಿಗೆ ದತ್ತಿ ನೀಡುತ್ತಿದ್ದಾರೆ ಎಂದು ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾದ್ಯಕ್ಷರು ಭೀಮಪ್ಪ ಕಾಸಾಯಿ ಅದ್ಯಕ್ಷರ ಎಲ್ ಐ ಲಕ್ಕಮ್ಮನವರ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ ಕೋಶಾದ್ಯಕ್ಷರು ಅಜೀತಸಿಂಗ ರಜಪೂತ ವಿವರಿಸಿದರು

ಮುಂದಿನ ತಿಂಗಳು ಅಕ್ಟೋಬರ್‌ನಲ್ಲಿ ಈ ಸಿನೆಮಾ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ಬಾಬಾಜಾನ ಮುಲ್ಲಾ ತಿಳಿಸಿದರು, ಶಿಕ್ಷಕರತ್ನ ಶ್ರಮಿಕರತ್ನ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಲೂಸಿ ಅವರ ಅಡುಗೆ ವೈವಿಧ್ಯ ಪುಸ್ತಕವನ್ನು ಶ್ರೀ ವಾಯ್ ಬಿ ಕಡಕೋಳ ಅವರ ಸಂಪಾದಕತ್ವದಲ್ಲಿ ಬಿಡುಗಡೆ ಮಾಡಲಾಗು ವುದು ಎಂದು ಎಲ್ ಐ ಲಕ್ಕಮ್ಮನವರ ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.