ಧಾರವಾಡ –
ಧಾರವಾಡದ ಆರ್ ಎನ್ ಶೆಟ್ಟಿ ಶೆಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ತರಭೇತಿ ಕಾರ್ಯಕ್ರಮ ನಡೆಯುತ್ತಿದೆ. ಐದು ದಿನಗಳ ಕೌಶಲ್ಯ ತರಭೇತಿ ಕಾರ್ಯಕ್ರಮದಲ್ಲಿ ಧಾರವಾಡ ಶಹರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದಾರೆ. ಪ್ರಮುಖವಾಗಿ ಈ ಒಂದು ಕೌಶಲ್ಯ ತರಭೇತಿಯಲ್ಲಿ ದಿನಕ್ಕೊಂದು ವಿಚಾರ ಗಳ ಕುರಿತಂತೆ ಶಿಕ್ಷಕರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ.ಇನ್ನೂ ದಿನಕ್ಕೊಂದು ಇಲಾಖೆಗಳ ಕಾರ್ಯ ವೈಖರಿ ಕುರಿತಂತೆ ಇಲ್ಲಿ ಹೇಳಲಾಗುತ್ತಿದ್ದು ಇಂದು ರಸ್ತೆ ಸುರಕ್ಷತಾ ನಿಯಮಗಳ ಕುರಿತಂತೆ ಧಾರವಾಡ ಸಂಚಾರಿ ಪೊಲೀಸರು ಮಾಹಿತಿಯನ್ನು ನೀಡಿದರು.
ಸಂಚಾರ ಮಾಡುವಾಗ ಯಾವ ಯಾವ ನಿಮಯಗಳನ್ನು ಪಾಲನೆ ಮಾಡಬೇಕು ಯಾತಕ್ಕಾಗಿ ಪಾಲಿಸಬೇಕು ಮುಖ್ಯ ಉದ್ದೇಶ ಏನು ಅದರಲ್ಲಿ ನಮ್ಮ ಪಾತ್ರ ಏನು ಹೀಗೆ ಹಲವಾರು ವಿಚಾರಗಳ ಕುರಿತಂತೆ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಮಾಹಿತಿಯನ್ನು ನೀಡಿದರು. ಸಂಚಾರಿ ಪೊಲೀಸ್ ಠಾಣೆಯ Asi ಎಮ್ ಎಸ್ ಕರಿಗನ್ನವರ ಮುಖ್ಯಪೇದೆ ಬಸಯ್ಯ ಸುತಗಟ್ಟಿಮಠ ಅವರು ಶಿಕ್ಷಕರಿಗೆ ರಸ್ತೆ ಸುರಕ್ಷತೆ ಕುರಿತಂತೆ ಸಮಗ್ರವಾಗಿ ತಿಳಿಸಿಕೊಟ್ಟರು.
ಒಂದೂವರೆ ಘಂಟೆಗಳ ಕಾಲ ನಿಮಯಗಳ ಕುರಿತಂತೆ ಮಾಹಿತಿ ನೀಡಿದರು.ಇನ್ನೂ ಇದೇ ವೇಳೆ ಮುಖ್ಯಪೇದೆ ಬಸಯ್ಯ ಸುತಗಟ್ಟಿಮಠ ಅವರು ಕೂಡಾ ಸಂಚಾರಿ ರಸ್ತೆಯಲ್ಲಿ ವಾಹನ ಚಲಾವಣೆ ಮಾಡೊದು ಅಲ್ಲದೇ ಅದರೊಂದಿಗೆ ನಾವು ಹೇಗೆ ಕಾಳಜಿ ತಗೆದುಕೊಳ್ಳಬೇಕು ಇವೆಲ್ಲ ವಿಚಾರ ಕುರಿತಂತೆ ಹೇಳಿಕೊಟ್ಟರು.
ಒಟ್ಟಾರೆ ಜೀವನ ಕೌಶಲ್ಯ ತರಭೇತಿ ಕಾರ್ಯಾಗಾರದಲ್ಲಿ ಸಮಗ್ರವಾದ ಮಾಹಿತಿಯನ್ನು ಧಾರವಾಡ ಸಂಚಾರಿ ಪೊಲೀಸ್ ಠಾಣೆ ಪರವಾಗಿ ಈ ಇಬ್ಬರು ಸಿಬ್ಬಂದಿಗಳು ಪಾಲ್ಗೊಂಡು ಮಾಹಿತಿಯನ್ನು ನೀಡಿದರು.
ಈ ಒಂದು ತರಭೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನಾಗಲಿಂಗ ಹುಗ್ಗಿ, ವಿ ಜಿ ಕಂಬಿ, ಎಸ್ ಐ ಮೊರಬ, ವಿ ಬಿ ಹೊಸಕೇರಿ ,ಎಸ್ ವೈ ಇದಿಯಮ್ಮನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.