ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಅಲ್ತಾಫ್ ಹಳ್ಳೂರನ್ನು ಬದಲಾವಣೆ ಮಾಡ ಲು ಕೈ ಪಕ್ಷದ ಮುಖಂಡರು ಪ್ಲಾನ್ ಮಾಡಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಈಗ ಕೇಳಿ ಬರುತ್ತಿವೆ. ಕಳೆದ ನಾಲ್ಕು ವರುಷಗಳಿಂದ ಪಕ್ಷದ ಮಹಾನಗರ ಘಟಕದ ಅಧ್ಯಕ್ಷರಾಗಿರುವ ಇವರನ್ನು ಬರುವ ಮಹಾನಗರ ಪಾಲಿಕೆಯ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳನ್ನು ಮುಂದಿಟ್ಟು ಕೊಂಡು ಪಕ್ಷದ ವರಿಷ್ಠರು ಬದಲಾವಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.ಈ ಕುರಿತಂತೆ ಸುದ್ದಿ ಸಂತೆ ವೆಬ್ ನ್ಯೂಸ್ ನೊಂದಿಗೆ ಪಕ್ಷದ ವರಿಷ್ಠ ರೊಬ್ಬರು ಮಾತನಾಡಿ ಈ ಕುರಿತಂತೆ ಮಾಹಿತಿಯ ನ್ನು ಯನ್ನು ನೀಡಿದರು.

ಬದಲಾವಣೆಗೆ ಕಾರಣಗಳು
ಅಲ್ತಾಫ್ ಹಳ್ಳೂರ ಹುಬ್ಬಳ್ಳಿ ಧಾರವಾಡ ಮಹಾನಗ ರ ಕೈ ಪಕ್ಷದ ಅಧ್ಯಕ್ಷರಾಗಿ ನಾಲ್ಕು ವರುಷಗಳಾಗಿದ್ದು ನಾಲ್ಕು ವರುಷಗಳ ಅವಧಿಯಲ್ಲಿ ಇವರು ನೀರಿಕ್ಷತ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನಾಗಲಿ ಯಾವು ದೇ ಚುನಾವಣೆಯನ್ನಾಗಿ ಸಾಧನೆ ಮಾಡಿಲ್ಲ ಎಂಬ ಮಾತುಗಳು ಪಕ್ಷದ ನಾಯಕರು ಮುಖಂಡರಿಂದ ಕೇಳಿ ಬರುತ್ತಿವೆ ಹಾಗೇ ಪ್ರಮುಖ ವಾಗಿ ಇತ್ತೀಚಿಗೆ ಅವರಿವರನ್ನು ಕಡೆಗಣನೆಗೆ ಮಾಡು ತ್ತಿದ್ದು ಹೀಗಾಗಿ ಹಲವರು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಿ ದ್ದಾರೆ. ಹೀಗಾಗಿ ಇದನ್ನೇಲ್ಲವನ್ನು ಮುಂದಿಟ್ಟುಕೊಂ ಡು ಗಮನದಲ್ಲಿಟ್ಟುಕೊಂಡು ಪಕ್ಷದ ವರಿಷ್ಠರು ಅಲ್ತಾಫ್ ಹಳ್ಳೂರ ಅವರನ್ನು ಬದಲಾವಣೆ ಮಾಡ ಲು ಮುಂದಾಗಿದ್ದಾರೆ. ಅಲ್ಲದೇ ಬರುವ ಮಹಾನಗರ ಪಾಲಿಕೆಯ ಚುನಾವಣೆಯನ್ನು ಮುಂದಿಟ್ಟುಕೊಂ ಡು ಈ ಒಂದು ನಿರ್ಧಾರಕ್ಕೆ ಪಕ್ಷದ ವರಿಷ್ಠರು ಬಂದಿ ದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ರೇಸ್ ನಲ್ಲಿದ್ದವರು
ಸಾಮಾನ್ಯವಾಗಿ ಈ ಒಂದು ಹಿಂದಿನ ಇತಿಹಾಸ ವನ್ನು ನೊಡಿದರೆ ಜಬ್ಬಾರ್ ಖಾನ್ ಹೊನ್ನಳ್ಳಿ ಕೆಲವು ವರುಷಗಳ ಕಾಲ ನಂತರ ಎ ಎಮ್ ಹಿಂಡಸಗೇರಿ ಏಳು ವರುಷಗಳ ಕಾಲ ನಂತರ ಸಧ್ಯ ಅಲ್ತಾಫ್ ಹಳ್ಳೂರ ಕಳೆದ ನಾಲ್ಕು ವರುಷಗಳಿಂದ ಅಧ್ಯಕ್ಷ ರಾಗಿದ್ದಾರೆ. ಈ ಮೂವರು ನಾಯಕರು ಹಿಂದೂಳಿದ ವರ್ಗಗಳಿಂದ ಪ್ರತಿನಿಧಿಸಿದವರಾಗಿದ್ದು ಸಧ್ಯ ಬೇರೆ ಯಾವುದಾದರೂ ಸಮುದಾಯದ ಮುಖಂಡರಿಗೆ ಇಲ್ಲವೇ ನಾಯಕರಿಗೆ ಹುಬ್ಬಳ್ಳಿ ಧಾರವಾಡ ಮಹಾ ನಗರ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸ್ಥಾನ ಸಿಗಲಿದೆ ಇಲ್ಲವೇ ಮತ್ತೆ ಹಿಂದೂಳಿದ ವರ್ಗಕ್ಕೆ ಅಧ್ಯಕ್ಷ ಸ್ಥಾನ ಸಿಗಲಿದೆ.

ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದವರು
ಸದಾನಂದ ಡಂಗನ್ನವರ ಮತ್ತು ರಾಜಶೇಖರ ಮೆಣಸಿನಕಾಯಿ ಸಾಮಾನ್ಯ ವರ್ಗ ದಿಂದ ಇನ್ನೂ
ಅಸ್ಪಾಕ್ ಕಮಾಟಾಕರ್ ಮತ್ತು ಅನ್ವರ್ ಮುಧೋ ಳ ಹಿಂದೂಳಿದ ವರ್ಗದಿಂದ ಆಕಾಂಕ್ಷೆಗಳಾಗಿದ್ದಾರೆ




ಹೀಗೆ ನಾಲ್ಕೈದು ಜನರು ಹೊಸ ಅಧ್ಯಕ್ಷರ ಸ್ಥಾನದ ಆಕಾಂಕ್ಷಿಯಲ್ಲಿದ್ದು ಇನ್ನೂ ಮುಖ್ಯವಾಗಿ ಮತ್ತೆ ಹಿಂದೂಳಿದ ವರ್ಗದ ನಾಯಕರಿಗೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನವನ್ನು ನೀಡಿದರೆ ಅಸ್ಪಾಕ್ ಕಮಾಟಾ ಕರ್ ಗೆ ನೀಡಲು ಪಕ್ಷದ ವರಿಷ್ಠರು ತಿರ್ಮಾನವನ್ನು ಕೈಗೊಂಡಿದ್ದು ಕಳೆದ ಹಲವಾರು ವರುಷಗಳಿಂದ ಇವರು ಪಕ್ಷಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಸಾಕಷ್ಟು ಪ್ರಮಾಣದಲ್ಲಿ ಶ್ರಮಿಸಿದ್ದಾರೆ. ಅಲ್ಲದೇ ಯುವ ಉತ್ಸಾಹಿ ಆಗಿರುವ ಇವರು ಹತ್ತು ಹಲ ವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು ಇದನ್ನೇಲ್ಲವನ್ನು ನೋಡಿ ಗಮನಿಸಿದ ಪಕ್ಷದ ನಾಯ ಕರು ಬಹುತೇಕವಾಗಿ ಇವರಿಗೆ ನೀಡಲು ತಿರ್ಮಾನವನ್ನು ಕೈಗೊಂಡಿದ್ದಾರೆ. ಇವರಿಗೆ ಅಧ್ಯಕ್ಷ ಸ್ಥಾನವನ್ನ ನೀಡಿದರೆ ಬರುವ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಕ್ಷಕ್ಕೆ ಮತ್ತು ಪಕ್ಷದ ಅಭ್ಯರ್ಥಿಗಳಿಗೆ ಅನು ಕೂಲವಾಗಿಲಿದೆ ಎಂಬ ಮಾತುಗಳು ನಾಯಕರಿಂದ ಕೇಳಿ ಬರುತ್ತಿವೆ