ಬೆಂಗಳೂರು –
ಮಹಾಮಾರಿ ಕರೋನಾ ಕಡಿಮೆಯಾಗುತ್ತಿರುವ ಮತ್ತು ಕಡಿಮೆಯಾಗದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಜೂನ್ 14 ರಿಂದ ರಾಜ್ಯದಲ್ಲಿ ಲಾಕ್ ಡೌನ್ ಮುಕ್ತಾ ಯವಾಗಲಿದ್ದು ಇನ್ನೂ ಪಾಸಿಟಿವಿಟಿ ರೇಟ್ ಕಡಿಮೆ ಯಾದ ರಾಜ್ಯದಲ್ಲಿನ 11 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಲಾಕ್ ಡೌನ್ ಕುರಿತಂತೆ ಸಭೆ ಮಾಡಿದ ನಂತರ ಮಾತನಾಡಿದ ಅವರು ರಾಜ್ಯದ 11 ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ.ಹಾಸನ,ದಕ್ಷಿಣ ಕನ್ನಡ. ಬೆಳಗಾವಿ, ಕೊಡಗು,ಚಿಕ್ಕಮಂಗಳೂರು,ಶಿವಮೊಗ್ಗ ದಾವಣಗೇರೆ,ಬೆಂಗಳೂರು ಗ್ರಾಮಾಂತರ ಗಳಲ್ಲಿ ಜೂನ್ 21 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಇನ್ನೂಳಿದಂತೆ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಕೆಲವೊಂದಿಷ್ಟು ಕಟ್ಟು ಪಾಡುಗಳನ್ನು ಹೊರಡಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು ಅಧಿಕಾರವನ್ನು ಮುಖ್ಯಮಂತ್ರಿ ನೀಡಿದ್ದಾರೆ. ಹಾಗೇ ಇದರೊಂದಿಗೆ ಕೆಲವೊಂದಿಷ್ಟು ಚಟುವಟಿಕೆಗಳಿಗೆ ಅವಕಾಶವನ್ನು ನೀಡಲಾಗಿದೆ ಎಂದುಮುಖ್ಯಮಂತ್ರಿ ಹೇಳಿದರು.ಇನ್ನೂ ಧಾರವಾಡ ಜಿಲ್ಲೆಯ ವಿಚಾರಕ್ಕೆ ಬಂದರೆ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಯಾದ ಹಿನ್ನಲೆಯಲ್ಲಿ ಜಿಲ್ಲೆಯನ್ನು ಲಾಕ್ ಡೌನ್ ನಿಂದಾಗಿ ಮುಕ್ತವನ್ನಾಗಿ ಮಾಡಿದ್ದು ಉಳಿದಂತೆ ಜೂನ್ 14 ರ ನಂತರ ಜಿಲ್ಲೆಯಲ್ಲಿನ ಚಟುವಟಿಕೆಗಳ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ಅಧಿಕಾರವನ್ನು ನೀಡಿದ್ದಾರೆ ಹೀಗಾಗಿ ಜಿಲ್ಲೆಯಲ್ಲಿನ ಪರಸ್ಥಿತಿ ನೋಡಿಕೊಂಡು ಜಿಲ್ಲಾಧಿ ಕಾರಿಗಳು ನೋಡಿಕೊಂಡು ನಿರ್ಧಾರವನ್ನು ಮಾಡಲಿದ್ದು ಜಿಲ್ಲೆಯಲ್ಲಿನ ಭವಿಷ್ಯ ಏನಾಗಲಿದೆ ಎಂಬೊದು ಡಿಸಿ ಅವರ ಕೈಯಲ್ಲಿದೆ.