This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

ರಾಜ್ಯದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ – ರಾಜ್ಯದ ಯಾವ ಯಾವ ಜಿಲ್ಗೆಗಳು ಯಾವ ಹಂತದಲ್ಲಿ ಕಂಪ್ಲೀಟ್ ಮಾಹಿತಿ…..

ರಾಜ್ಯದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ – ರಾಜ್ಯದ ಯಾವ ಯಾವ ಜಿಲ್ಗೆಗಳು ಯಾವ ಹಂತದಲ್ಲಿ ಕಂಪ್ಲೀಟ್ ಮಾಹಿತಿ…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ – ರಾಜ್ಯದ ಯಾವ ಯಾವ ಜಿಲ್ಗೆಗಳು ಯಾವ ಹಂತದಲ್ಲಿ ಕಂಪ್ಲೀಟ್ ಮಾಹಿತಿ ಹೌದು

ಲೋಕಸಭಾ ಚುನಾವಣೆಗೆ ಕೊನೆಗೂ ಮಹೂರ್ತ ಘೋಷಣೆಯಾಗಿದೆ.ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದ್ದು ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯ ಲಿದೆ.ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಕಳೆದ ಬಾರಿಯಂತೆ ಈ ಬಾರಿಯೂ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ಏ.26 ರಂದು 14 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಮೇ 7ರಂದು ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದು ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.ಮೊದಲ ಹಂತ 14 ಲೋಕಸಭಾ ಕ್ಷೇತ್ರಗಳಿಗೆ ಮಾ.28 ರಂದು ಅಧಿ ಸೂಚನೆ ಹೊರಡಲಿದ್ದು ಮಾ.28 ರಿಂದ ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಇನ್ನೂ ಮೇ 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.8ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಎರಡನೇ ಹಂತದ ಮತ ದಾನ ನಡೆಯಲಿರುವ ಮೇ 7ರ 14 ಲೋಕಸಭಾ ಕ್ಷೇತ್ರಗಳಿಗೆ ಏ.12ರಂದು ಅಧಿ ಸೂಚನೆ ಹೊರಡ ಲಿದೆ.ಏ.12 ರಿಂದ ಏ.19 ರವರೆಗೆ ನಾಮಪತ್ರ ಸಲ್ಲಿಸಬಹುದು

.ಏ.20ರಂದು ನಾಮಪತ್ರಗಳ ಪರಿಶೀಲನೆ, ಏ.22ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ ಮೇ 7ಕ್ಕೆ 2ನೇ ಹಂತದ ಚುನಾವಣೆ ನಡೆಯ ಲಿದೆ.ರಾಜ್ಯದಲ್ಲಿ ಈ ಬಾರಿ ಒಟ್ಟು 5,37,85,815 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನ ನಡೆ ಸಲು ಆಯೋಗ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ತಿಳಿಸಿ ದರು.ಏ.26ರಂದು ಮೊದಲ ಹಂತದ ಮತದಾ ನವು

ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು , ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ,ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಮೇ 7ರಂದು ಎರಡನೇ ಹಂತದ ಮತದಾನವು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯ ಪುರ, ಕಲಬುರ್ಗಿ, ರಾಯಚೂರು, ಬೀದರ್, ಕೊಪ್ಪಳ,ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಿಗೆ ನಡೆಯಲಿದೆ.

ರಾಜ್ಯದ ಒಟ್ಟು ಮತದಾರರು 5,37,85,815
ಪುರುಷ -2,69,33,750
ಮಹಿಳಾ – 2,68,47,145
ಇತರೆ ಮತದಾರರು – 4,920
ಒಟ್ಟು ಮತಗಟ್ಟೆಗಳ ಸಂಖ್ಯೆ-58,834

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk