ಬೆಂಗಳೂರ –
ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ನ ಅಡಿಯಲ್ಲಿ ಮಂಜುನಾಥ್ ಬಿ ರಾಮ್ ರ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ಲವ್ ಇನ್ ಲಾಕ್ ಡೌನ್’ ಚಿತ್ರದ ಚಿತ್ರಿಕರಣ ಭರದಿಂದ ನಡೆದಿದೆ.ಲಾಕ್ ಡೌನ್ ಸಮಯದಲ್ಲಿ ನಡೆದ ಪ್ರೀತಿ ಪ್ರೇಮ ಪ್ರಣಯ ಹಾಗೂ ದುರಂತವೊಂದನ್ನು ಕಣ್ಣಾರೆ ಕಂಡು ತನ್ನ ಕಣ್ಮುಂದೆ ನಡೆದ ನೈಜ್ಯ ಘಟನೆಯನ್ನು ಸಿನಿಮಾ ರೂಪಕ್ಕೆ ತಂದು ನಿರ್ಮಿಸುತ್ತಿರುವ ಚಿತ್ರ ಲವ್ ಇನ್ ಲಾಕ್ ಡೌನ್ ಚಿತ್ರ .
ನಿರ್ದೇಶಕನಾಗುವ ಕನಸು ಕಾಣುವ ಹುಡುಗನೊಬ್ಬ ಕಥೆಯೊಂದರ ಹುಡುಕಾಟದಲ್ಲಿರುವ ನಾಯಕ ನಟನಿಗೆ ಹುಡುಗಿಯೊಬ್ಬಳು ಪರಿಚಯವಾಗಿ.ಆಕೆಯೊಂದಿಗೆ ಪ್ರೀತಿ ರೂಪಗೊಳ್ಳುತ್ತದೆ.ಆದರೆ ವಿಧಿ ಕರೊನ ಕಂಟಕದಲ್ಲಿ ದೂಡಿ ಬಲಿತೆಗೆದುಕೊಳ್ಳುವ ದೃಷ್ಟಾಂತ ಕಥೆ ಇದರಲ್ಲಿದೆ.ಇತ್ತೀಚೆಗೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ಆಚರಿಸಿಕೊಳ್ಳುವುದರ ಜೊತೆಗೆ ನಾ ಕನ್ನಡಿಗನೆಂದುಕೊಂಡು ಬಾಳು ಮಗಾ ಎನ್ನುವ ಕನ್ನಡದ ಮತ್ತು ಕನ್ನಡ ನಾಡಿನ ಮಹತ್ವ ಸಾರುವ ಗೀತೆಯನ್ನು ಸುಮಾರು 40 ಮಂದಿ ನೃತ್ಯ ಕಲಾವಿದರನ್ನು ಬಳಸಿ ಚಿತ್ರೀಕರಿಸಲಾಯಿತು.
ಲವ್ ಇನ್ ಲಾಕ್ ಡೌನ್ ಚಿತ್ರಕ್ಕೆ ಎಂ ನಾರಾಯಣಸ್ವಾಮಿ ಯವರು ಬಂಡವಾಳ ಹೂಡಿದ್ದಾರೆ.ನಾಯಕನಟನಾಗಿ ಉದಯೋನ್ಮುಖ ಪ್ರತಿಭೆ ಮಂಜುನಾಥ್ ಮತ್ತು ನಾಯಕಿಯಾಗಿ ಯಶಸ್ವಿ ನಟಿಸುತ್ತಿದ್ದಾರೆ.ಯಶಸ್ವಿ ಈ ಹಿಂದೆ ಲೆಕ್ಕಾಚಾರ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಇದು ಎರಡನೇ ಚಿತ್ರವಾಗಿದೆ.ಚಿತ್ರದಲ್ಲಿ ಕಿಲ್ಲರ್ ವೆಂಕಟೇಶ್ ಬ್ಯಾಂಕ್ ಜನಾರ್ದನ್ ,ಗಣೇಶ್ ರಾವ್ ,ಬಲರಾಮ್ ಪಾಂಚಾಲ್, ಪಲ್ಲವಿ, ರಾಜೇಂದ್ರ.ಅಪ್ಪು ಶ್ರೀನಾಥ್,ಸಂತೋಷ್ ರೆಹಮಾನ್ ಮೊದಲಾದವರು ಈ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರಮೇಶ್ ಕೊಯಿರಾ ಛಾಯಾಗ್ರಹಣ, ಡ್ಯಾನಿಯಲ್ ಸಂಗೀತ ನಿರ್ದೇಶನ,ಪ್ರಸನ್ನ ಮತ್ತು ಬ್ಲೂಸ್ಟಾರ್ ಸಂತೋಷ್ ನೃತ್ಯ, ಶಿವು ಸಾಹಸ,ನಾಗಸುಮಂತ್ ಸ್ಥಿರಚಿತ್ರಣ ,ಡಾ.ಪ್ರಭು ಗಂಜಿಹಾಳ , ಹಿರಿಯ ಪತ್ರಕರ್ತ ಡಾ.ವೀರೇಶ್ ಹಂಡಗಿ ರವರ ಪ್ರಚಾರ ಕಲೆ ಹಾಗೂ ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿರುವ ಯುವ ನಿರ್ದೇಶಕ ರಾಜೀವ್ ಕೃಷ್ಣ ಈ ಚಿತ್ರ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಈಗಾಗಲೇ ಚಿತ್ರಿಕರಣ ಆರಂಭಗೊಂಡಿದ್ದು ಇದರೊಂದಿಗೆ ಇನ್ನೂ ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು ಚಿಕ್ಕಬಳ್ಳಾಪುರ , ಕೊಲಾರ ಗಜೇಂದ್ರಗಡ , ಬಾಗಲಕೋಟ ಜಿಲ್ಲೆಯಲ್ಲಿ ಚಿತ್ರೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಚಾರ ಕಲೆಯ ಜವಾಬ್ದಾರಿ ಹೊತ್ತುಕೊಂಡಿರುವ ಹಿರಿಯ ಪತ್ರಕರ್ತ ಡಾ ವಿರೇಶ ಹಂಡಗಿ ಸುದ್ದಿ ಸಂತೆ ವೇಬ್ ನ್ಯೂಸ್ ಗೆ ಹೇಳಿದ್ದಾರೆ.