ಧಾರವಾಡ –
ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಅವರ ಬದುಕು ಬರಹ ಸೇರಿದಂತೆ ವಾಯ್ ಬಿ ಕಡಕೋಳ ಅವರ ಸಂಪಾದಕತ್ವದಲ್ಲಿ ವಿವಿಧ ಪುಸ್ತಕಗಳ ಲೋಕಾರ್ಪಣೆ ಹಾಗೂ ಶಿಕ್ಷಕರತ್ನ ಶ್ರಮಿಕರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ಸಂಭವಿಸಿದಂತೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಎಸ್.ಎಸ್.ಬಿರಾದಾರ ಅವರನ್ನು ಧಾರವಾಡದ ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಅವರ ನೇತೃತ್ವದಲ್ಲಿ ಇಂದು ಅವರ ಕಛೇರಿಯಲ್ಲಿ ಭೇಟಿ ಮಾಡಲಾಯಿತು.
ಅಕ್ಷರ ತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆಯ ಮಹಾ ಪೋಷಕರಾದ ಲೂಸಿ ಸಾಲ್ಡಾನ, ಗೌರವ ಅಧ್ಯಕ್ಷರಾದ ಭೀಮಪ್ಪ ಕಾಸಾಯಿ ,ವಿದ್ಯಾ ನಾಡಿಗೇರ,ಅಧ್ಯಕ್ಷರಾದ ಎಲ್.ಆಯ್.ಲಕ್ಕಮ್ಮನವರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಪ್ರಮುಖರಾದ ಮಲ್ಲಿಕಾರ್ಜುನ ಉಪ್ಪಿನ, ಶರಣು ಪೂಜಾರ,ಮುಂತಾದವರು ಭೇಟಿಯಾಗಿ ಅಕ್ಷರ ತಾಯಿ ಲೂಸಿ ಸಾಲ್ಡಾನ ಅವರು ಇದುವರೆಗೆ 84 ಸರಕಾರಿ ಶಾಲೆಗಳಿಗೆ ದತ್ತಿ ನೀಡಿರುವ ಮಾಹಿತಿಯನ್ನು ವಿದ್ಯಾ ನಾಡಿಗೇರ ಇವರಿಂದ ತಿಳಿದುಕೊಂಡು ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು
ಲೂಸಿ ಸಾಲ್ಡಾನ ಅವರ ಜೀವನ ವೃತ್ತಾಂತದ ಮಾಹಿತಿ ಯನ್ನು ಪಡೆದುಕೊಂಡ ಅಪರ ಆಯುಕ್ತರು ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಲೂಸಿ ಸಾಲ್ಡಾನ ಒಬ್ಬ ಶ್ರೇಷ್ಠ ಶಿಕ್ಷಕಿ ಇಲಾಖೆ ನಿಮ್ಮನ್ನು ಗೌರವಿಸಲಿದೆ ,ನಿಮ್ಮ ಈ ದತ್ತಿ ಕಾರ್ಯ ಮುಂದೆ ಸಾಗಲಿ ,ನಿಮಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದರು.ಜೊತೆಗೆ ಅಕ್ಟೋಬರ್ 31 ರಂದು ಅವರ ಪುಸ್ತಕ ಬಿಡುಗಡೆ , ಶಿಕ್ಷಕರತ್ನ ಹಾಗೂ ಶ್ರಮಿಕರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭಕ್ಕೆ ಆಗಮಿಸುವುದಾಗಿ ತಿಳಿಸಿದರು.