ಭೋಪಾಲ್ –
ಮೊನ್ನೆ ಮೊನ್ನೆಯಷ್ಟೇ OPS ಜಾರಿ ಮಾಡಿ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿಯಾಗಿ ಗಿಫ್ಟ್ ನೀಡಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಇದರ ಬೆನ್ನಲ್ಲೇ ಈಗ ಮತ್ತೊಂದು ಕೊಡುಗೆಯನ್ನು ನೀಡಿದ್ದಾರೆ.ಹೌದು ಮಧ್ಯಪ್ರ ದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ವರ್ಷದ ಏಪ್ರಿಲ್‌ನಿಂದ ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಶೇಕಡ 31 ರಷ್ಟು ದರದಲ್ಲಿ ನೀಡಲಾಗು ವುದು ಎಂದು ಘೋಷಿಸಿದ್ದಾರೆ.ಕೇಂದ್ರ. ಪ್ರಸ್ತುತ ರಾಜ್ಯದ ಸರ್ಕಾರಿ ನೌಕರರು ಶೇ 20 ರಷ್ಟು ಡಿಎ ಪಡೆಯುತ್ತಿದ್ದಾರೆ ಮುಖ್ಯಮಂತ್ರಿಗಳ ಈ ಘೋಷಣೆಯಿಂದ ರಾಜ್ಯದ ಸುಮಾರು 7 ಲಕ್ಷ ಉದ್ಯೋಗಿಗಳ ಡಿಎ ಶೇ. 11 ರಷ್ಟು ಏರಿಕೆಯಾಗಲಿದೆ.
ಚೌಹಾಣ್, ಕೋವಿಡ್‌ನಿಂದಾಗಿ ನಾವು ಸರ್ಕಾರಿ ನೌಕರರ ಡಿಎ ಹೆಚ್ಚಿಸಲು ಸಾಧ್ಯವಾಗಲಿಲ್ಲ. ಆದರೆ ಈಗ ಸರ್ಕಾರಿ ನೌಕರರ ಡಿಎ ಶೇ.31ಕ್ಕೆ ಏರಿಕೆಯಾಗಲಿದ್ದು, ಏಪ್ರಿಲ್‌ನಿಂದ ಪಾವತಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.ಕಳೆದ ತಿಂಗಳು ಬಜೆಟ್‌ನಲ್ಲಿ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಜನವರಿ 1, 2004 ರಂದು ಮತ್ತು ನಂತರ ನೇಮಕಗೊಂಡ ತನ್ನ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದಾಗಿ ಘೋಷಿಸಿದೆ.ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಜೈವರ್ಧನ್ ಸಿಂಗ್ ಕಳೆದ ವಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ರಾಜಸ್ಥಾನದಲ್ಲಿ ಜಾರಿ ಮಾಡಿದಂತೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿದರು.ಇದು ಒಂದು ವಿಚಾರವಾದರೆ ಇನ್ನೂ ನಮ್ಮ ರಾಜ್ಯದ ಸರ್ಕಾರಿ ನೌಕರರಿಗೆ ಮಾತಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿಯನ್ನು ನೀಡುತ್ತೆನೆ ಜಾರಿ ಮಾಡುತ್ತೇನೆ ಎನ್ನತ್ತಿದ್ದು ಅದು ಯಾವಾಗ ಜಾರಿಗೆ ಬರುತ್ತದೆ ಎಂಬ ದೊಡ್ಡ ನಿರೀಕ್ಷೆ ಯಲ್ಲಿ ನಾಡಿನ ಸಮಸ್ತ ಸರ್ಕಾರಿ ನೌಕರರಿದ್ದಾರೆ.