ಧಾರವಾಡ –
ಕನ್ನಡ ರಾಜ್ಯೋತ್ಸವ ವನ್ನು ನಾಡಿನಾದ್ಯಂತ ವಿಶೇಷವಾಗಿ ಅದರಲ್ಲೂ ಒಬ್ಬೊಬ್ಬರು ಒಂದೊಂದು ಅರ್ಥಪೂರ್ಣ ವಾದ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಇದರೊಂದಿಗೆ ತಮ್ಮಲ್ಲಿನ ಕನ್ನಡ ಪ್ರೀತಿ ಪ್ರೇಮವನ್ನು ತೋರಿಸಿಕೊಂಡಿದ್ದು ಇವೆಲ್ಲವುಗಳ ನಡುವೆ ಧಾರವಾಡ ದಲ್ಲಿ KSRTC ಬಸ್ ಚಾಲಕ ರೊಬ್ಬರು ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದಾರೆ
ಹೌದು ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡದಿಂದ ಧಾರವಾಡ ಸಂಚರಿಸುವ ಸಾರಿಗೆಯ ಶ್ರೀನಿಧಿ ಎಂಬ ಬಸ್ ನ್ನು ಬಸ್ ಚಾಲಕ ಮಡಿವಾಳಪ್ಪ ಬೆಟಗೇರಿ ಅವರು ರಾಜ್ಯೋತ್ಸವದ ಅಂಗವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಹೂವು ಮತ್ತು ಕನ್ನಡ ಉಳಿಸಿ ಬೆಳಸಿ ಎನ್ನುವ ಜೈಕಾರದ ಬಿತ್ತಿ ಪತ್ರಗಳಿಂದ ಶೃಂಗಾರಗೊಳಿಸಿ ಇದರೊಂದಿಗೆ ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರು
ಸಾಮಾನ್ಯವಾಗಿ ಸರಳವಾಗಿ ಎಲ್ಲರಂತೆ ಇವರು ಕೂಡಾ ಈ ಒಂದು ಕನ್ಬಡ ರಾಜ್ಯೋತ್ಸವ ವನ್ನು ಹಾಗೇ ಹೀಗೆ ಆಚರಣೆ ಮಾಡಬಹುದಿತ್ತು ಆದರೆ ಇವರು ಮಧು ಮಗಳಂತೆ ಬಸ್ ನ್ನು ಶೃಂಗಾರ ಮಾಡಿ ತಳಿಲು ತೋರಣವನ್ನು ಕಟ್ಟಿ ಹೂವಿ ನಿಂದ ಅದನ್ನು ಶೃಂಗಾರ ಮಾಡಿ ಗಮನ ಸೆಳೆದರು.
ಇಷ್ಟೇ ಅಲ್ಲದೇ ಬಸ್ ನಲ್ಲಿ ಸಂಚಾರಿ ಮಾಡುವವರಿಗೆ ಕನ್ನಡ ಅಭಿಮಾನ ಬರುವಂತೆ ಮಾಡಿದರು.ಬಸ್ ಚಾಲಕ ಮಡಿವಾಳಪ್ಪ ಬೆಟಗೇರಿ ಅವರು ತಾವು ಚಾಲಕರಾಗಿ ಸೇರಿ ಸುಮಾರ ೩೨ ವರ್ಷಗಳಿಂದಲೂ ಪ್ರತಿ ವರ್ಷವೂ ಹೀಗೆ ತಪ್ಪದೆ ಮಾಡಿಕೊಂಡು ಬರತಾ ಇದ್ದಾರೆ
ಒಟ್ಟಾರೆ ಕನ್ನಡ ರಾಜ್ಯೋತ್ಸವದಲ್ಲೂ ಈ ರೀತಿಯಾಗಿ ಬಸ್ ಶೃಂಗಾರಗೊಳಿಸುತ್ತಲೇ ಬಂದಿದ್ದು ಹೆಮ್ಮೆಯ ವಿಷಯ