ಹುಬ್ಬಳ್ಳಿ –
ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಣ ದಿನಾಚರಣೆ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಗೌರವ ನಮನ ಕಾರ್ಯಕ್ರಮ ನಡೆಯಿತು.
ಡಾ:ಬಿ.ಆರ್.ಅಂಬೇಡ್ಕರ ರವರ 65ನೇ ಮಹಾಪರಿನಿರ್ವಾಣ ವರ್ಷ ನಿಮಿತ್ಯ ನಗರದ ಗೋಕುಲ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶ ಡಾ:ಬಾಬಾಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿರುವ ಮತ್ತು ಪ್ರಧಾನ ಅಂಚೆ ಕಚೇರಿ ಮುಂದೆ ಇರುವ ಪ್ರತಿಮೆಗೂ ಕೂಡಾ ಮಾಲಾರ್ಪಣೆ ಮಾಡಲಾಯಿತು.
ಸಮತಾ ಸೇನಾ,ಕರ್ನಾಟಕ ರಕ್ಷಣಾ ಸೇನೆ,ಲಿಡಕರ್ ಕುಟೀರ ನಿವಾಸಿಗಳ ಸಂಘ ಮತ್ತು ಶ್ರೀಭುವನೇಶ್ವರಿ ಸೇವಾ ಇದರೊಂದಿಗೆ ವಿವಿಧ ದಲಿತ ಸಂಘ-ಸಂಸ್ಥೆಗಳ ವತಿಯಿಂದ ಈ ಒಂದು ಕಾರ್ಯಕ್ರಮ ನಡೆಯಿತು.
ಸಂವಿಧಾನ ಶಿಲ್ಪಿಯ 65 ನೇ ಮಹಾಪರಿನಿರ್ವಾಣ ವರ್ಷದ ಶ್ರದ್ದಾಂಜಲಿ ಮತ್ತು ಪುಷ್ಪ ನಮನಗಳನ್ನು ಅರ್ಪಿಸಲಾಯಿತು. ಶ್ರೀಮತಿ ಅಂಜಲಿತಾಯಿ ಪ್ರಕಾಶ ಅಂಬೇಡ್ಕರ ರವರು, ಶಾಸಕರಾದ ಪ್ರಸಾದ ಅಬ್ಬಯ್ಯ, ಮಾಜಿ ಸಚಿವರಾದ ಎ.ಎಮ್ .ಹಿಂಡಸಗೇರಿ , ಸಮತಾ ಸೇನಾ ಮುಖಂಡ ಗುರುನಾಥ ಉಳ್ಳಿಕಾಶಿ,ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ,ಗಣೇಶ ಟಗರಗುಂಟಿ, ಚೇತನ ಹಿರೇಕೆರೂರ,ಸದಾನಂದ ಡಂಗನವರ,ಪ್ರೇಮನಾಥ ಚಿಕ್ಕತುಂಬಳ
ಡಾ:ತ್ಯಾಗರಾಜ,ಲಿಡಕರನ ಲೋಹಿತ ಗಾಮನಗಟ್ಟಿ,ರೈಸ್ ಖೋಜೆ,ಉಮೇಶ ಹಲಗಿ,ಮಂಜುನಾಥ ಸಣ್ಣಕ್ಕಿ,ರವಿ ಅಳ್ತಂಡ್ರಾ,ರಘು ಬದವಂತಕರ,ಭೀಮಾ ಹಲಗಿ,ಅನಿಲ ಸಣ್ಣಕ್ಕಿ,ಹನುಮಂತ ಮೂಲಿಮನಿ,ಸಂತೋಷ ಕದಂ,ಇಝಾಜಹ್ಮದ ಉಪ್ಪಿನ,ಯಮನೂರ ಗುಡಿಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಎಲ್ಲರೂ ಸಾಮಾಹಿಕವಾಗಿ ಗೌರವದ ಪುಷ್ಪನಮನ ಸಲ್ಲಿಸಿದರು.