ಧಾರವಾಡ –
ಮಹಾಮಾರಿ ಕೋವಿಡ್ ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದ್ದಿಯೊಬ್ಬರು ಬಲಿ ಯಾಗಿದ್ದಾರೆ.ಹೌದು ಧಾರವಾಡದ ಪಾಲಿಕೆಯ ಮುಖ್ಯ ಕಚೇರಿಯಲ್ಲಿನ ರಾಜು ಅಷ್ಟೇಕರ ಎಂಬ ಸಿಬ್ಬಂದಿಯೇ ಮೃತರಾದ ಸಿಬ್ಬಂದಿಯಾಗಿದ್ದಾರೆ.

ಬಿಲ್ ಕಲೆಕ್ಟರ್ ಆಗಿ ರಾಜು ಅವರು ಕೆಲಸವನ್ನು ಮಾಡ್ತಾ ಇದ್ದರು.ಇನ್ನೂ ಕಳೆದ ಹದಿನೈದು ದಿನಗಳ ಹಿಂದೆ ಇವರಿಗೆ ಸೋಂಕು ಕಾಣಸಿಕೊಂಡು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಹತ್ತು ದಿನಗ ಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳು ತ್ತಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ಸಾವಿಗೀ ಡಾಗಿದ್ದಾರೆ.

40 ವಯಸ್ಸಿನ ರಾಜು ಅವರ ನಿಧನಕ್ಕೆ ಪಾಲಿಕೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ. ಇದರೊಂ ದಿಗೆ ಅಷ್ಟೇಕರ್ ಮತ್ತು ನೀಲಣ್ಣನವರ ಕುಟುಂಬ ದವರು ಕೂಡಾ ಅಗಲಿದ ಯುವ ಉತ್ಸಾಹಿ ಕುಟುಂ ಬದ ಸದಸ್ಯನಿಗೆ ಭಾವಪೂರ್ಣ ನಮನವನ್ನು ಸಲ್ಲಿ ಸಿ ಸಂತಾಪ ಸೂಚಿಸಿದ್ದಾರೆ.