ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ಶಿಕ್ಷಕರ ಸಂಘಗಳ ಒಕ್ಕೂಟ ಮತ್ತು ಏಜುಕೇಶನ್ ಹೆಲ್ಪ್ ಲೈನ್ ಚಾರಿಟಬಲ್ ಸಂಸ್ಥೆ ಯಿಂದ ಕೊಡಮಾಡುವ ಮಹಾತ್ಮ ಜ್ಯೋತಿಬಾ ಫುಲೆ ರಾಷ್ಟ್ರೀಯ ಪ್ರಶಸ್ತಿಗೆ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಕಾಂಬ್ಳೆ ಅವರು ಆಯ್ಕೆ ಯಾಗಿದ್ದಾರೆ.
ಹೌದು ಜನೇವರಿ 3 ರಂದು ಬೆಂಗಳೂರಿನಲ್ಲಿ ಪ್ರಧಾನ ಸಮಾರಂಭ ನಡೆಯಲಿದ್ದು ಸಾವಿತ್ರಿಬಾಯಿ ಫುಲೆ ರಾಷ್ಟ್ರ ಪ್ರಶಸ್ತಿಗೆ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಎಸ್ ಕಾಬ್ಳೆ ಅವರು ಲಭಿಸಿದ್ದು ಶಿಕ್ಷಕರ ಪರವಾಗಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯ ಗಳನ್ನು ಮಾಡಿಕೊಂಡು ಬರುತ್ತಿರುವ ಇವರ ಕಾರ್ಯ ಹೋರಾಟವನ್ನು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಈ ಒಂದು ಪ್ರಶಸ್ತಿಯನ್ನು ನೀಡಲಾಗಿದೆ.
ಇನ್ನೂ ಈ ಒಂದು ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಸಧ್ಯ ರಾಜ್ಯ ಗ್ರಾಮೀಣ ಪ್ರೌಢ ಶಾಲೆಯ ಶಿಕ್ಷಕರ ರಾಜ್ಯಾ ಧ್ಯಕ್ಷರಾಗಿ ಇದರೊಂದಿಗೆ ರಾಯಚೂರಿನ ಲಿಂಗಸೂರು ತಾಲ್ಲೂಕಿನ ಮುದಗಲ್ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯವನ್ನು ಮಾಡುತ್ತಿದ್ದು ಇವರ ಕಾರ್ಯವೈಖರಿ ಮೆಚ್ಚಿ ಈ ಒಂದು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇನ್ನೂ ಜನೇವರಿ 3 ರಂದು ಬೆಂಗಳೂರಿನಲ್ಲಿ ನಡೆಯಲಿ ರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡ ಲಾಗುತ್ತಿದೆ. ಇನ್ನೂ ಪ್ರಶಸ್ತಿಗೆ ಆಯ್ಕೆಯಾದ ಇವರಿಗೆ ನಾಡಿನ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.