ಧಾರವಾಡದಲ್ಲಿ ಪ್ರತಿಷ್ಠಿತ ಧರಣಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಧಾರವಾಡ ಸಂಸ್ಥೆಯ 6 ನೇ ವಾರ್ಷಿಕ ಮಹಾಸಭೆ ಮಹೇಶ್ ಶೆಟ್ಟಿ ಚಾಲನೆ…..

Suddi Sante Desk

ಧಾರವಾಡ –

ಧಾರವಾಡದ ಪ್ರತಿಷ್ಠಿತ ಧರಣಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಧಾರವಾಡ ಸಂಸ್ಥೆಯ 6 ನೇ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರಾದ ಮಹೇಶ್ ಶೆಟ್ಟಿಯವರು ದ್ವೀಪ ಬೆಳಗಿಸಿ ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಹೋಟೆಲ ಉದ್ಯಮಿ ಹಾಗು ಸಂಸ್ಥೆಯ ಅಧ್ಯಕ್ಷರು ಮಹೇಶ ಶೆಟ್ಟಿ ಸಂಸ್ಥೆಯ ಇಂದು ಈ ಭಾಗದಲ್ಲಿ ಎಲ್ಲ ಬ್ಯಾಂಕ್ ಗಳಿಗಿಂತಲು ಮುಂಚೂಣಿಯಲ್ಲಿದ್ದು ಇದಕ್ಕೆ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು ತಿಳಿಸಿದರು.ಹಾಗೂ ಸಾಕಷ್ಟು ಸೌಹಾರ್ದ ಹಾಗು ಸಹಕಾರಿ ಸಂಸ್ಥೆಯ ಅನುಭವ ಇರುವ ನಮ್ಮ ಎಲ್ಲಾ ನಿರ್ದೇಶಕರು ಈ ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು ಸಂದರ್ಭದಲ್ಲಿ ಅಭಿನಂದಿಸಿ ಶುಭಾಶಯಗಳು ಕೋರಿದರು.

ನೂರಕ್ಕು ಹೆಚ್ಚು ಸದಸ್ಯರು ಈ ಮಹಾಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರು ಪ್ರಕಾಶ ಗೋಡಬೊಲೆ ಅವರನ್ನ ಸ್ಮರಿಸಿ ಮೌನಾಚರಿಸಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಪ್ರಾರ್ಥನೆ ಮಾಡಲಾಯಿತು

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಈರೇಶ ಅಂಚಟಗೇರಿ,ವೀರಣ್ಣ ಯಳಲ್ಲಿ, ಶರಣಪ್ಪ ಸವಡಿ, ರವಿ ಶೆಟ್ಟಿ, ಮನೋಜ ಭಂಡಾರಿ ಡಾ ವಾಯ್ ಬಿ ಪಾಟೀಲ ಚಿರಾಗ ಭಂಡಾರಿ, ವ್ಯವಸ್ಥಾ ಪಕರಾದ ಎಸ್ ಎಮ್ ಜಮಾದಾರ ಉಪಸ್ಥಿತರಿ ದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.