ಧಾರವಾಡ –
ಧಾರವಾಡದ ಪ್ರತಿಷ್ಠಿತ ಧರಣಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಧಾರವಾಡದ ಈ ಒಂದು ಬ್ಯಾಂಕ್ ಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು.

2021-2025 ಸಾಲಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಪ್ರತಿಷ್ಠಿತ ಹೋಟೆಲ್ ಉದ್ಯಮಿ ರಾಜ್ಯ ಹೋಟೆಲ ಸಂಘದ ಉಪಾಧ್ಯಕ್ಷರು ಮಹೇಶ ಶೆಟ್ಟಿಯವರು ಪುನರಾಯ್ಕೆಯಾದರು.

NWKRTC ನಿರ್ದೇಶಕರು ಬಿಜೆಪಿ ಹಿರಿಯ ಮುಖಂಡರು ಪ್ರಕಾಶ ಗೋಡಬೊಲೆ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಸಹಕಾರ ಸಂಘದ ಉಪ ನಿಬಂಧಕರು ಮತ್ತು ಚುನಾವಣಾ ಅಧಿಕಾರಿ ಲಿಂಗರಾಜ ಪಾಟೀಲ ಅವರು ಅಧೀಕೃತ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನು ಸಂಸ್ಥೆಯ ನಿರ್ದೇಶಕರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ ಶುಭಾಶಯಗಳು ಕೋರಿದರು.

ಸಂಸ್ಥೆಯ ನಿರ್ದೇಶಕರಾದ ಈರೇಶ ಅಂಚಟಗೇರಿ ಡಾ ವಾಯ್ ಬಿ ಪಾಟೀಲ ವೀರಣ್ಣ ಯಳಲಿ , ರವೀಂದ್ರ ಶೆಟ್ಟಿ, ಶರಣಬಸಪ್ಪ ಸವಡಿ ಜಮಾದಾರ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.