ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ ಮತ್ತೆ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮುಂದುವರಿಕೆ

Suddi Sante Desk

ಧಾರವಾಡ –

ಮೂರು ದಿನಗಳ ಹಿಂದೆಯಷ್ಟೇ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರನ್ನು ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಇಂದು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಹಾವೇರಿಯ ಜಿಲ್ಲಾ ಪಂಚಾಯತ CEO ಆಗಿದ್ದ ರಮೇಶ ದೇಸಾಯಿ ಅವರನ್ನು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ಜಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರನ್ನು ಕಚೇರಿಯಲ್ಲಿ ಇಲಾಖೆಯ ಸಿಬ್ಬಂದಿ ಗಳು ಪ್ರೀತಿಯಿಂದ ಸನ್ಮಾನಿಸಿ ಬೀಳ್ಕೊಡಲಾಗಿತ್ತು.

ಇನ್ನೂ ಇತ್ತ ಹಾವೇರಿ ಯಿಂದ ಧಾರವಾಡ ಗೆ ಬಂದ ನೂತನ ಅಪರ ಆಯುಕ್ತರಾದ ರಮೇಶ ದೇಸಾಯಿ ಅವರನ್ನು ಸ್ವಾಗತಿಸಲಾಗಿತ್ತು.

ಇವೆಲ್ಲ ನಡೆದು ಮೂರು ದಿನಗಳಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ‌. ಈಗಷ್ಟೇ ಅಧಿಕಾರ ವಹಿಸಿಕೊಂಡ ರಮೇಶ ದೇಸಾಯಿ ಅವರನ್ನು ಮತ್ತೆ ಹಾವೇರಿ ಜಿಲ್ಲಾ ಪಂಚಾಯತ ಸಿಇಓ ಹುದ್ದೆಯಲ್ಲಿ ಇನ್ನೂ ಇತ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರನ್ನು ಮೊದಲಿದ್ದ ಹುದ್ದೆಯಲ್ಲಿ ಮುಂದುವರೆಸಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.