ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಮೃತ ದೇಸಾಯಿ ಭೂಮಿ ಪೂಜೆ ಮಾಡಿದರು.ಹೌದು ಕ್ಷೇತ್ರದ ಯಾದವಾಡ ಗ್ರಾಮದಲ್ಲಿ ಅಂದಾಜು ಮೊತ್ತ 1.7 ಕೋಟಿ ರೂಪಾಯಿ ಅನುದಾನ ದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಲಾ ಯಿತು.
2021-22ನೇ ಸಾಲಿನ ಎಸ್.ಸಿ.ಪಿ,ಎಸ್.ಐ.ಪಿ ಯೋಜನೆ ಯಡಿ ಅಂದಾಜು 20 ಲಕ್ಷ ರೂ ಅನುದಾನದಲ್ಲಿ ಯಾದ ವಾಡ ಗ್ರಾಮದ ಎಸ್. ಟಿ ಕಾಲೋನಿಯಲ್ಲಿ ಕಾಂಕ್ರೀಟ ರಸ್ತೆ ನಿರ್ಮಾಣ ಕಾಮಗಾರಿ.2021-22 ನೇ ಸಾಲಿನ 50-54 ಅಡಿ ಅಂದಾಜು 51 ಲಕ್ಷ ರೂ ಅನುದಾನದಲ್ಲಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಬೆಟಗೇರಿ ರಸ್ತೆಯಲ್ಲಿ ಬಸಯ್ಯ ಸಾಲಿ ಇವರ ಹೊಲದಿಂದ ಶಂಕರ ಬೆಟಗೇರಿ ಯವರ ಹೊಲದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು
ಜಿಲ್ಲಾ ಪಂಚಾಯತಿ ಅಂದಾಜು 99 ಲಕ್ಷ ರೂ ಅನುದಾನ ದಲ್ಲಿ ಧಾರವಾಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಲಜೀವನ ಮಿಷಿನ ಯೋಜನೆ ಅಡಿಯಲ್ಲಿ ಯಾದವಾಡ ಗ್ರಾಮದ ಮನೆ ಮನೆಗೆ ಗಂಗೆ ಕಾಮಗಾರಿ ಗೆ ಚಾಲನೆ ನೀಡಲಾಯಿತು.ನಂತರ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊವಿಡ್ ವಿರುದ್ಧ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ ಆಶಾ- ಅಂಗನವಾಡಿ ಕಾರ್ಯಕರ್ತೆ ಯರ,ಅರೋಗ್ಯ ಸಿಬ್ಬಂದಿಗಳು ಹಾಗೂ ಪಂಚಾಯತಿ ಸಿಬ್ಬಂದಿಗಳಿಗೆ ಪ್ರಸಂಶನಾ ಪತ್ರ ಹಾಗೂ ಸಹಾಯಧನ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತವನಪ್ಪ ಅಷ್ಟಗಿ,ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ್ ಪಾಟೀಲ್,ರುದ್ರಪ್ಪ ಆರಿವಾಳ, ನಾಗನ ಗೌಡ ಪಾಟೀಲ್, ಸಂಭಾಜಿ ಜಾದವ, ಪ್ರಭು ಕೇಶಕೊಂಡ, ಶಿವಾನಂದ್ ಬೆಂಡಿಗೇರಿ,ಮಂಜುನಾಥ್ ಬಂಡೆಪ್ಪ ನವರ್,ಗದಗಯ್ಯ ಹಿರೇಮಠ್, ಮಹಾಂತೇಶ ಗಳಗಿ, ಹನುಮಂತ ಕೊಯಪ್ಪ ನವರ, ಮಡವಾಳಿ ದಿಂಡಲಕೊಪ್ಪ, ಹುಸೇನ ಹಾವಗಾರ, ಮುತ್ತು ಹಿರೇಮಠ,ಕರೆಪ್ಪ ಹುಲಮನಿ,ಬಸು ಪಟ್ಟನ್ನವರ, ಆನಂದ ತಳವಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.