ಪಶ್ಚಿಮ ಬಂಗಾಳ –
ಬಲಗೈ ಬಂಟನ ವಿರುದ್ದ ಸ್ಪರ್ಧೆ ಮಾಡಿ ಆರಂಭ ದಿಂದಲೂ ಎದುರಾಳಿ ಮುನ್ನಡೆ ಸಾಧಿಸುತ್ತಾ ಬಂದಿದ್ದರೂ ಕೊನೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವನ್ನು ಸಾಧಿಸಿದ್ದಾರೆ.ಹೌದು ಇದು ಪಶ್ಚಿಮ ಬಂಗಾಲ ರಾಜ್ಯದ ನಂದಿಗ್ರಾಮದಲ್ಲಿನ ಇವತ್ತಿನ ಚುನಾವಣೆಯ ಫಲಿತಾಂಶದ ಚಿತ್ರಣ.ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತೆ ಗೆಲು ವು ಸಾಧಿಸಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತ ಏಣಿಕೆಯಲ್ಲಿ ಮಮತಾಗೆ ಹಿನ್ನಡೆ ಆಗಿತ್ತು, ಆದರೆ ಅಂತಿಮ ಸುತ್ತಿನಲ್ಲಿ ಮಮ ತಾ ಬ್ಯಾನರ್ಜಿಗೆ ಗೆಲುವಾಗಿದೆ.ನಂದಿಗ್ರಾಮ ಕ್ಷೇತ್ರದ ಲ್ಲಿ ಮಾಜಿ ಬಲಗೈ ಭಂಟ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದರು. ಆರಂಭದಿಂದಲೂ ಸುವೇಂದು ಅಧಿಕಾರಿಯೇ ಮುನ್ನಡೆ ಕಾಯ್ದುಕೊಂಡಿದ್ದರು, ಆದರೆ ಕೊನೆಯ ಎರಡು ಸುತ್ತುಗಳಲ್ಲಿ ಮುನ್ನಡೆಗೆ ಬಂದ ಮಮತಾ ಬ್ಯಾನರ್ಜಿ ಮುನ್ನಡೆಯನ್ನು ಗೆಲುವಾಗಿ ಪರಿವ ರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯಿಂದ ಸ್ಪರ್ಧಿ ಸಿದ್ದ ಸುವೇಂದು ಅಧಿಕಾರಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.ಇಡೀ ರಾಷ್ಟ್ರದ ಕಣ್ಣೇ ನಂದಿಗ್ರಾಮ ಕ್ಷೇತ್ರದ ಮೇಲಿತ್ತು.ಆದರೆ ಈಗ ಎಲ್ಲವೂ ಸ್ಪಷ್ಟವಾಗಿ ದ್ದು ಮಮತಾ ಬ್ಯಾನರ್ಜಿ 1900 ಮತಗಳ ಅಂತರ ದಿಂದ ಜಯಶಾಲಿಯಾಗಿದ್ದಾರೆ.ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಹಠಾತ್ತನೆ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಸೇರಿದರು.ನನಗೆ ಬೆನ್ನಿಗೆ ಚೂರಿ ಹಾಕಿದವನನ್ನು ಅವನ ಕ್ಷೇತ್ರದಲ್ಲಿ ಯೇ ಸೋಲಿಸುತ್ತೇನೆ ಎಂಬ ಪಣತೊಟ್ಟು ಅಖಾಡ ಕ್ಕಿಳಿದಿದ್ದ ಮಮತಾ ಕೊನೆಗೂ ಅಲ್ಪ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ.
ತಾವು ನಂದಿ ಗ್ರಾಮದಿಂದಲೇ ಚುನಾವಣೆ ಸ್ಪರ್ಧಿಸು ವುದಾಗಿ ಮಮತಾ ಘೋಷಿಸಿದರು.ಮಮತಾ ಅವ ರನ್ನು 50,000 ಮತಗಳ ಅಂತರದಿಂದ ಸೋಲಿಸು ತ್ತೇನೆ ಎಂದು ತೊಡೆ ತಟ್ಟಿ ಸುವೇಂದು ಅಧಿಕಾರಿ ಬಹಿರಂಗ ಸವಾಲು ಹಾಕಿದ್ದರು.ಅಮಿತ್ ಶಾ, ಜೆಪಿ ನಡ್ಡಾ, ಮೋದಿ ಇನ್ನೂ ಹಲವು ಬಿಜೆಪಿ ಅಗ್ರಪಂ ಥಿಯ ನಾಯಕರು ಮಮತಾ ವಿರುದ್ಧ ಶೋಗಳು ನಡೆಸಿದರು ಕೂಡಾ ಕಾಲಿಗೆ ಪೆಟ್ಟು ಬಿದ್ದು ಅದರಲ್ಲಿ ಯೇ ತಿರುಗಾಡಿ ಚುನಾವಣೆಯನ್ನು ಮುಗಿಸಿದ ಮಮತಾ ಬ್ಯಾನರ್ಜಿ ಹಿಂದೆ ತಮ್ಮ ಬಲಗೈ ಬಂಟರಾ ಗಿದ್ದ ಸುವೇಂದು ವಿರುದ್ಧ ಗೆದ್ದೇ ಬಿಟ್ಟಿದ್ದಾರೆ. ತಾವೊ ಬ್ಬ ಹಠವಾದಿ, ಛಲವಾದಿ ಎಂಬುದನ್ನು ಮಮತಾ ಈ ಮೂಲಕ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಅಲ್ಪ ಮತಗಳ ಅಂತರದಿಂದ ಈ ಒಂದು ಚುನಾವ ಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ