ಕುಂದಗೋಳ –
ST ಸಮಾವೇಶ ಯಶಸ್ಸಿಗೆ ಧಾರವಾಡ ಜಿಲ್ಲೆ ಸುತ್ತಾಡುತ್ತಿದ್ದಾರೆ ಮಣಿಕಂಠ ಶ್ಯಾಗೋಟಿ ಮತ್ತು ಟೀಮ್ – ಏಪ್ರೀಲ್ 13 ರಂದು ನಡೆಯಲಿದೆ ಬೃಹತ್ ಎಸ್ಪಿ ಸಮಾಜದ ಸಮಾವೇಶ
ಲೋಕಸಭಾ ಚುನಾವಣೆಯ ಅಖಾಡ ರಂಗೇ ರುತ್ತಿದೆ.ಇತ್ತ ಧಾರವಾಡ ಜಿಲ್ಲೆಯಲ್ಲೂ ಕೂಡಾ ಕದನ ಕಣ ನೆತ್ತಿ ಸುಡುವ ಬಿಸಿಲಿನಂತೆ ಕಾವೇರು ತ್ತಿದ್ದು ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪರ ಜಿಲ್ಲೆಯಲ್ಲಿ ಸಾಕಷ್ಟು ಗೆಲುವಿನ ತಂತ್ರಗಳು ಮುಂದುವರೆದಿದ್ದು ಇನ್ನೂ ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಏಪ್ರೀಲ್ 13 ರಂದು ಎಸ್ಪಿ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ.
ಈ ಒಂದು ಸಮಾವೇಶದ ಹಿನ್ನಲೆಯಲ್ಲಿ ಕಾರ್ಯಕ್ರಮ ಕುರಿತಂತೆ ಜಿಲ್ಲೆಯ ಎಸ್ಪಿ ಸಮಾಜದವರಿಗೆ ಬಿಜೆಪಿ ಯುವ ಮುಖಂಡ ಮಣಿಕಂಠ ಶ್ಯಾಗೋಟಿ ಯವರು ತಿಳಿಸಿಕೊಡು ತ್ತಾ ಜಿಲ್ಲೆಯಾಧ್ಯಂತ ತಿರುಗಾಡುತ್ತಿದ್ದಾರೆ.ಹೌದು ಒಂದು ಕಡೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಎಸ್ಪಿ ಸಮಾಜದವರಿಗೆ ಮಾಡಿರುವ ಕೆಲಸ ಕಾರ್ಯಗಳ ಕುರಿತಂತೆ ಮಾಹಿತಿಯನ್ನು ನೀಡುತ್ತಾ ತಿಳಿಸಿಕೊಡುತ್ತಿದ್ದಾರೆ
ಮಣಿಕಂಠ ಶ್ಯಾಗೋಟಿಯವರು.ಇತ್ತೀಚಿಗಷ್ಟೇ ರಾಜ್ಯ ಎಸ್ ಟಿ ಮೋರ್ಚಾ ಖಜಾಂಚಿಯಾಗಿ ನೇಮಕಗೊಂಡ ನಂತರ ಮತ್ತಷ್ಟು ಜವಾಬ್ದಾರಿ ಬಂದಿದ್ದು ಹೀಗಾಗಿ ತಮ್ಮ ಟೀಮ್ ಕಟ್ಟಿಕೊಂಡು ಪಕ್ಷದ ಸಂಘಟನೆಯೊಂದಿಗೆ ನೆಚ್ಚಿನ ಗುರುಗ ಳಾದ ಪ್ರಹ್ಲಾದ್ ಜೋಶಿಯವರನ್ನು ಗೆಲ್ಲಿಸಲು ಕಾಲಿಗೆ ಚಕ್ರವನ್ನು ಕಟ್ಟಿಕೊಂಡವರಂತೆ ತಿರುಗಾ ಡುತ್ತಿದ್ದಾರೆ.
ಈಗಾಗಲೇ ಕಲಘಟಗಿ ತಾಲ್ಲೂಕು ಪ್ರವಾಸವನ್ನು ಮುಗಿಸಿ ಸಧ್ಯ ಕುಂದಗೋಳ ವಿಧಾನಸಭಾ ಕ್ಷೆೇತ್ರದ ದೇವರ ಗುಡಿಹಾಳ ಜಿಲ್ಲಾ ಪಂಚಾ ಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ವಾಲ್ಮೀಕಿ ಸಮಾಜದ ಮುಖಂಡರ ಸಭೆಯನ್ನು ಮಾಡಿದರು ಎಸ್ ಟಿ ಸಮಾಜದ ಸಮಾವೇಶ ಮಾಡುವದರ ಕುರಿತು ಮಾಹಿತಿ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಕರೆದುಕೊಂಡು ಬರುವ ಕುರಿತಂತೆ ಚರ್ಚೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಲಕ್ಶ್ಮಣ ಮ್ಯಾಗಿನಮನಿ ರಾಜ್ಯ ಎಸ್ ಟಿ ಮೋರ್ಚಾ ಖಜಾಂಚಿಯಾದ ಮಣಿಕಂಠ ಶ್ಯಾಗೋಟಿ ಜಿಲ್ಲಾ ಪ್ರದಾನ ಕಾರ್ಯ ದರ್ಶಿ ಅಶೋಕ್ ಸೋಲಾರಗೊಪ್ಪ, ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಅಶೋಕ ಅಣ್ಣಿಗೇರಿ, S t ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅರ್ಜುನ ದಾಸರ, ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..