ಧಾರವಾಡ –
ವಿದ್ಯುತ್ ಕೆಲಸವನ್ನು ಮಾಡುತ್ತಿದ್ದ ಲೈನ್ ಮ್ಯಾನ್ ವೊಬ್ಬ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಾವಿಗೀಡಾ ದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡದ ಆಂಜನೇಯ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಖಾಸಗಿ ಲೇ ಔಟ್ ನಲ್ಲಿ ವಿದ್ಯುತ್ ಲೈನ್ ಹಾಕಿ ಜೋಡಣೆ ಮಾಡುವ ಸಮಯದಲ್ಲಿ ಈ ಒಂದು ಅವಘಡ ನಡೆದಿದ್ದು ಮಂಜು ಮಾದರ ಸಾವಿಗೀಡಾದ ಮೃತ ದುರ್ದೈವಿಯಾಗಿದ್ದಾನೆ.

ವಿಪರ್ಯಾಸವೆಂದರೆ ಮಂಜು ಮಾದರ ಧಾರವಾಡದ ಹೆಬ್ಬಳ್ಳಿ ಗ್ರಾಮದ ನಿವಾಸಿಯಾಗಿದ್ದು ಗುತ್ತಿಗೆ ಆಧಾರದ ಮೇಲೆ ಹೆಸ್ಕಾಂ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮೊದಲ ದಿನವೇ ಇಂದು ಕೆಲಸ ಆರಂಭಿಸಿದ್ದರಂತೆ. ಖಾಸಗಿ ಲೇ ಔಟ್ ನಲ್ಲಿ ಕಾಮಗಾರಿ ಮಾಡುವ ಸಮಯದಲ್ಲಿ ಅವಘಡ ನಡೆದಿದೆ. ಸ್ಥಳದಲ್ಲೇ ಮಂಜು ಸಾವಿಗೀಡಾಗೊದ್ದು ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.