ಧಾರವಾಡ –
ಇಲ್ಲಿಯ ಕೆಲಗೇರಿ ಗುಡ್ಡದಮಠ ಕಲ್ಯಾಣ ಮಂಟಪದ ಬಳಿಯ ಬೈಪಾಸ್ ರಸ್ತೆಯ ಕಚೇರಿಯಲ್ಲಿ ಕೆಲ ಹೊತ್ತು ಆತಂಕ ಸೃಷ್ಟಿಸಿದ್ದ ವಾತಾವರಣ ಕಂಡು ಬಂದಿತು. ಸುಮಾರು ಎಂಟು ಅಡಿಯ ಕೇರಿ ಹಾವನ್ನು ಸ್ನೇಕ್ ಮಂಜುನಾಥ ಭಜಂತ್ರಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬಂದರು.

ಮಂಗಳವಾರ ಮಧ್ಯಾಹ್ನ 3 ರ ಹೊತ್ತಿಗೆ ಬೈಪಾಸ್ ಕಚೇರಿ ಬಳಿ ತನ್ನ ಪಾಡಿಗೆ ಹೊರಟಿದ್ದ ಈ ಹಾವು ಜನರ ಗದ್ದಲಕ್ಕೆ ಕಚೇರಿಯ ಒಳಗೆ ಹೊಕ್ಕಿತು. ಕಚೇರಿಯ ಬಾಗಿಲು ಮುಚ್ಚಿದ್ದ ಕಾರಣ ಗೋಡೆ ಏರಿ ಟ್ಯೂಬಲೈಟ್ ಮೇಲೆ ಹೋಗಿ ಕುಳಿತುಕೊಂಡಿತ್ತು.

ಅಲ್ಲಿಯೇ ಇದ್ದ ಕೆಲವರು ಹಾವು ಹೊಡೆಯಲು ಸಹ ಸಿದ್ಧರಾಗಿದ್ದರು. ಅಷ್ಟರಲ್ಲಿ ಬೈಪಾಸ್ ರಸ್ತೆಯ ಸಿಬ್ಬಂದಿ ಆಗಮಿಸಿ ಸ್ನೇಕ್ ಮಂಜುನಾಥ ಅವರನ್ನು ಕರೆಯಿಸಿ ಸುರಕ್ಷಿತವಾಗಿ ಅದನ್ನು ಕಾಡಿಗೆ ಬಿಟ್ಟು ಬರುವ ವ್ಯವಸ್ಥೆ ಮಾಡಿದರು.ಸುಮಾರು ಒಂದು ಗಂಟೆ ಕಾಲ ಏರಿಸುರಿನಿಂದ ಕುಳಿತಿದ್ದ ಹಾವು ನೋಡಿ ಸುತ್ತಲಿನವರಿಗೆ ತೀವ್ರ ಆತಂಕ ಉಂಟಾಗಿತ್ತು.

ಅದರಲ್ಲಿ ಕೆಲವೊಬ್ಬರು ಕಲ್ಲು-ಕಟ್ಟಿಗೆಯಿಂದ ಹಿಂಸಿಸುತ್ತಿದ್ದರು. ಕೇರಿ ಹಾವು ಕಚ್ಚುವುದಿಲ್ಲ. ಯಾವುದೇ ಕಾರಣಕ್ಕೆ ಭಯ ಪಡಬೇಡಿ.
ಯಾವುದೇ ಹಾವು ಕಂಡು ಬಂದಾಗ ಏಕಾಏಕಿ ಅದನ್ನು ಹಿಂಸೆ ಮಾಡುವುದು ಅಥವಾ ಕೊಲ್ಲು ವುದು ಬೇಡ. ಎಲ್ಲ ಹಾವುಗಳು ವಿಷಕಾರಿಯಲ್ಲ. ಮನುಷ್ಯನಿಗೆ ಉಪದ್ರವಿ ಹೀಗಾಗಿ ಆದ್ದರಿಂದ ಹಾವುಗಳು ಕಂಡು ಬಂದರೆ ತಮಗೆ ದೂರವಾಣಿ ಕರೆ ಮಾಡಿ ಎಂದು ಸ್ನೇಕ್ ಮಂಜು ಮನವಿ ಮಾಡಿದರು.