ಹುಬ್ಬಳ್ಳಿ
ಏಳು ವರುಷದ ಬಾಲಕನ ಶವವೊಂದು ಕೆರೆಯಲ್ಲಿ ಪತ್ತೆಯಾದ ಘಟನೆ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆರೆಯಲ್ಲಿ ಸಾಗರ ಪೂಜಾರ ಎಂಬ ಬಾಲಕನ ಶವ ಪತ್ತೆಯಾಗಿದೆ.

ನೀರು ತರಲು ಕೆರೆಯಲ್ಲಿ ಬಿದ್ದು ಸಾವಿಗೀಡಾ ಗಿದ್ದಾನೋ ಅಥವಾ ಬೇರೆ ಏನಾದರೂ ಘಟನೆ ನಡೆದಿದೆಯೋ ಎಂಬ ಕುರಿತಂತೆ ಗೊಂದಲಗಳು ಉಂಟಾಗಿವೆ.ಕೆರೆಯಲ್ಲಿ ಬಾಲಕ ಶವ ತೇಲಾಡುತ್ತಿದ್ದಾಗ ನೋಡಿದ ಗ್ರಾಮಸ್ಥರು ನಂತರ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿ ಗ್ರಾಮಕ್ಕೆ ಆಗಮಿಸಿದ ನಂತರ ಬಾಲಕನ ಶವವನ್ನು ಕೆರೆಯಿಂದ ಹೊರತಗೆಯಲಾಯಿತು.

ಶವವನ್ನು ಹೊರಗೆ ತಗೆಯುತ್ತಿದ್ದಂತೆ ಬಾಲಕನ ಬಾಯಲ್ಲಿ ಬುರುಗ ಬಂದಿದೆ ಹೀಗಾಗಿ ಇದರಿಂದ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಇನ್ನೂ ಬೆಳಿಗ್ಗೆಯಿಂದಲೇ ಬಾಲಕ ಮನೆಯಿಂದ ಹೋಗಿದ್ದನಂತೆ ಮಧ್ಯಾಹ್ನ ಶವವಾಗಿ ಗ್ರಾಮದ ಕೆರೆಯಲ್ಲಿ ಸಾಗರ ಪತ್ತೆಯಾಗಿದ್ದಾನೆ.

ಸಾಗರ ಸಾವಿನಿಂದಾಗಿ ಹಲವು ಅನುಮಾನಗಳು ಹುಟ್ಟುಕೊಂಡಿದ್ದು ವಿಷಯ ತಿಳಿದ ಕುಂದಗೋಳ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
